Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.02.2026
Share:

By Village Missionary Movement

Wednesday, 25-Feb-2026

ಧೈನಂದಿನ ಧ್ಯಾನ(Kannada) – 25.02.2026

 

ವಿಚಿತ್ರವಾಗಿ

 

"ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ..." - ಕೀರ್ತನೆ 139:14

 

ಒಬ್ಬ ರೈತ ಭೂಮಿಯನ್ನು ಉಳುಮೆ ಮಾಡಿ, ಹದಗೊಳಿಸಿ, ಬೀಜಗಳನ್ನು ಚೆಲ್ಲಿ, ಅದಕ್ಕೆ ನೀರು ಹಾಯಿಸಿ ನಂತರ ಕೊಯ್ಲು ನೋಡಲು ಕಾಯುತ್ತಿದ್ದಾರೆ. ಮಣ್ಣಿನಲ್ಲಿರುವ ಬೀಜದೊಳಗೆ ಕ್ರಿಯೆ ನಡೆಯುತ್ತದೆ. ಸಣ್ಣ ಬೀಜವು ಸಸ್ಯವಾಗುತ್ತದೆ, ನಂತರ ದೊಡ್ಡ ಮರವಾಗುತ್ತದೆ, ಹೂವರಳಿ ಕಾಯಿಬಿಟ್ಟು ಹಣ್ಣಾಗಿ ಫಲ ನೀಡುತ್ತದೆ. ದೇವರ ಈ ಕಾರ್ಯಗಳು ಆಶ್ಚರ್ಯಕರವಾದದ್ದು. ದೇವರೇ ಅದನ್ನು ಬೆಳೆಯುವಂತೆ ಮಾಡುತ್ತಾರೆ. ಹಸಿರು ಹುಲ್ಲನ್ನು ತಿನ್ನುವ ಹಸು ಮಾನವರಿಗೆ ಪೋಷಕಾಂಶಗಳಿಂದ ತುಂಬಿರುವ ಬಿಳಿ ಹಾಲನ್ನು ನೀಡುತ್ತದೆ. ಇದು ದೇವರ ಅದ್ಭುತ ಕಾರ್ಯ ಎಂದು ನಾವು ಎಂದಾದರೂ ಭಾವಿಸಿದ್ದೇವೆಯೇ? ಇಲ್ಲ. ವಿಚಿತ್ರವಾಗಿ ರಚಿಸಲ್ಪಟ್ಟಿದ್ದೇವೆ. ಕರ್ತನ ಕ್ರಿಯೆಗಳು ಅದ್ಭುತವಾಗಿವೆ. ನಮ್ಮ ಹೃದಯವು ನಾನು ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ ಎಂದು ಎಂದಾದರೂ ಸ್ವಲ್ಪ ತನ್ನ ಓಟವನ್ನು ನಿಲ್ಲಿಸಿದೆಯೇ? ಹಾಗೆ ನಿಲ್ಲಿಸಿದರೆ, ನಾವು ಬದುಕಲು ಸಾಧ್ಯವೇ? ನಮ್ಮ ದೇವರ ಕಾರ್ಯಗಳು ಎಷ್ಟು ಅದ್ಭುತ! ನಮ್ಮ ಹೃದಯವನ್ನು ಆಳುತ್ತಾ ಕಾಪಾಡುತ್ತಾ ಬರುತ್ತಿರುವ ನಮ್ಮ ತಂದೆಗೆ ಪ್ರತಿ ನಿಮಿಷವೂ ಕೃತಜ್ಞತೆ ಹೇಳಬೇಕು.

 

