By Village Missionary Movement
Tuesday, 17-Feb-2026ಧೈನಂದಿನ ಧ್ಯಾನ(Kannada) – 17.02.2026
ಪಾಪಗಳು ತೊಳೆಯಲ್ಪಡಲಿ
"ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು" - 1 ಯೋಹಾನ 1:9
ಇಟಲಿಯಲ್ಲಿ ಫ್ಲಾರೆನ್ಸ್ ಎಂಬ ನಗರದಲ್ಲಿ ಬಹುದೊಡ್ಡ ರಕ್ಷಣೆಯ ಉಜ್ಜೀವನವನ್ನು ತಂದವರೇ ಸ್ವರ್ಣರೋಲಾ ಎಂಬ ದೇವ ಸೇವಕರು. ಅವರ ದಿನಗಳಲ್ಲಿ, ಪಾಪ ಮತ್ತು ರಕ್ಷಣೆಯ ಬಗ್ಗೆ ಪ್ರಸಂಗ ಮಾಡಿದರೆ ಜನರು ಎದ್ದು ಹೊರಟು ಹೋಗುತ್ತಿದ್ದರು. ಚರ್ಚುಗಳು ಸಹ ಖಾಲಿಯಾಗುತ್ತಿದ್ದವು. ಇದನ್ನು ನೋಡಿದ ಸ್ವರ್ಣರೋಲಾ ಸಭೆಗಳಿಗಾಗಿ ಮತ್ತು ರಕ್ಷಣೆ ಹೊಂದದ ಜನರಿಗಾಗಿ ಗಂಟೆಗಟ್ಟಲೆ ಉಪವಾಸ ಮಾಡಿ ಮೊಣಕಾಲಲ್ಲಿ ನಿಂತು ಪ್ರಾರ್ಥಿಸುತ್ತಿದ್ದರು. ದೇವರ ಮಾರ್ಗದರ್ಶನಕ್ಕಾಗಿ ಅತ್ತು ಪ್ರಾರ್ಥಿಸುವುದನ್ನು ಅವರು ಅಭ್ಯಾಸ ಮಾಡಿಕೊಂಡಿದ್ದರು. ಪರಿಶುದ್ಧಾತ್ಮನು ಅವರಿಗೆ ಪ್ರವಾದನೆಯಾಗಿ ಅನೇಕ ವಿಷಯಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದರು. ಅವರ ಪ್ರಾರ್ಥನೆಯ ಪರಿಣಾಮವಾಗಿ, ಸಭೆಗಳು ಜನರು ಕುಳಿತುಕೊಳ್ಳಲು ಸಹ ಸ್ಥಳವಿಲ್ಲದಷ್ಟರ ಮಟ್ಟಿಗೆ ತುಂಬಿ ತುಳುಕುತ್ತಿತ್ತು.
ಹೀಗೆ ಈ ಪಟ್ಟಣವು ರಕ್ಷಣೆಯ ಸಂದೇಶದಿಂದ ಕದಲಿಸಲ್ಪಟ್ಟಿತು. ಪಾಪದ ಬಗ್ಗೆ ಇವರ ಪ್ರಸಂಗ ಮತ್ತು ಸತ್ಯವೇದ ವಾಕ್ಯಗಳು ಜನರ ಹೃದಯಗಳಲ್ಲಿ ಕ್ರಿಯೆ ಮಾಡಿತು. ದೇವರ ಶಕ್ತಿಯುತ ಮಾತುಗಳು ಅವರ ಜೀವನವನ್ನು ಬದಲಾಯಿಸಿದವು. ಈ ಪಟ್ಟಣದ ಜನರು ತಮ್ಮ ಪಾಪಗಳನ್ನು ಒಪ್ಪಿಕೊಂಡರು, ಯೇಸುಕ್ರಿಸ್ತನ ರಕ್ತದಿಂದ ತಮ್ಮನ್ನು ಶುದ್ಧೀಕರಿಸಿಕೊಂಡರು, ರಕ್ಷಣೆಯ ಆನಂದವನ್ನು ಪಡೆದರು ಮತ್ತು ಪವಿತ್ರ ಜೀವನವನ್ನು ನಡೆಸಲು ತಮ್ಮನ್ನು ಸಮರ್ಪಿಸಿಕೊಂಡರು.
ಪ್ರೀತಿಯ ದೇವರ ಮಕ್ಕಳೇ! ಯೇಸುಕ್ರಿಸ್ತನ ರಕ್ತದಿಂದ ನಿಮ್ಮ ಪಾಪಗಳು ತೊಳೆಯಲ್ಪಟ್ಟಿವೆಯೇ? ಅಥವಾ ಪಾಪದಿಂದ ತೊಳೆಯಲ್ಪಟ್ಟ ನಾನು ಮತ್ತೆ ಪಾಪದಲ್ಲಿ ಬಿದ್ದುಹೋದೆನಲ್ಲಾ, ಯೇಸು ನನ್ನನ್ನೂ ಕ್ಷಮಿಸುತ್ತಾರಾ ಎಂದು ಪರಿತಪಿಸುತ್ತಿದ್ದೀರಾ? ಪಾಪದಲ್ಲಿ ಬಿದ್ದುಹೋದ ದಾವೀದನು ಸಹ ತನ್ನ ಪಾಪವನ್ನು ಒಪ್ಪಿಕೊಂಡು ಮನತಿರುಗಿದರು (ಕೀರ್ತನೆ 51). ಕೀರ್ತನೆ 32:5 ರಲ್ಲಿ, "ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ" ಎಂದು ಮಸ್ಕೀಲ್ ಎಂಬ ಬೋಧನೆಯ ಕೀರ್ತನೆಯಲ್ಲಿ ಬರೆಯಲ್ಪಟ್ಟಿದೆ.
ಪ್ರೀತಿಯ ದೇವರ ಮಗುವೇ, ನೀವು ತಪ್ಪಿತಸ್ಥ ಮನಸ್ಸಾಕ್ಷಿಗೆ ಅವಕಾಶ ನೀಡದೆ ನಿಮ್ಮ ಪಾಪಗಳನ್ನು ದೇವರ ಬಳಿ ಅರಿಕೆ ಮಾಡಿದರೆ, ದೇವರು ಅವುಗಳನ್ನು ಬಿಟ್ಟುಬಿಡಲು ಶಕ್ತಿ ನೀಡುತ್ತಾರೆ. ಪ್ರತಿದಿನ ಒಂಟಿಯಾಗಿ ಅಥವಾ ಸ್ನೇಹಿತರೊಂದಿಗೆ ಸೇರಿ ಬೈಬಲ್ ಓದಿ ಧ್ಯಾನ ಮಾಡಿರಿ. ದೇವರ ಮಕ್ಕಳೊಂದಿಗೆ ಸಹವಾಸಮಾಡಿರಿ. ಸಾಕ್ಷಿಯಾಗಿ ನಿಮ್ಮ ರಕ್ಷಣೆಯ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳಿ. ನೀವು ಪಡೆದ ರಕ್ಷಣೆಯಲ್ಲಿ ನೆಲೆಗೊಳ್ಳಲು ದೇವರು ನಿಮಗೆ ಕೃಪೆ ತೋರಲಿ.
- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್
ಪ್ರಾರ್ಥನಾ ಅಂಶ:
ಉತ್ತರ ಪ್ರಾಂತ್ಯಗಳಲ್ಲಿನ ಮಿಷನರಿಗಳನ್ನು ದೇವರು ಶಕ್ತಿಯುತವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482