Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.06.2021
Share:

By Village Missionary Movement

Tuesday, 15-Jun-2021

ಧೈನಂದಿನ ಧ್ಯಾನ(Kannada) – 15.06.2021

ಕೊಡಿರಿ

“ಕೊಡಿರಿ, ಆಗ ನಿಮಗೂ ಕೊಡುವರು;..." - ಲೂಕ 6:38

ಆನಿ ಆಸ್ಕ್ವಿತ್ ಎಂಬ ಶಿಕ್ಷಕ 1887-ನೇ ವರ್ಷ, ನೆಲ್ಲೈ ಜಿಲ್ಲೆಯ ಒಂದು ಕಾಲೇಜಿನಲ್ಲಿ ಪಾಠ ಹೇಳಿ ಕೊಡುತ್ತಿದ್ದಾಗ ಕುರುಡು ಹುಡುಗನೊಬ್ಬ ಭಿಕ್ಷೆ ಬೇಡಲು ಅಲ್ಲಿಗೆ ಬಂದ.  ಆನಿ ಅವನ ಬಳಿ,  “ತಮ್ಮ, ಇದು ಶಿಕ್ಷಣ ಹೇಳಿಕೊಡುವ ಸ್ಥಳ, ಆಹಾರ ನೀಡುವ ಸ್ಥಳವಲ್ಲ.  ಆದ್ದರಿಂದ ನೀನು ಬೇರೆಡೆ ಹೋಗಿ ಭಿಕ್ಷೆ ಬೇಡು”  ಎಂದರು. ಹುಡುಗ ಪ್ರತ್ಯುತ್ತರವಾಗಿ,  "ಹಾಗಾದರೆ ನನಗೆ ಶಿಕ್ಷಣ ಕೊಡಿ" ಎಂದನು.  ಆ ಪ್ರಶ್ನೆಯು ಆನಿಯ ಅಂತರಾಳದಲ್ಲಿ ಬಹು ದೊಡ್ಡ ಭಾರವನ್ನು ಉಂಟು ಮಾಡಿತು.  ಆ ಪ್ರಶ್ನೆಯ ದಾಹದಿಂದ ದೃಷ್ಟಿಯಿಲ್ಲದ ಅವನಿಗೆ  ಶಿಕ್ಷಣ ಕೊಡಲು ಪ್ರಾರಂಭಿಸಿದರು.  ಅದು ಶಾಲೆಯಾಗಿ ಬೆಳೆಯಿತು.  ನಂತರದ ದಿನಗಳಲ್ಲಿ ಅಂಧರಿಗೆ ಅತಿದೊಡ್ಡ ಶಾಲೆಯಾಗಿ ಮಾರ್ಪಟ್ಟಿತು.

ಪರಿಶುದ್ಧ ಗ್ರಂಥದಲ್ಲಿ, ಚಾರೆಪ್ತಾ ಎಂಬ ಊರಿನಲ್ಲಿರುವ ವಿಧವೆಯೊಬ್ಬಳು ತನ್ನ ಬಳಿ ಒಂದು ಹಿಡಿ ಹಿಟ್ಟು ಮತ್ತು ಸ್ವಲ್ಪ ಎಣ್ಣೆಯನ್ನು ಇಟ್ಟುಕೊಂಡಿದ್ದಳು.  ಈ ಪರಿಸ್ಥಿತಿಯಲ್ಲಿ ಎಲೀಯ ಎಂಬ  ಪ್ರವಾದಿಗೆ ಸ್ವಲ್ಪ ಹಿಟ್ಟು, ಎಣ್ಣೆಯಿಂದ ರೊಟ್ಟಿ ಮಾಡಿ ಕೊಡುತ್ತಾಳೆ. ಅದರ ನಿಮಿತ್ತವಾಗಿ ದೇಶದಲ್ಲಿ ಮಳೆ ಬೀಳುವಂತೆ ಆಜ್ಞಾಪಿಸುವ ದಿನದವರೆಗೂ ವಿಧವೆಯ ಮನೆಯಲ್ಲಿನ ಮಡಕೆಯಲ್ಲಿ ಹಿಟ್ಟು ಕಡಿಮೆಯಾಗಲಿಲ್ಲ, ಜಾಡಿಯಲ್ಲಿನ ಎಣ್ಣೆಯೂ ಕಡಿಮೆಯಾಗಲಿಲ್ಲ, ಅವಳು  ತನ್ನ ಬಡತನದ ಸ್ಥಿತಿಯಲ್ಲಿದ್ದರೂ, ತನ್ನ ಬಳಿ ಇರುವುದನ್ನು ಹಾಗೆಯೇ ಕೊಟ್ಟು ಬಿಟ್ಟಿದ್ದರಿಂದ, ಬರಗಾಲ ಸಂಪೂರ್ಣವಾಗಿ ಹೋಗುವವರೆಗೂ ಆಶೀರ್ವಾದವಾಗಿಯೂ, ಸಮೃದ್ಧಿಯಾಗಿಯೂ ಇದ್ದಳು ಎಂದು ನಾವು ನೋಡುತ್ತೇವೆ.

ಇದನ್ನು ಓದುತ್ತಿರುವ ಪ್ರಿಯರೇ!  ಯೇಸು ಕ್ರಿಸ್ತನು ನಮ್ಮೆಲ್ಲರಿಗಾಗಿಯೂ ಅವರ ಜೀವವನ್ನು ಕೊಟ್ಟಿದ್ದರಿಂದ ನಾವು ಅವರನ್ನು ಪ್ರೀತಿಸುತ್ತಿದ್ದೇವೆ. ವಿಧವೆ ಕೂಡ ತನ್ನಲ್ಲಿದ್ದದ್ದನ್ನು ಕೊಟ್ಟು, ಸಮೃದ್ಧಿಯಾಗಿ ಆಶೀರ್ವಾದವನ್ನು ಪಡೆದುಕೊಂಡಳು.  ಆನಿಯವರು ತನ್ನ ಬಳಿಯಿದ್ದ ಶಿಕ್ಷಣವನ್ನು  ಕೊಟ್ಟಿದ್ದರಿಂದ, ಅತಿ ದೊಡ್ಡ ಅಂಧರ ಶಾಲೆಯನ್ನು ನಿರ್ಮಿಸಿದರು. ನಾವು  ಕರೋನಾ ಲಾಕ್‌ಡೌನ್‌ನಲ್ಲಿರುವ ಈ ದಿನಗಳಲ್ಲಿ, ನಮ್ಮ ಮನೆಯ ಸಮೀಪವಿರುವ ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡು, ಒಂದು ಹೊತ್ತಿನ ಆಹಾರವಿಲ್ಲದೆ ಕಷ್ಟಪಡುತ್ತಿರಬಹುದು.  ಅಂತಹ ಬಡ, ಸಾಮಾನ್ಯರಿಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಹಂಚಿ ಕೊಡೋಣ!  ಇತರರಿಗೆ ಸಹಾಯ ಹಸ್ತ ಚಾಚೋಣ!  ಕೊಡುವಂತಹ ನಮ್ಮನ್ನು ಕರ್ತನು ಆಶೀರ್ವದಿಸುತ್ತಾರೆ.
-    Mrs. ಜೀವಾ ವಿಜಯ್

ಪ್ರಾರ್ಥನಾ ಅಂಶ:-
ನಾವು ಹಳ್ಳಿಗಳಲ್ಲಿ ಭೇಟಿಮಾಡಿ  ಮುನ್ನಡೆಸಿದ ಕಿರಿಯರು, ಯೌವನಸ್ಥರು ಕರ್ತನಲ್ಲಿ ನೆಲೆಗೊಳ್ಳಬೇಕೆಂದು ಪ್ರಾರ್ಥಿಸೋಣ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al