ನಾವು ವಾಹನಗಳನ್ನು ಉಪಯೋಗಿಸುತ್ತೇವೆ. ವಾಹನ ಎಷ್ಟೇ ದುಬಾರಿಯಾಗಿದ್ದರೂ, ಅದನ್ನು ಕೆಲವು ಗಂಟೆಗಳ ಕಾಲ ಮಾತ್ರವೇ ಸತತವಾಗಿ ಓಡಿಸಲು ಸಾಧ್ಯ. ನಂತರ ಅದನ್ನು ನಿಲ್ಲಿಸಿ ಇಂಧನ ತುಂಬಿಸಿ, ವಿಶ್ರಾಂತಿ ಕೊಟ್ಟು ನಂತರವೇ ಸತತವಾಗಿ ಓಡಿಸಲು ಸಾಧ್ಯ. ಆದರೆ ನೋಡಿ, ಒಂಭೈನೂರ ಅರುವತ್ತೊಂಭತ್ತು ವರುಷ ಮೆತೂಷೆಲಹನ ಹೃದಯವನ್ನು ತಡೆಯಿಲ್ಲದೆ ಬಡಿಯುವಂತೆ ಮಾಡಿ ಕಾಪಾಡುತ್ತಾ ಬಂದರೇ (ಆದಿ. 5:27). ಅದಕ್ಕಾಗಿಯೇ ಕೀರ್ತನೆಗಾರನು ನನ್ನನ್ನು ವಿಚಿತ್ರವಾಗಿ ಅದ್ಭುತವಾಗಿ ರಚಿಸಿದ್ದೀರಲ್ಲಾ ಎಂದು ಹೇಳುತ್ತಾರೆ. 

 

ನಮಗೆ ಆಪತ್ತು ಸಂಭವಿಸುವಾಗ, ನಾವು ಅಜಾಗರೂಕರಾಗಿ ಇರುವುದಿಲ್ಲ. ಒಂದು ಕ್ಷಣದಲ್ಲಿ, ಮೆದುಳು ಗಮನಿಸುತ್ತದೆ ಮತ್ತು ಕಣ್ಣುಗಳು ನೋಡುತ್ತವೆ, ಕಾಲುಗಳು ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ, ಬಾಯಿ "ಯೇಸುವೇ" ಎಂದು ಕೂಗುತ್ತಾ ದೇವರ ಸಹಾಯವನ್ನು ಹುಡುಕುತ್ತದೆ ಮತ್ತು ಕೈಗಳು ಹಾನಿಯನ್ನು ತಡೆದು ನಿಲ್ಲಿಸಲು ಪ್ರಯತ್ನಿಸುತ್ತದೆ. ನಮ್ಮ ಇಡೀ ದೇಹವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಿ. ಈ ಅದ್ಭುತ ಸ್ವಯಂಪ್ರೇರಿತ ಕ್ರಿಯೆಗಳನ್ನು ಮಾಡಲು ನಮಗೆ ಪ್ರಜ್ಞೆಯನ್ನು ಯಾರು ನೀಡಿದರು? ಕರ್ತನೇ. ಅವರೇ ನಮ್ಮ ಪ್ರತಿಯೊಂದು ಅಂಗಾಗಗಳನ್ನು ಕಾಪಾಡುತ್ತಾರೆ. ಶಿಲುಬೆಯಲ್ಲಿ ತಮ್ಮ ಶರೀರವನ್ನು ಜಜ್ಜಲ್ಪಡಲು ನೀಡಿದ ದೇವರನ್ನು ಸ್ತುತಿಸೋಣ. ನಮ್ಮ ಅಂಗಗಳು ಒಟ್ಟಾಗಿ ಸೇರಿ ಕೆಲಸ ಮಾಡುವ ಹಾಗೆ, ವಿಶ್ವಾಸಿಗಳು ಮತ್ತು ಸೇವಕರು ಒಟ್ಟಾಗಿ ಸೇರಿ ಕಾರ್ಯ ನಿರ್ವಹಿಸುವಾಗ, ಕರ್ತನು ನಮಗೆ ನೀಡಿರುವ ದರ್ಶನವನ್ನು ಮತ್ತು ಯೋಜನೆಯನ್ನು ಸರಿಯಾಗಿ ಪೂರ್ಣಗೊಳಿಸಲು ದೇವರೇ ನಮಗೆ ಕೃಪೆಯನ್ನು ನೀಡಲಿ. ಗೆಲುವು ಖಚಿತ ಎಂದು ನಾವು ನಂಬೋಣ.

- I. ಜಯಪಾಲ್ 

 

ಪ್ರಾರ್ಥನಾ ಅಂಶ:

ಕಣ್ಮಣಿ ಮಕ್ಕಳು ಯೇಸುವಿಗೆ ಎಂಬ ಪ್ರಾರ್ಥನಾ ಯೋಜನೆಯಲ್ಲಿ ಸೇರಿರುವ ಮಕ್ಕಳ ಮುಂದಿನ ಭವಿಷ್ಯವು ಆಶೀರ್ವಾದವಾಗಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş