Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.02.2026
Share:

By Village Missionary Movement

Saturday, 21-Feb-2026

ಧೈನಂದಿನ ಧ್ಯಾನ(Kannada) – 21.02.2026

 

ಕರ್ತವ್ಯ 

 

“...ಯೆಹೋವನು ನುಡಿಸುವ ಮಾತನ್ನೇ ನಾನು ಹೇಳಬೇಕಾಗಿದೆಯಲ್ಲವೇ ಅಂದನು." - ಅರಣ್ಯ23:12

 

ಅಗಸ್ಟೀನ್ ಎಂಬ ಯುವಕನಿಗೆ ತನ್ನ ಕೆಲಸದ ಸ್ಥಳದಲ್ಲಿ ಕ್ರಿಸ್ತನನ್ನು ಅರಿಯದ ಅನೇಕ ಸ್ನೇಹಿತರಿದ್ದರು. ಅವನು ಯಾವುದೇ ತಾರತಮ್ಯವಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತಾನೆ ಎಂದು ಅನೇಕ ಜನರು ಅವನನ್ನು ಆಶ್ಚರ್ಯದಿಂದ ನೋಡುವುದುಂಟು. ಒಮ್ಮೆ, ಅವನ ಸ್ನೇಹಿತನಿಗೆ ಅಪಘಾತ ಸಂಭವಿಸಿ ಆಸ್ಪತ್ರೆಯಲ್ಲಿದ್ದಾನೆಂದು ಅವನಿಗೆ ತಿಳಿದು ಬಂದಾಗ, ಅಗಸ್ಟೀನ್ ಅವನಿಗೆ ರಕ್ತ ನೀಡಿ ಹಣವನ್ನೂ ಕೊಟ್ಟುಬಿಟ್ಟು ಮನೆಗೆ ಬಂದನು. ನಂತರ, ಪ್ರಾರ್ಥಿಸಿ ರಾತ್ರಿ ಮಲಗಲು ಹೋದಾಗ ಕನಸಿನಲ್ಲಿ ತುತ್ತೂರಿಯ ಶಬ್ದವನ್ನು ಮತ್ತು ಸಾಲಿನಲ್ಲಿ ನಿಂತಿದ್ದ ಅನೇಕ ಜನರನ್ನು ನೋಡಿದನು. ಒಬ್ಬ ದೇವದೂತನು ದಾರಿಯಲ್ಲಿ ನಿಂತು, “ಬಲಕ್ಕೆ ಹೋಗು, ಎಡಕ್ಕೆ ಹೋಗು” ಎಂದು ಹೇಳುತ್ತಿದ್ದರು. ಆ ಸಮಯದಲ್ಲಿ, ಬಲಕ್ಕೆ ಹೋಗುತ್ತಿದ್ದವರು ಸಂತೋಷದಿಂದ ಹೋದರು. ಅಲ್ಲಿ ಒಂದು ದೊಡ್ಡ ಪ್ರಕಾಶಮಾನವಾದ ಬೆಳಕು ಇತ್ತು. ಎಡಕ್ಕೆ ಹೋಗುತ್ತಿದ್ದವರು, “ಅಯ್ಯೋ!” ಎಂದು ಗೋಳಾಡುತ್ತಾ ಪ್ರಲಾಪಿಸುತ್ತಿದ್ದರು. ಆಗ ದೇವದೂತನು ಅಗಸ್ಟೀನ್‌ನನ್ನು ಬಲಕ್ಕೆ ಹೋಗುವಂತೆ ಹೇಳಿದರು. ದೇವದೂತನು ಅಗಸ್ಟೀನ್‌ನ ಸ್ನೇಹಿತರಿಗೆ ಎಡಕ್ಕೆ ಹೋಗುವಂತೆ ಹೇಳಿದರು.

 

ಸ್ನೇಹಿತನು ದೂತನ ಬಳಿ ಅವನನ್ನೂ ಎಡಕ್ಕೆ ಕಳುಹಿಸಿರಿ ಎಂದನು. ಅವನು ಬಾಲ್ಯದಿಂದಲೂ ನನ್ನೊಂದಿಗಿದ್ದಾನೆ, ಆದರೆ ಅವನು ನನಗೆ ಕ್ರಿಸ್ತನ ಬಗ್ಗೆ ಎಂದೂ ಹೇಳಿಲ್ಲ ಅಂದನು. ಅಗಸ್ಟೀನ್ ಹೇಳಿದನು, ಅವನು ನನ್ನನ್ನು ಕ್ರಿಸ್ತನ ಬಗ್ಗೆ ಎಂದೂ ಕೇಳಿಲ್ಲವಲ್ಲಾ ಅಂದನು. ದೇವದೂತನು ಇವನಿಗೆ ಬಹಳಷ್ಟು ಸಹಾಯ ಮಾಡಿದ್ದೀಯಲ್ಲಾ ಎಂದರು. ತಕ್ಷಣ ಅಗಸ್ಟೀನ್, ಅವನು ನನ್ನ ಸ್ನೇಹಿತ, ಆದ್ದರಿಂದ ಅವನಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಆದ್ದರಿಂದ ಸಹಾಯ ಮಾಡಿದೆ ಎಂದನು. ತಕ್ಷಣ ದೇವದೂತನು ನೀನು ಕ್ರಿಸ್ತನ ಮಗು, ಶಿಷ್ಯನೆಂದರೆ ಅವರ ಬಗ್ಗೆ ಹೇಳುವುದು ನಿನ್ನ ಕರ್ತವ್ಯ. ಯೇಸು ಕ್ರಿಸ್ತನು ಪರಲೋಕಕ್ಕೆ ಏರಿ ಹೋಗುವ ಮೊದಲು ತನ್ನ ಶಿಷ್ಯರಿಗೆ ನೀಡಿದ ಕೊನೆಯ ಆಜ್ಞೆಯೂ ಆಗಿತ್ತು. ನಿದ್ರೆಯಿಂದ ಎಚ್ಚರಗೊಂಡ ಅಗಸ್ಟೀನ್ ಗಾಬರಿಯಿಂದ ಎದ್ದನು. ಸತ್ಯವೇದವನ್ನು ತೆರೆದು ಓದಿ ಬಿಟ್ಟು, "ಕರ್ತನೇ, ಬೆಳಿಗ್ಗೆಯಾದ ಕೂಡಲೇ, ನಾನು ನನ್ನ ಸ್ನೇಹಿತನಿಗೆ ನಿನ್ನ ಬಗ್ಗೆ ಹೇಳುತ್ತೇನೆ ಎಂದು ಪ್ರಾರ್ಥಿಸಿ ಬಿಟ್ಟು ಮಲಗಿ ನಿದ್ರೆಮಾಡಿದನು. ಬೆಳಿಗ್ಗೆ, ಅವನು ಆಸ್ಪತ್ರೆಯಲ್ಲಿದ್ದ ತನ್ನ ಸ್ನೇಹಿತನಿಗೆ ಯೇಸುವಿನ ಬಗ್ಗೆ ಹೇಳಿ ಯೇಸು ಸ್ವಸ್ಥಮಾಡುತ್ತಾರೆ ಎಂದು ಹೇಳಿ ಪ್ರಾರ್ಥಿಸಿ ಬಂದರು.

 

ಇದನ್ನು ಓದುತ್ತಿರುವ ಪ್ರಿಯರೇ, ಕ್ರಿಸ್ತನನ್ನು ಅರಿತಿರುವ ನಾವು, ಅವರ ಬಗ್ಗೆ ಇತರರಿಗೆ ಹೇಳುವುದು ನಮ್ಮ ಕರ್ತವ್ಯ. ಪೌಲನು ಕೊರಿಂಥದವರಿಗೆ ಬರೆಯುವಾಗ, “ನಾನು ಸುವಾರ್ತೆಯನ್ನು ಸಾರಿದರೂ ಹೆಚ್ಚಳ ಪಡುವದಕ್ಕೆ ನನಗೇನೂ ಇಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲೆ ಇದೆ. ಹೌದು, ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ" (1 ಕೊರಿಂಥ 9:16) ಎಂದು ಹೇಳಿದರು. ಹೌದು, ನೀವು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕ್ರಿಸ್ತನ ಬಗ್ಗೆ ಹೇಳದಿದ್ದರೆ, ನ್ಯಾಯತೀರ್ಪಿನ ದಿನದಂದು ನಿಮ್ಮನ್ನು ಅಗಸ್ಟೀನನ ಸ್ನೇಹಿತನಂತೆ ನಿರ್ಣಯಿಸಲಾಗುತ್ತದೆ. ಆದ್ದರಿಂದ ಇಂದೇ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಯೇಸುವಿನ ಬಗ್ಗೆ ಹೇಳಿ. ದೇವರು ನಿಮ್ಮ ಪ್ರಯತ್ನಗಳನ್ನು ಯಶಸ್ವಿಗೊಳಿಸುತ್ತಾರೆ. ಆಮೆನ್.

- M. ಸ್ಟಾಲಿನ್ ರಾಜ

 

ಪ್ರಾರ್ಥನಾ ಅಂಶ:

Arise Joshua & Esther ಯೋಜನೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin