Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.02.2026
Share:

By Village Missionary Movement

Monday, 23-Feb-2026

ಧೈನಂದಿನ ಧ್ಯಾನ(Kannada) – 23.02.2026

 

ಓಡಿಸಲ್ಪಟ್ಟ ಯೆಪ್ತಾಹ

 

“...ಯೆಪ್ತಾಹನು ತನ್ನ ಸಂಗತಿಗಳನ್ನೆಲ್ಲಾ ವಿುಚ್ಪೆಯಲ್ಲಿ ಯೆಹೋವನ ಮುಂದೆ ಅರಿಕೆಮಾಡಿದನು" - ನ್ಯಾಯಸ್ಥಾಪಕರು 11:11

 

ರಾಜು ದೇವಾಲಯದ ಎಲ್ಲಾ ಪ್ರಾರ್ಥನೆಗಳಿಗೆ ತಪ್ಪದೇ ಹಾಜರಾಗುತ್ತಿದ್ದರು. ಆದರೆ ಎಲ್ಲಾ ಪ್ರಾರ್ಥನೆಗಳಲ್ಲಿ ಅಳುತ್ತಲೇ ಇದ್ದರು. ಇದನ್ನು ನೋಡಿದ ಬೋಧಕರು ರಾಜುವಿನ ಬಳಿ, ನೀವು ಏಕೆ ಯಾವಾಗಲೂ ಅಳುತ್ತಿದ್ದೀರ? ಎಂದು ಕೇಳಿದರು. ಅದಕ್ಕೆ ರಾಜು ನಾನು ನಂಬಿದ ನನ್ನ ಸ್ನೇಹಿತರು ನನಗೆ ದ್ರೋಹ ಮಾಡಿ ನನ್ನನ್ನು ಬಿಟ್ಟು ಹೊರಟು ಹೋದರು. ನನಗೆ ಅದನ್ನು ಸಹಿಸಲು ಆಗುತ್ತಿಲ್ಲ ಎಂದರು. ಬೋಧಕರು ಅವರ ಬಳಿ, ನಾವು ನಂಬುವಂತಹ ಸಂಬಂಧಗಳು ನಮ್ಮನ್ನು ಬಿಟ್ಟು ದೂರ ಹೋಗುವಾಗ, ನಮ್ಮ ಮನಸ್ಸು ಮುರಿದು ಹೋಗುತ್ತದೆ. ಆದರೆ ನಾವು ನಮ್ಮನ್ನು ಬಿಟ್ಟು ಹೋಗದ ದೇವರನ್ನು ಪ್ರಾರ್ಥಿಸಿದಾಗ, ಆತನು ನಮ್ಮ ಮುರಿದ ಹೃದಯಗಳನ್ನು ಸರಿಪಡಿಸುತ್ತಾರೆ ಮತ್ತು ನಮ್ಮನ್ನು ಬಿಟ್ಟು ಹೋದ ಸಂಬಂಧಿಕರ ಬಳಿ ಸಮಾಧಾನವನ್ನು ಹೊಂದುವಂತೆ ಮಾಡುತ್ತಾರೆ ಎಂದರು. 

 

