Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.02.2026
Share:

By Village Missionary Movement

Thursday, 26-Feb-2026

ಧೈನಂದಿನ ಧ್ಯಾನ(Kannada) – 26.02.2026

 

ಸದಾವಕಾಶವನ್ನು ಕಳಕೊಳ್ಳಬೇಡ

 

"...ನಿಶ್ಚಯವಾಗಿ ಈ ಸ್ಥಳದಲ್ಲಿ ಕರ್ತನು ಇದ್ದಾನೆ. ಇದನ್ನು ನಾನು ಅರಿಯಲಿಲ್ಲ ಅಂದನು." - ಆದಿಕಾಂಡ. 28: 16

 

25 ವರ್ಷಗಳ ಹಿಂದೆ, ನಾನು ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದೆ. ಅದು ಬಹಳ ಜನರು ವಾಸಿಸುತ್ತಿದ್ದ ಬಹು ಸಮೃದ್ಧವಾದ ಹಳ್ಳಿಯಾಗಿತ್ತು. ಆದರೆ ಅವರು ಹೆಚ್ಚಿನ ವಿದ್ಯಾಭ್ಯಾಸವಿಲ್ಲದವರಾಗಿದ್ದರು. ಅಲ್ಲಿನ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಲು ದೇವರು ನನ್ನ ಹೃದಯದಲ್ಲಿ ಮಾತನಾಡಿದರೂ, ನಾನು ಅದನ್ನು ನಿರ್ಲಕ್ಷಿಸಿಬಿಟ್ಟೆ. ಈ ಸೇವೆಗೆ ಬಂದ ನಂತರವೇ ಅನೇಕ ಮಕ್ಕಳು ಟ್ಯೂಷನ್ ಮೂಲಕ ದೇವರನ್ನು ತಿಳಿದುಕೊಳ್ಳುತ್ತಿದ್ದಾರೆಂದು ನಾನು ಕಣ್ಣಾರೆ ನೋಡಿದೆ. ಆತ್ಮಗಳನ್ನು ಗೆಲ್ಲುವ ಒಳ್ಳೆಯ ಅವಕಾಶವನ್ನು ನಾನು ಕಳೆದುಕೊಂಡಿದ್ದಕ್ಕೆ ನನಗೆ ತುಂಬಾ ಬೇಸರವಾಯಿತು. ಹೌದು, ನಮಗೆ ಬರುವ ಅವಕಾಶಗಳು ಮತ್ತು ಸಂದರ್ಭಗಳನ್ನು ನಾವು ಎಂದಿಗೂ ಕಳೆದುಕೊಳ್ಳದಂತೆ ನಾವು ಜಾಗರೂಕರಾಗಿರಬೇಕು.

 

ಸತ್ಯವೇದದಲ್ಲಿ, ಇದುವೇ ಯಾಕೋಬ ಎಂಬ ಭಕ್ತನ ಅನುಭವವೂ ಆಗಿತ್ತು. ಯಾಕೋಬನು ತಾನು ಅಬ್ರಹಾಮನ ಮೊಮ್ಮಗನೆಂಬುದನ್ನೂ, ಅಬ್ರಹಾಮನಿಗೆ ನೀಡಿದ ವಾಗ್ದಾನವನ್ನೂ ಇಷ್ಟೊಂದು ಅವಕಾಶಗಳು ನಮಗಿದೆ ಎಂಬುದನ್ನೂ ನೆನೆಪಿನಲ್ಲಿಟ್ಟುಕೊಳ್ಳಲಿಲ್ಲ. ಜೀವನದಲ್ಲಿ ಎದುರಿಸಿದ ಸಮಸ್ಯೆಗಳಿಂದಾಗಿ ಅರಾಮಿನ ಕಡೆಗೆ ಪ್ರಯಾಣ ಬೆಳೆಸಿದನು. ಸೂರ್ಯ ಮುಳುಗಿದ್ದರಿಂದ ಅಲ್ಲೇ ನಿದ್ರೆ ಮಾಡಲು, ಒಂದು ಕಲ್ಲು ತೆಗೆದುಕೊಂಡು ಅದನ್ನು ತನ್ನ ತಲೆಯ ಕೆಳಗೆ ಇಟ್ಟುಕೊಂಡು ಮಲಗಿದರು. ಅಲ್ಲಿ, ಕನಸಿನಲ್ಲಿ, ಕರ್ತನು ಯಾಕೋಬನಿಗೆ ಕಾಣಿಸಿಕೊಂಡು, “ನಿನ್ನಲ್ಲಿ ಭೂಮಿಯ ಎಲ್ಲಾ ಜನಾಂಗಗಳು ಆಶೀರ್ವದಿಸಲ್ಪಡುವವು (ಆದಿ. 12:3) ಎಂದು ಅಬ್ರಹಾಮನಿಗೆ ನೀಡಿದ ಅದೇ ವಾಗ್ದಾನವನ್ನು ಹೇಳಿದರು. ನೀನು ಹೋಗುವಲ್ಲೆಲ್ಲಾ ನಿನ್ನೊಂದಿಗೆ ಇರುತ್ತೇನೆ ಎಂದೂ ವಾಗ್ದಾನ ಮಾಡಿದರು. ಯಾಕೋಬನು ಬೆಳಿಗ್ಗೆ ಎದ್ದಾಗ, “ನಿಶ್ಚಯವಾಗಿ ಈ ಸ್ಥಳದಲ್ಲಿ ಕರ್ತನು ಇದ್ದಾನೆ. ಇದನ್ನು ನಾನು ಅರಿಯಲಿಲ್ಲ ಅಂದನು. ಯೆರೆಮಿಯ 23:24 ರಲ್ಲಿ, “ನಾನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ವ್ಯಾಪಿಸಿರುವವನಲ್ಲವೋ ಎಂದು ಕರ್ತನು ಅನ್ನುತ್ತಾನೆ. ನಾವು ಸಹ ಸಾಮಾನ್ಯ ಸ್ಥಳಗಳಲ್ಲಿ ದೇವರ ಪ್ರಸನ್ನತೆಯನ್ನು ಗ್ರಹಿಸಬಹುದು. ನಾವು ಆತನ ಪ್ರಸನ್ನತೆಯನ್ನು ವೈಯಕ್ತಿಕವಾಗಿ ಅನುಭವಿಸಿದಾಗ, ನಮ್ಮ ಹಿಂದಿನ ದುಃಖಗಳು ಏನೂ ಅಲ್ಲ ಎಂದು ತೋರುತ್ತದೆ. 

 

ಪ್ರಿಯರೇ, ನಮ್ಮ ಜೀವನದಲ್ಲಿ ದೇವರ ಚಿತ್ತವನ್ನು ತಿಳಿಯಲು ನಮ್ಮ ಕಣ್ಣುಗಳು ಮತ್ತು ಕಿವಿಗಳು ತೆರೆದಿವೆಯೇ? 50,000 ಹಳ್ಳಿಗಳಲ್ಲಿ 1 ಕೋಟಿ ಆತ್ಮಗಳಿಗೆ ಸುವಾರ್ತೆ ಸಾರುವ ಯೋಜನೆಯನ್ನು ದೇವರು ನಮಗೆ ನೀಡಿದ್ದಾರೆ. ನಾವು ಯೇಸು ಕ್ರಿಸ್ತನ ಕುರಿತಾದ ಶುಭವಾರ್ತೆಯನ್ನು ಈ ಜಗತ್ತಿಗೆ ನಾವು ಉಡುಗೊರೆಯಾಗಿ ಕೊಡುವಾಗ, ಭೂಮಿಯಲ್ಲಿನ ವಂಶಗಳೆಲ್ಲಾ ನಮ್ಮಲ್ಲಿ ಆಶೀರ್ವದಿಸಲ್ಪಡುತ್ತವೆ. ದೇವರ ಪ್ರಸನ್ನತೆಯನ್ನು ಅನುಭವಿಸಿದ ನಾವು, ದೇವರ ಚಿತ್ತವನ್ನು ಮಾಡಲು ನಮ್ಮನ್ನು ಒಪ್ಪಿಸಿಕೊಡೋಣವಾ? ಆಮೆನ್. 

- Mrs. ಬ್ಯೂಲಾ 

 

ಪ್ರಾರ್ಥನಾ ಅಂಶ:

ಕಣ್ಮಣಿಮಕ್ಕಳು ಯೇಸುವಿಗೆ ಎಂಬ ಪ್ರಾರ್ಥನಾ ಯೋಜನೆಯಲ್ಲಿ ಸೇರಿರುವ ಮಕ್ಕಳು ಕ್ರಿಸ್ತನಿಗಾಗಿ ಎದ್ದೇಳು ವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet