Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.02.2026
Share:

By Village Missionary Movement

Wednesday, 18-Feb-2026

ಧೈನಂದಿನ ಧ್ಯಾನ(Kannada) – 18.02.2026

 

ಸಮರ್ಪಣೆಯ ಕಾಲ

 

"...ನನ್ನನ್ನು ಅಸಹ್ಯಿಸಿಕೊಂಡು ದೂಳಿಯ ಲ್ಲಿಯೂ ಬೂದಿಯಲ್ಲಿಯೂ ಪಶ್ಚಾತ್ತಾಪ ಪಡುತ್ತೇನೆ ಅಂದನು" - ಯೋಬ 42:6

 

ಈ ದಿನವನ್ನು ಸಾಂಪ್ರದಾಯಿಕ ಚರ್ಚುಗಳಲ್ಲಿ "ಬೂದಿ ಬುಧವಾರ" ಎಂದು ಆಚರಿಸುವುದುಂಟು. ಇಂದಿನಿಂದ ಈಸ್ಟರ್ ವರೆಗಿನ ದಿನಗಳನ್ನು ಲೆಂಟ್ ಹಬ್ಬ ಎಂದು ಕರೆಯಲಾಗುತ್ತದೆ. ಸತ್ಯವೇದದಲ್ಲಿ, "ಬೂದಿ" ಏನನ್ನು ಸೂಚಿಸುತ್ತದೆ ಎಂದರೆ, "ದೇವರ ಮುಂದೆ ತನ್ನನ್ನು ತಗ್ಗಿಸಿಕೊಳ್ಳುವುದನ್ನು" ಸೂಚಿಸುತ್ತಿದೆ. ಉದಾಹರಣೆಗೆ, ಯೋಬ 42:6 ರಲ್ಲಿ, "ನನ್ನನ್ನು ಅಸಹ್ಯಿಸಿಕೊಂಡು ದೂಳಿಯ ಲ್ಲಿಯೂ ಬೂದಿಯಲ್ಲಿಯೂ ಪಶ್ಚಾತ್ತಾಪ ಪಡುತ್ತೇನೆ" ಎಂದು ಹೇಳುತ್ತಾರೆ ಯೋಬನು. ಅಂದರೆ, ಲೆಂಟ್ ದಿನಗಳು ನಮ್ಮನ್ನು ತಗ್ಗಿಸಿಕೊಳ್ಳಲು, ದೇವರ ಮುಂದೆ ನಮ್ಮ ಕೊರತೆಗಳನ್ನು ಪರೀಕ್ಷಿಸಿ, ನಮ್ಮನ್ನು ನಾವೇ ನಿಧಾನವಾಗಿ ಅರಿತು ಸರಿಮಾಡಿಕೊಂಡು, ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯಲು ತಕ್ಕ ಕಾಲ.

 

"ಲೆಂಟ್" ಎಂಬುದರ ಅರ್ಥ "ವಸಂತ" ಎಂಬುದಾಗಿದೆ. ಈ ಕಾಲದಲ್ಲಿ ಪ್ರಕೃತಿ ಕೂಡ ತನ್ನ ಹಳೆಯ ಎಲೆಗಳನ್ನು ಉದುರಿಸಿ ಹೊಸ ಎಲೆಗಳನ್ನು ಬಿಡುತ್ತದೆ. ಆದ್ದರಿಂದ, ನಾವು ನಮ್ಮ ಹಳೆಯ ಪಾಪ ಸ್ವಭಾವಗಳನ್ನು ಬಿಟ್ಟು ಆಂತರಿಕ ಮನುಷ್ಯನು ದಿನದಿಂದ ದಿನಕ್ಕೆ ಹೊಸದಾಗುವುದನ್ನು ಅನುಭವಿಸಬಹುದಾದ ದಿನಗಳು ಇವು. 

 

ಈ ದಿನಗಳಲ್ಲಿ ಅನೇಕ ಬಾಹ್ಯ ನಿರ್ಣಯಗಳನ್ನು ತೆಗೆದುಕೊಂಡು ಅವುಗಳನ್ನು 40 ದಿನಗಳವರೆಗೆ ಕೈಗೊಳ್ಳುವುದು ಒಳ್ಳೆಯದೇ. ಆದರೆ ಮುಖ್ಯವಾಗಿ, ಹೃದಯದಲ್ಲಿ ಬದಲಾವಣೆ ಉಂಟಾಗಬೇಕು. ನಮ್ಮ ಜೀವನದಲ್ಲಿ ದೇವರ ಚಿತ್ತವನ್ನು ಪೂರೈಸುವವರಾಗಿ ಬದುಕಲು, ನಮ್ಮ ದೇಹಗಳನ್ನು ಪರಿಶುದ್ಧವಾಗಿಯೂ, ದೇವರು ವಾಸಿಸುವ ಆಲಯವಾಗಿಯೂ, ಅವರಿಗೆ ಮೆಚ್ಚಿಕೆಯಾದದ್ದನ್ನು ಮಾಡುವ ಹಾಗೆಯೂ ನಮ್ಮನ್ನು ಅರ್ಪಿಸಿಕೊಳ್ಳಬೇಕು. ಕರ್ತನೇ, ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ನನಗೆ ಕಲಿಸು ಎಂಬ ಪ್ರಾರ್ಥನೆ ಮತ್ತು ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು ಎಂಬ ದಾವೀದನ ಪ್ರಾರ್ಥನೆಯು ನಮ್ಮ ದೈನಂದಿನ ಪ್ರಾರ್ಥನೆಯಾಗಿ ಮಾರ್ಪಡಲಿ. 

 

ನಮ್ಮ ಹೃದಯಗಳನ್ನು ಮತ್ತು ದೇಹಗಳನ್ನು ಕರ್ತನಿಗೆ ಒಪ್ಪಿಸಿ, ಎಲ್ಲಾ ರೀತಿಯ ಅನೈತಿಕತೆಯಿಂದ ನಮ್ಮನ್ನು ದೂರವಿರಿಸಿ, ಸಮರ್ಪಣೆಯ ಹೃದಯದೊಂದಿಗೆ ಉಪವಾಸ ಮಾಡಿ ಮನತಿರುಗಿ, ಲೆಂಟ್‌ ದಿನಗಳಲ್ಲಿ ಪೂರ್ಣ ಆಶೀರ್ವಾದವನ್ನು ಪಡೆದುಕೊಳ್ಳೋಣ. ಆಮೆನ್.

- Rev. S. ಜ್ಯೋತಿನಾಯಗಂ

 

ಪ್ರಾರ್ಥನಾ ಅಂಶ:

ಉತ್ತರ ಪ್ರಾಂತ್ಯದ ಮಿಷನರಿಗಳ ಭದ್ರತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482