ಸತ್ಯವೇದದಲ್ಲಿ, ಯೆಪ್ತಾಹನ ಜೀವನವು ಸಂಬಂಧಿಕರಿಂದ ಓಡಿಸಲ್ಪಟ್ಟ ಜೀವನವಾಗಿಯೇ ಇತ್ತು. ಅವರ ಆರಂಭವು ಒಂದು ಪರಸ್ತ್ರೀಯ ಮಗನಾಗಿಯೇ ಇತ್ತು. ಹಾಗಾದರೆ, ಅವರು ಎಷ್ಟು ನಿಂದೆಯನ್ನು ಸಹಿಸಿರಬೇಕು. ಅವರ ತಂದೆಯ ಹೆಂಡತಿಗೆ ಹುಟ್ಟಿದ ಮಕ್ಕಳು ಯೆಪ್ತಾಹನನ್ನು ದ್ವೇಷಿಸಿ, ನಿನಗೆ ಪಿತ್ರಾರ್ಜಿತದಲ್ಲಿ ಪಾಲು ಇಲ್ಲ ಎಂದು ಓಡಿಸಿಬಿಟ್ಟರು. ಅವನು ಅಲ್ಲಿಂದ ಹೋಗಿ ಒಬ್ಬ ಯುದ್ಧವೀರನಾದನು. ಯೆಪ್ತಾಹನ ಬಗ್ಗೆ ಒಂದು ಒಳ್ಳೆಯ ವಿಷಯವೆಂದರೆ ಅವರು ದೇವರ ಸನ್ನಿಧಿಯನ್ನು ಹುಡುಕಿದರು, ಮಿಜ್ಪಾದಲ್ಲಿ ಕರ್ತನ ಸನ್ನಿಧಿಯಲ್ಲಿ ತನ್ನ ಎಲ್ಲಾ ವಿಷಯಗಳನ್ನು ಹೇಳಿದರು. ಯೆಪ್ತಾಹನ ಎಲ್ಲಾ ಸಹೋದರರು ಒಟ್ಟಾಗಿ ಸೇರಿ ಅವನನ್ನು ಭೇಟಿಯಾಗಲು ಬಂದರು. ಕಾರಣ! ಒಂದು ಯುದ್ಧ ಪ್ರಾರಂಭವಾಯಿತು. ಆದ್ದರಿಂದ ಅವನನ್ನು ಓಡಿಸಿದವರು, ನೀನೇ ನಮಗೆ ನಾಯಕನಾಗಿ ಮತ್ತು ಎಲ್ಲಾ ಸೈನ್ಯಗಳಿಗೆ ಅಧಿಪತಿಯಾಗಿ ಇರಬೇಕು ಎಂದು ಆಹ್ವಾನಿಸಿದರು. ಯೆಪ್ತಾಹನನ್ನು ಓಡಿಸುವ ಪರಿಸ್ಥಿತಿಯನ್ನು ಕರ್ತನು ಏಕೆ ಅನುಮತಿಸಿದರು ಅಂದರೆ, ಇದಕ್ಕಾಗಿಯೇ! ಒಂದು ವೇಳೆ ಯೆಪ್ತಾಹನನ್ನು ಓಡಿಸಲ್ಪಡದೇ ಇದ್ದಿದ್ದರೆ, ಯೆಪ್ತಾಹನ ಗೆಲುವು ಅಷ್ಟು ದೊಡ್ಡದಾಗಿ ಕಾಣುತ್ತಿರಲಿಲ್ಲ. ಅವನನ್ನು ಓಡಿಸಲ್ಪಟ್ಟದ್ದರಿಂದಲೇ, ಹಿರಿಯರು ಯೆಪ್ತಾಹನನ್ನು ಹುಡುಕಿ ಬಂದು ಆಹ್ವಾನಿಸಿದರು. ಯೆಪ್ತಾಹನು ಆ ಸ್ಥಳಕ್ಕೆ ಹೋಗಿ ಯುದ್ಧ ಮಾಡಿದರು. ದೇವರ ಸನ್ನಿಧಿಯಲ್ಲಿ ನಿಂತಿದ್ದ ಯೆಪ್ತಾಹನಿಗೆ ಕರ್ತನು ಜೊತೆಗಾರನಾಗಿ ನಿಂತು ಜಯ ಹೊಂದುವಂತೆ ಮಾಡಿದರು. ಕರ್ತನ ಆತ್ಮವು ಯೆಪ್ತಾಹನ ಮೇಲೆ ಇಳಿಯಿತು.

 

ಇಂದು ನಾವು ಸಹ ವಿವಿಧ ರೀತಿಯ ನಿಂದೆಯನ್ನು ಹೊತ್ತಿರಬಹುದು. ನಾವು ಸಂತೋಷವಾಗಿದ್ದೇವೆ ಎಂದು ನಟಿಸುತ್ತಿರಬಹುದು, ಆದರೆ ನಮ್ಮ ಹೃದಯದಲ್ಲಿ ನೋವಿನಿಂದ ಅಳುತ್ತಿರಬಹುದು. ನಮ್ಮ ನಿಂದೆಯನ್ನು ಬದಲಾಯಿಸಲು, ನಮ್ಮ ಗಾಯಗಳನ್ನು ಗುಣಪಡಿಸಲು, ನಮ್ಮನ್ನು ನೋಡಿಕೊಳ್ಳುವ ಕರ್ತನು ನೆರಳಿನಂತೆ ನಮ್ಮೊಂದಿಗೆ ಬರುತ್ತಲೇ ಇರುತ್ತಾರೆ. ನಾವು ಅನಾಥರಲ್ಲ, ಕೈಬಿಡಲ್ಪಟ್ಟವರಲ್ಲ, ಯೆಪ್ತಾಹನಂತೆ, ನಾವು ಸಹ ನಮ್ಮ ಎಲ್ಲಾ ಕಾರ್ಯಗಳನ್ನು ಮನುಷ್ಯರ ಬಳಿ ಹೇಳದೆ ದೇವರ ಬಳಿ ಹೇಳುವಾಗ, ಆತನು ನಮ್ಮನ್ನು ನಾವು ತಲುಪದ, ನಾವು ಊಹಿಸದ ಎತ್ತರಕ್ಕೆ ಕರೆದೊಯ್ಯುತ್ತಾರೆ ಮತ್ತು ಆತನು ನಮ್ಮನ್ನು ಇತರರಿಗೆ ಆಶೀರ್ವಾದವನ್ನಾಗಿ ಮಾಡುತ್ತಾರೆ.

- Mrs. ಲಲಿತಾ 

 

ಪ್ರಾರ್ಥನಾ ಅಂಶ:

ತಮಿಳುನಾಡಿನಲ್ಲಿರುವ ಸೇವಕರ ಮಕ್ಕಳು Arise Joshua & Esther ಯೋಜನೆಯಲ್ಲಿ ಸೇರಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin