Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.02.2026
Share:

By Village Missionary Movement

Friday, 20-Feb-2026

ಧೈನಂದಿನ ಧ್ಯಾನ(Kannada) – 20.02.2026

 

ಎಚ್ಚರವಾಗಿರಿ

 

“...ನಿದ್ರೆ ಮಾಡುವವನೇ, ಎಚ್ಚರವಾಗು!ಸತ್ತವರನ್ನು ಬಿಟ್ಟು ಏಳು!ಕ್ರಿಸ್ತನು ನಿನಗೆ ಪ್ರಕಾಶ ಕೊಡುವನುಎಂದು ಹೇಳಿಯದೆ" - ಎಫೆಸ. 5:14

 

ಒಬ್ಬ ರೈತ ತನ್ನ ಮಗನನ್ನು ಎತ್ತಿನ ಬಂಡಿಯಲ್ಲಿ ಸುಂದರವಾದ ಹಳ್ಳಿಯ ಮೂಲಕ ಕರೆದುಕೊಂಡು ಹೋದರು. ಅವರು ಹೋದಲ್ಲೆಲ್ಲಾ ಹಸಿರು ಹೊಲಗಳು, ತೋಟಗಳು ಮತ್ತು ಕೊಳಗಳು ಇದ್ದವು, ಮತ್ತು ಪ್ರಕೃತಿ ದೃಶ್ಯವು ತುಂಬಾ ರಮ್ಯವಾಗಿತ್ತು. ಮಗನು ಪ್ರತಿಯೊಂದನ್ನು ತನ್ನ ತಂದೆಗೆ ತೋರಿಸಿ ವಿವರಿಸಲು ಕೇಳಿದಾಗ ತಂದೆ ತಾಳ್ಮೆಯಿಂದ ಹೇಳಿಕೊಟ್ಟರು. ಅವರು ಹಾಗೆ ಹೋಗುತ್ತಿರುವಾಗ ಆಯಾಸದ ನಿಮಿತ್ತವಾಗಿ ತಂದೆಗೆ ನಿದ್ರೆ ಬರಲು ಬಂಡಿಯನ್ನು ನಿಲ್ಲಿಸಿ ತನ್ನ ಮಗನನ್ನು ಕೆಳಗಿಳಿಸಿ ಆಟವಾಡಲು ಬಿಟ್ಟುಬಿಟ್ಟು, ಅಲ್ಲಿರುವ ಮರದ ನೆರಳಿನಲ್ಲಿ ತನ್ನ ಕಣ್ಣುಗಳಿಗೆ ವಿಶ್ರಾಂತಿ ನೀಡಿದರು. ಅವರು ನಿದ್ರೆಯಿಂದ ಎಚ್ಚರವಾದಾಗ, ಮಗನು ಕಾಣಲಿಲ್ಲ. ಭಯಭೀತನಾದ ತಂದೆ, “ಯೇಸುವೇ, ನನಗೆ ಸಹಾಯ ಮಾಡಿ” ಎಂದು ಪ್ರಾರ್ಥಿಸುತ್ತಾ ಹಾಗೆಯೇ ತನ್ನ ಮಗನನ್ನು ಹುಡುಕುತ್ತಿದ್ದಾಗ, ಅವನು ಅಲ್ಲಿದ್ದ ಒಂದು ಕೊಳದಲ್ಲಿ ಕಾಲುಜಾರಿ ಬಿದ್ದುಹೋಗಿರುವುದನ್ನು ದೇವರು ತೋರಿಸಿದರು ಮತ್ತು ಅವನನ್ನು ರಕ್ಷಿಸಲು ಸಹಾಯ ಮಾಡಿದರು.

 

ಅದೇ ರೀತಿ, ಸತ್ಯವೇದದಲ್ಲಿ, ಬುದ್ಧಿಯುಳ್ಳ ಸ್ತ್ರೀ ಮತ್ತು ಬುದ್ಧಿಯಿಲ್ಲದ ಸ್ತ್ರೀ ಹೀಗೆ 10 ಸ್ತ್ರೀಯರೂ ನಿದ್ದೆಮಾಡುತ್ತಿದ್ದಾರೆ. ಆ ದಿನಗಳಲ್ಲಿ, ಯಹೂದಿ ಸಂಸ್ಕೃತಿಯಲ್ಲಿ, ಮದುವೆಯ ಸಮಯದಲ್ಲಿ, ವಧುವಿನ ಮನೆಯಲ್ಲಿ 7 ದಿನಗಳ ಹಬ್ಬವಿರುತ್ತದೆ. ಅದು ರಾತ್ರಿಯ ಸಮಯ. ರಾತ್ರಿಯಾಗಿರುವುದರಿಂದ, ಅವರ ಕೈಯಲ್ಲಿ ದೀಪಗಳಿರುತ್ತವೆ. ವರನ ಆಗಮನದ ಶಬ್ದ ಕೇಳಿದಾಗ, ಅವರು ಸಿದ್ಧರಾಗಿರಬೇಕು. ಅದೇ ರೀತಿ, ಆತ್ಮ ಮದಲಿಂಗನಾದ ಯೇಸು ಕ್ರಿಸ್ತನು ಬಂದಾಗ, ನಾವು ಅವರನ್ನು ಭೇಟಿಯಾಗಲು ಎಚ್ಚರವಾಗಿರಬೇಕು. ಬುದ್ಧಿಯುಳ್ಳ ಸ್ತ್ರೀಯರು ಮದಲಿಂಗನು ಬಂದಾಗ, ಆರತಿಗಳಲ್ಲಿ ಎಣ್ಣೆ ಸುರಿದು, ಸಿದ್ಧರಾಗಿ, ಮದಲಿಂಗನೊಂದಿಗೆ ಹೋದರು. ಬುದ್ಧಿಯಿಲ್ಲದವರು ಎಣ್ಣೆ ಇಲ್ಲದೆ ಹೋದದರಿಂದ ಮದಲಿಂಗನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.

 

ಇದನ್ನು ಓದುತ್ತಿರುವ ಪ್ರಿಯರೇ, ಇದನ್ನೇ ಪೌಲನು ಸ್ವಸ್ಥಚಿತ್ತರಾಗಿರ್ರಿ. ಎಚ್ಚರವಾಗಿರ್ರಿ; ನಿಮ್ಮ ವಿರೋಧಿ ಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. (1 ಪೇತ್ರ 5:8) ಎಂದು ಹೇಳುತ್ತಾರೆ. ಸೈತಾನನನ್ನು ಎದುರಿಸಿ ನಿಲ್ಲಲು ನಾವು ಎಚ್ಚರವಾಗಿದ್ದು ಪ್ರಾರ್ಥಿಸುವವರಾಗಿರಬೇಕು. ನಾವು ಎಚ್ಚರವಾಗಿದ್ದು ಪ್ರಾರ್ಥಿಸುವಾಗ ನಾವು ಪವಿತ್ರಾತ್ಮನ ಬಲದಿಂದ ತುಂಬಿರುತ್ತೇವೆ. ನಮ್ಮ ಆಧ್ಯಾತ್ಮಿಕ ಜೀವನವು ಆರಿಹೋಗದೆ ಉರಿಯುವ ದೀಪವಾಗಿರುತ್ತದೆ. ಇಲ್ಲದಿದ್ದರೆ, ಪವಿತ್ರಾತ್ಮನ ಅಭಿಷೇಕ ತೈಲವು ಇಲ್ಲದೆ ಹೋಗಿಬಿಡುತ್ತದೆ. ನಾವು ಮದಲಿಂಗನನ್ನು ಭೇಟಿಯಾಗಲು ಸಾಧ್ಯವಾಗದ ದಯನೀಯ ಸ್ಥಿತಿಯು ಏರ್ಪಡುತ್ತದೆ. ಆದ್ದರಿಂದ, ಯಾವಾಗಲೂ ಜಾಗರೂಕರಾಗಿದ್ದು ಸಿದ್ಧವಾಗಿರೋಣ.

- Sis. ಲತಾ

 

ಪ್ರಾರ್ಥನಾ ಅಂಶ:

ಮಿಷನರಿಗಳನ್ನು ಬೆಂಬಲಿಸುವ ಕುಟುಂಬದವರ ಎಲ್ಲೆಗಳಲ್ಲಿ ದೇವರ ಭದ್ರತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş