Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.02.2026 (Kids Special)
Share:

By Village Missionary Movement

Sunday, 22-Feb-2026

ಧೈನಂದಿನ ಧ್ಯಾನ(Kannada) – 22.02.2026 (Kids Special)

 

ಜನ್ಮದಿನದ ಉಡುಗೊರೆ

 

"...ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು." - ಮತ್ತಾಯ 6:33

 

Hello ಪುಟಾಣಿಗಳೇ! ಎಲ್ಲರೂ ಹೇಗಿದ್ದೀರ, ಸಂತೋಷವಾಗಿದ್ದೀರಾ? ಹೌದು ಪುಣಾಣಿಗಳೇ, ನಿಮ್ಮ ಹುಟ್ಟುಹಬ್ಬವನ್ನು ಎಲ್ಲರೂ ಜಾಲಿಯಾಗಿ ಸೆಲೆಬ್ರೇಟ್ ಮಾಡ್ತೀರ ತಾನೇ. ಇವತ್ತು ಯಾರ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆಂದು ನೋಡೋಣ್ವಾ? ಜನರ ಗುಂಪೊಂದು ಬಹಳ ಗದ್ದಲ ಮತ್ತು ಸಂತೋಷದಿಂದ ಹೋಗುತ್ತಿತ್ತು. ಅವರೆಲ್ಲರೂ ಎಲ್ಲಿಗೆ ಹೋಗುತ್ತಿದ್ದಾರೆಂದು ನೀವು ಊಹಿಸಬಹುದು. ಅವರೆಲ್ಲರೂ ರಾಜನ ಅರಮನೆಗೆ ಹೋಗುತ್ತಿದ್ದರು. ಏಕೆಂದರೆ ಅವರೆಲ್ಲರೂ ರಾಜನ ಅರಮನೆಯಲ್ಲಿ ಕೆಲಸ ಮಾಡುವ ಸೇವಕರಾಗಿದ್ದರು. ರಾಜನ ಹುಟ್ಟುಹಬ್ಬ ಬರುತ್ತಿತ್ತು. ಆದ್ದರಿಂದ ರಾಜನು ಅಲ್ಲಿ ಕೆಲಸ ಮಾಡುವ ಜನರಿಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದರು, ಆದ್ದರಿಂದ ರಾಜನ ಅರಮನೆಯಲ್ಲಿ ಕೆಲಸ ಮಾಡುವ ಎಲ್ಲಾ ಜನರನ್ನು ಬರಲು ಹೇಳಿದರು. ನಾಳೆ ನನ್ನ ಹುಟ್ಟುಹಬ್ಬ ಮುಗಿದ ನಂತರ, ಈ ಅರಮನೆಯಲ್ಲಿ ನಿಮಗೆ ಇಷ್ಟವಾದದ್ದನ್ನು ನೀವು ತೆಗೆದುಕೊಂಡು ಹೋಗಬಹುದು ಎಂದು ಅವರಿಗೆ ಆದೇಶಿಸಿದರು. ಸೇವಕರು ಸಹ ಹೊರಟು ತಮ್ಮ ಕೆಲಸವನ್ನು ಮಾಡುತ್ತಿರುವಾಗ ಏನು ತೆಗೆದುಕೊಳ್ಳೋಣ ಎಂದು ನೋಡುತ್ತಲೇ ಇದ್ದರು. ರಾತ್ರಿ ಕಳೆದುಹೋಯಿತು, ಅವರಿಗೆ ನಿದ್ರೆ ಬರಲಿಲ್ಲ. ಬೆಳಗಿನ ಜಾವ ಹೊರಡುವ ಶಬ್ದವು ಗದ್ದಲದ ಶಬ್ದವಾಗಿತ್ತು.

 

ಈಗ ಅರಮನೆ ಹೊಳೆಯುತ್ತಿತ್ತು. ನಿಗದಿತ ಸಮಯದಲ್ಲಿ, ರಾಜನಿಗೆ ಹುಟ್ಟುಹಬ್ಬದ ಆಚರಣೆ ನಡೆಯಿತು. ಎಲ್ಲಾ ಮುಗಿದ ನಂತರ, ರಾಜನು ಅವರನ್ನು ನೋಡಿ, ಈಗ ನಿಮಗೆ ಇಷ್ಟವಾದ ವಸ್ತುಗಳನ್ನು ತೆಗೆದುಕೊಳ್ಳಿರಿ ಎಂದು ಹೇಳಿದರು. ಅವರೂ ಅವುಗಳನ್ನು ತೆಗೆದುಕೊಂಡು ಹೊರಟುಹೋದರು. ರಾಜನ ಬಳಿ ಬೀಸಣಿಗೆ ಹಿಡಿದು ಗಾಳಿ ಬೀಸುತ್ತಿದ್ದವನು ಮಾತ್ರ ಏನನ್ನೂ ತೆಗೆದುಕೊಳ್ಳದೆ ಬೀಸುತ್ತಲೇ ಇದ್ದನು. ರಾಜನು ಅವನನ್ನು ನೋಡಿ, ನನ್ನ ಹುಟ್ಟುಹಬ್ಬದ ಉಡುಗೊರೆ ನಿನಗೂ ಇದೆ. ಗಾಳಿ ಬೀಸುವುದನ್ನು ನಿಲ್ಲಿಸಿ ಹೋಗಿ ನಿನಗೆ ಇಷ್ಟವಾದದ್ದನ್ನು ತೆಗೆದುಕೋ ಎಂದು ಹೇಳಿದರು. ಅವನು ತಕ್ಷಣ ಬೀಸುವುದನ್ನು ನಿಲ್ಲಿಸಿ ರಾಜನನ್ನು ಬಿಗಿಯಾಗಿ ಹಿಡಿದುಕೊಂಡನು. ರಾಜನು ಅವನನ್ನು ನೋಡಿ, ಹೇ, ನೀನು ಏನು ಮಾಡುತ್ತಿದ್ದೀಯ, ನನ್ನನ್ನು ಬಿಡು ಎಂದರು. ಅವನು ಮೌನವಾಗಿ ರಾಜನನ್ನು ನೋಡಿ, ರಾಜ, ಈ ಅರಮನೆಯಲ್ಲಿರುವುದನ್ನು ನೀನು ತೆಗೆದುಕೊಳ್ಳಬಹುದು ಎಂದು ನೀವೇ ಹೇಳಿದ್ದೀರಲ್ಲಾ. ನೀವು ಕೂಡ ಈ ಅರಮನೆಯಲ್ಲೇ ಇದ್ದೀರ. ಅದಕ್ಕಾಗಿಯೇ ನಾನು ನಿಮ್ಮನ್ನು ಹಿಡಿದುಕೊಂಡೆ ಎಂದನು. ತಕ್ಷಣ ರಾಜನು, ನೀನು ಏನನ್ನೂ ನಿರೀಕ್ಷಿಸದೆ ನನ್ನನ್ನು ನಿನ್ನವನನ್ನಾಗಿ ಮಾಡಿಕೊಂಡಿದ್ದರಿಂದ, ಈ ಅರಮನೆ ನಿನಗೇ ಸ್ವಂತ ಎಂದು ಹೇಳಿದರು.

 

ಪ್ರೀತಿಯ ತಮ್ಮ ತಂಗಿ ನೀವು ಕೂಡ ಈ ಗಾಳಿ ಬೀಸುವವನ ಹಾಗೆ ಮೊದಲು ಯೇಸುವನ್ನು ನಿನ್ನವನನ್ನಾಗಿ ಮಾಡಿಕೊಳ್ಳಿರಿ. ಆಗ ಎಲ್ಲಾ ಆಶೀರ್ವಾದಗಳು ನಿಮಗೆ ಬಂದು ಸೇರುತ್ತವೆ. O.k ನಾ.

- Mrs. ಸಾರಾಳ್ ಸುಭಾಷ್.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482