Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.02.2026
Share:

By Village Missionary Movement

Friday, 27-Feb-2026

ಧೈನಂದಿನ ಧ್ಯಾನ(Kannada) – 27.02.2026

 

ನನ್ನಿಂದ ಬದಲಾವಣೆ 

 

"ಅವನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ;..." - ಜ್ಞಾನೋಕ್ತಿ 23:7

 

ಒಂದು ಬೋಧಕರು ಭಾನುವಾರ ಬೆಳಗಿನ ಆರಾಧನೆಯಲ್ಲಿ ಪ್ರಸಂಗ ಮಾಡುವುದಕ್ಕಾಗಿ ಸಂದೇಶವನ್ನು ಸಿದ್ಧಪಡಿಸುತ್ತಿದ್ದರು. ಆ ಸಮಯದಲ್ಲಿ, ಅವರ ಚಿಕ್ಕಮಗ ಅವರನ್ನು ತೊಂದರೆಗೊಳಿಸುತ್ತಲೇ ಇದ್ದನು. ಮಗನಿಗೆ ಒಂದು ಕೆಲಸ ಕೊಟ್ಟು ಅವನನ್ನು ಕೂರಿಸಿದರೆ, ತನ್ನ ಕೆಲಸವನ್ನು ಮಾಡಿ ಮುಗಿಸಲು ಸಾಧ್ಯ ಎಂದು ಬೋಧಕರು ಭಾವಿಸಿದರು. ಅವರ ಪಕ್ಕದ ಮೇಜಿನ ಮೇಲೆ ಒಂದು ವಿಶ್ವ ನಕ್ಷೆ ಇತ್ತು, ಅದು ಅವರ ಕಣ್ಣಿಗೆ ಬಿತ್ತು. ಅವರಿಗೆ ಒಂದು ಐಡಿಯಾ ಬಂತು! ಅವರು ಅದನ್ನು ತೆಗೆದುಕೊಂಡು, ಅದನ್ನು ವಿವಿಧ ಆಕಾರಗಳಲ್ಲಿ ಕತ್ತರಿಸಿ, ಒಂದು ಆ ಪೆಟ್ಟಿಗೆಯಲ್ಲಿ ತುಂಡುಗಳನ್ನು ಇರಿಸಿ, ಅವನಿಗೆ ಕೊಟ್ಟರು. ತಮ್ಮ, ಇದರಲ್ಲಿ ಇರುವ ಎಲ್ಲಾ ತುಣುಕುಗಳನ್ನು ಸರಿಯಾಗಿ ಸೇರಿಸಿ ಮತ್ತೆ ಸಂಪೂರ್ಣ ವಿಶ್ವ ನಕ್ಷೆಯನ್ನು ತೆಗೆದುಕೊಂಡು ಬಾ ಎಂದರು. ಬೋಧಕರು ಇವನು ಈ ಚಿತ್ರವನ್ನು ಸರಿಯಾಗಿ ಜೋಡಿಸುವ ಮೊದಲು, ನಾನು ನನ್ನ ಸಂದೇಶದ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತೇನೆ ಎಂದು ತನ್ನಷ್ಟಕ್ಕೆ ತಾನೇ ಯೋಚಿಸಿದರು.

 

ಸ್ವಲ್ಪವೂ ವಿಳಂಬವಿಲ್ಲದೆ, ಹುಡುಗ ಅದನ್ನು ಸರಿಯಾಗಿ ಹಾಕಿ ಮೂರು ನಿಮಿಷಗಳಲ್ಲಿ ತನ್ನ ತಂದೆಗೆ ತೋರಿಸಿದನು. ಒಂದು ಕಡೆ ನನ್ನ ಮಗನಿಗೆ ಇಷ್ಟೊಂದು ಬುದ್ಧಿವಂತಿಕೆ ಇದೆಯಲ್ಲಾ ಎಂದು ಬೋಧಕರು ಸಂತೋಷಪಟ್ಟರು. ಇನ್ನೊಂದು ಕಡೆ ತನ್ನ ಕೆಲಸ ಇನ್ನೂ ಮುಗಿದಿಲ್ಲವಲ್ಲಾ ಎಂಬ ಚಿಂತೆ. ಅವರು ಹತ್ತಿರದಲ್ಲಿ ನಿಂತಿದ್ದ ತನ್ನ ಮಗನನ್ನು ನೋಡಿ, ಇದನ್ನು ಇಷ್ಟು ಬೇಗ ಸೇರಿಸಲು ಹೇಗೆ ಸಾಧ್ಯವಾಯಿತು? ಎಂದು ಕೇಳಿದರು. ಅದೇನು ದೊಡ್ಡ ವಿಷಯವಲ್ಲ ಡ್ಯಾಡಿ, ಚಿತ್ರದ ಹಿಂದೆ ಒಬ್ಬ ಮನುಷ್ಯನ ಚಿತ್ರವಿತ್ತು. ಆ ಮನುಷ್ಯನನ್ನು ಸರಿಯಾಗಿ ಜೋಡಿಸಿದೆ ವಿಶ್ವ ನಕ್ಷೆ ಸರಿಯಾಗಿ ಬಂತು ಅಂದನು. ಬೋಧಕರಿಗೆ ಆಹ್ಲಾದಕರವಾಗಿ ಆಶ್ಚರ್ಯ. ದೇವರು ತನ್ನ ಮಗನ ಮೂಲಕ ಅವರೊಂದಿಗೆ ಮಾತನಾಡಿಬಿಟ್ಟರೆಂದು ಗ್ರಹಿಸಿದರು. ಮರುದಿನ ಸಭೆಯಲ್ಲಿ ಪ್ರಸಂಗ ಮಾಡಿದರು ಮನುಷ್ಯನೇ, ಮೊದಲನೆಯದಾಗಿ ನಮ್ಮನ್ನು ವೈಯಕ್ತಿಕವಾಗಿ ಸರಿಪಡಿಸಿಕೊಂಡಾಗ, ನಮ್ಮ ಸುತ್ತಲಿನ ಪ್ರಪಂಚವು ಸ್ವಯಂಚಾಲಿತವಾಗಿ ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ ಎಂದು ಅವರು ಸಭೆಯಲ್ಲಿ ಬೋಧಿಸಿದರು.

 

ಸತ್ಯವೇದವು ಈ ರೀತಿಯಾಗಿ ಹೇಳುತ್ತದೆ, "ಅವನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ"(ಜ್ಞಾನೋಕ್ತಿ 23:7). "ಬಾಯ ಫಲವಾಗಿ ಮನುಷ್ಯನು ಸುಖವನ್ನನುಭವಿಸುವನು" (ಜ್ಞಾನೋಕ್ತಿ 13:2). ನಾವು ಅನೇಕ ಬಾರಿ, ನಮ್ಮ ಪರಿಸ್ಥಿತಿಗಳನ್ನು ಮತ್ತು ನಮ್ಮ ಸುತ್ತಲಿನ ಜನರನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಹೊರಗಿನ ಸಮಸ್ಯೆಗೆ ಉತ್ತರವನ್ನು ಹುಡುಕುತ್ತೇವೆ. ಆದರೆ ನಮಗೆ ಬೇಕಾದ ಪರಿಹಾರವು ನಮ್ಮೊಳಗೇ ಇದೆ, ಅದು ನಮ್ಮನ್ನು ಬದಲಾಯಿಸಿಕೊಳ್ಳುವಲ್ಲೇ ಇರುತ್ತದೆ. ಮುಖ್ಯವಾಗಿ, ನಾವು ನಮ್ಮ ಮನಸ್ಸಿನ ಆಲೋಚನೆಗಳನ್ನು ಮತ್ತು ನಮ್ಮ ಬಾಯಿಯ ಮಾತುಗಳನ್ನು ಸತ್ಯವೇದದ ಪ್ರಕಾರ ಹೊಂದಿಸಿಕೊಂಡರೆ, ತಲೆಕೆಳಗಾದ ಜೀವನವೂ ಸಹ ಸುಗಮ ಮತ್ತು ಉತ್ತಮವಾಗುತ್ತದೆ. ದೇವರ ದಯೆಯೊಂದಿಗೆ ಪ್ರಯತ್ನಿಸೋಣವಾ? 

 

ಪ್ರಾರ್ಥನಾ ಅಂಶ:

ಎಲ್ಲಾ ತಾಲೂಕುಗಳಲ್ಲಿ ಮಕ್ಕಳ ಶಿಬಿರಗಳನ್ನು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482