Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.02.2026
Share:

By Village Missionary Movement

Tuesday, 24-Feb-2026

ಧೈನಂದಿನ ಧ್ಯಾನ(Kannada) – 24.02.2026

 

ಕರ್ತನಲ್ಲಿ ಬಲಗೊಳ್ಳಿರಿ

 

“...ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು." - 1 ಸಮುವೇಲ 30:6

 

ನಮ್ಮ ದೈನಂದಿನ ಜೀವನದಲ್ಲಿ ಮುಂದಿನ ಸೆಕೆಂಡ್ ಏನಾಗುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ದೇವರ ಪ್ರೀತಿ ಮತ್ತು ಕರುಣೆ ಇಲ್ಲದೆ ನಾವು ಒಂದು ಸೆಕೆಂಡ್ ಕೂಡ ಬದುಕಲು ಸಾಧ್ಯವಿಲ್ಲ. ಇಂತಹ ಜಗತ್ತಿನಲ್ಲಿ, ನಮ್ಮ ದೈನಂದಿನ ಜೀವನದಲ್ಲಿ ನಮ್ಮನ್ನು ಆಯಾಸಗೊಳಿಸುವ ಅನೇಕ ಜನರಿದ್ದಾರೆ. ಕೆಲವರು ಮಾತ್ರ ನಮ್ಮನ್ನು ಪ್ರೋತ್ಸಾಹಿಸುತ್ತಾರೆ.

 

ಅರಸನಾದ ದಾವೀದನು ಕುರುಬನಾಗಿದ್ದ ಸಮಯದಲ್ಲಿ ದೇವರೊಂದಿಗೆ ಹತ್ತಿರವಾದ ಸಂಬಂಧವನ್ನು ಹೊಂದಿದ್ದರು. ಕುರಿಗಳನ್ನು ಮೇಯಿಸುವಾಗ, ಅವರ ಕೈಯಲ್ಲಿ ಸಂಗೀತ ವಾದ್ಯ (ವೀಣೆ) ಇತ್ತು. ಅವರು ತನ್ನ ಸಂಗೀತ ವಾದ್ಯದಿಂದ ದೇವರನ್ನು ಸ್ತುತಿಸುವ ಮೂಲಕ ದೇವರ ಸಾನ್ನಿಧ್ಯವನ್ನು ಅನುಭವಿಸುತ್ತಿದ್ದರು. ಅದು ಕುರುಬನಾದ ದಾವೀದನಿಗೆ ಅನೇಕ ಕೀರ್ತನೆಗಳನ್ನು ರಚಿಸಲು ಸಹಾಯ ಮಾಡಿತು. ದೇವರ ಮೇಲಿನ ನಂಬಿಕೆಯಿಂದ ದುಷ್ಟ ಗೊಲ್ಯಾತನನ್ನು ಕೊಂದರು. ದಾವೀದನು ಗೊಲ್ಯಾತನನ್ನು ಕೊಲ್ಲದೇ ಇದ್ದಿದ್ದರೆ, ಸೌಲ ಮತ್ತು ಇಸ್ರಾಯೇಲ್ಯರು ಫಿಲಿಷ್ಟಿಯರಿಗೆ ಗೌರವ ಸಲ್ಲಿಸುತ್ತಾ ಕಠಿಣ ಜೀವನವನ್ನು ನಡೆಸುತ್ತಿದ್ದರು. ಆದರೆ ದಾವೀದನ ಅತ್ಯಂತ ದೊಡ್ಡ ಹೋರಾಟವೆಂದರೆ ಅವರ ಮಾವ ಸೌಲನ ಸವಾಲನ್ನು ಜಯಿಸುವುದು. ಜನರು ದಾವೀದನನ್ನು ಹೊಗಳಿದ್ದರಿಂದ ಸೌಲನು ಅಸೂಯೆ ಪಟ್ಟರು. ಅವರು ಅವರನ್ನು ಹಲವಾರು ಬಾರಿ ಕೊಲ್ಲಲು ಪ್ರಯತ್ನಿಸಿದರು. ಅಷ್ಟೇ ಅಲ್ಲ, ದಾವೀದನ ಜೊತೆಗಿದ್ದ ಜನರು ಅವರನ್ನು ಕಲ್ಲೆಸೆದು ಕೊಲ್ಲಲು ಪ್ರಯತ್ನಿಸಿದರು. ಹೀಗೆ ದಾವೀದನು ವಿರೋಧವನ್ನು ಎದುರಿಸಿದರು.

 

ನೀವು ಸಹ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ದಾವೀದನನ್ನು ನೆನಪಿಸಿಕೊಳ್ಳಿ. ಅವರು ಕರ್ತನಲ್ಲಿ ತನ್ನನ್ನು ಬಲಪಡಿಸಿಕೊಂಡರೆಂದು ನಾವು ಸತ್ಯವೇದದಲ್ಲಿ ಓದುತ್ತೇವೆ. ಕಷ್ಟಕಾಲದಲ್ಲಿ ಅವನು ನನಗೆ ಮೊರೆಯಿಡುವನು. ನಾನು ಅವನಿಗೆ ಸದುತ್ತರವನ್ನು ದಯಪಾಲಿಸಿ ಅವನನ್ನು ಬಿಡಿಸುವೆನೆಂದು ಕರ್ತನು ಹೇಳುತ್ತಾರೆ.

 

ಪ್ರಿಯರೇ! ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರು ನಿಮ್ಮನ್ನು ಯಾವುದೇ ಸಮಯದಲ್ಲಿ ತಿರಸ್ಕರಿಸಬಹುದು. ಅಂಧಕಾರ ಲೋಕಾಧಿಪತಿ ಜನರ ಹೃದಯಗಳನ್ನು ಕಹಿಯಿಂದ ತುಂಬಿಸುತ್ತಿದ್ದಾನೆ. ಹೆಂಡತಿಯನ್ನು, ಗಂಡನನ್ನು ಬಿಟ್ಟು ಅಥವಾ ಮಕ್ಕಳನ್ನು ಹೆತ್ತವರನ್ನು ಬಿಟ್ಟು ಬೇರ್ಪಡಿಸುವುದೇ ಅವನ ಕೆಲಸ. ಹಲವು ವರ್ಷಗಳ ಹಿಂದೆ, ದೇವರು ನನಗೆ ಒಂದು ಗ್ರಹಿಕೆಯನ್ನು ಉಂಟು ಮಾಡಿದರು. "ನಿಮ್ಮ ಬಳಿ ಆಗಾಗ್ಗೆ ಬಂದು ಇತರರನ್ನು ಕುರಿತು ಕೊರತೆ ಹೇಳುವವರು ನಿನ್ನನ್ನು ಕುರಿತೂ ಮತ್ತೊಬ್ಬರ ಬಳಿ ಕೊರತೆ ಹೇಳುತ್ತಾರೆ ಎಂಬುದು ನಿನಗೆ ಗೊತ್ತಾ?" ಎಂದು. ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ದಾಟಿ ಹೋಗುವಾಗ ಕರ್ತನಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಪ್ರೀತಿಯ ದೇವರು ನಿಮ್ಮನ್ನು ಸಮಸ್ಯೆಗಳಿಂದ ಅದ್ಭುತವಾಗಿ ಬಿಡುಗಡೆ ಮಾಡುತ್ತಾರೆ, ನಿಮಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ನಿಮಗೆ ಜಯವನ್ನು ನೀಡುತ್ತಾರೆ. ಆಮೆನ್. 

- Dr.L. ಜಯಪಾಲನ್

 

ಪ್ರಾರ್ಥನಾ ಅಂಶ:

ಕಣ್ಮಣಿ ಮಕ್ಕಳು ಯೇಸುವಿಗಾಗಿ ಪ್ರಾರ್ಥನಾ ಯೋಜನೆಯಲ್ಲಿ ಸೇರಿರುವ ಮಕ್ಕಳ ರಕ್ಷಣೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet