By Village Missionary Movement
Monday, 16-Feb-2026ಧೈನಂದಿನ ಧ್ಯಾನ(Kannada) – 16.02.2026
ಗುಂಡಿಗಳನ್ನು ತೋಡಿರಿ
"...ಈ ಹಳ್ಳದಲ್ಲಿ ತುಂಬಾ ಗುಂಡಿಗಳನ್ನು ಮಾಡಿರಿ" - 2 ಅರಸುಗಳು 3:16
ಇಸ್ರಾಯೇಲ್ ಅರಸನಿಗೆ ವಿರುದ್ಧವಾಗಿ ಮೋವಾಬಿನ ಅರಸನು ಯುದ್ಧಕ್ಕೆ ಬಂದರು. ಆಗ ಇಸ್ರಾಯೇಲ್ ರಾಜನು ಎದೋಮಿನ ರಾಜನನ್ನು ತನ್ನ ಸಹಾಯಕ್ಕೆ ಬರಲು ಕರೆಯುತ್ತಾರೆ. ಇಬ್ಬರೂ ಬರುತ್ತಾರೆ. ಮೂವರು ರಾಜರು ಮತ್ತು ಅವರ ಸೈನ್ಯಗಳು ಎದೋಮಿನ ಅರಣ್ಯದ ಮೂಲಕ ಹೋದರು. ಅವರು ಏಳು ದಿನಗಳ ಕಾಲ ಅರಣ್ಯದಲ್ಲಿ ಅಲೆದಾಡಿದರು, ನೀರಿಲ್ಲ. ಸೈನಿಕರು ಮತ್ತು ಪ್ರಾಣಿಗಳು ನೀರಿಲ್ಲದ ಕಾರಣ ದಣಿದಿದ್ದರು. ಇಸ್ರಾಯೇಲ್ ರಾಜನು ಕರ್ತನನ್ನು ವಿಚಾರಿಸಲು ಪ್ರವಾದಿಯನ್ನು ಕರೆದುಕೊಂಡು ಬರಲು ಹೇಳಿದರು. ಪ್ರವಾದಿಯಾದ ಎಲೀಷನು ಬಂದರು. ಆಗ ಪ್ರವಾದಿಯಾದ ಎಲೀಷನು, ಈ ಹಳ್ಳದಲ್ಲಿ ತುಂಬಾ ಗುಂಡಿಗಳನ್ನು ಮಾಡಿರಿ. ಗಾಳಿ ಮಳೆಯಿಲ್ಲದೆ ಹಳ್ಳಗಳು ನೀರಿನಿಂದ ತುಂಬುತ್ತವೆ. ನೀವು ಮತ್ತು ನಿಮ್ಮ ಪ್ರಾಣಿಗಳು ಕುಡಿದು ತೃಪ್ತರಾಗಿರಿ. ಮೋವಾಬ್ಯರನ್ನು ನಿಮ್ಮ ಕೈಗೆ ಒಪ್ಪಿಸುವರು ಎಂದು ಹೇಳಿದರು. ಅದರಂತೆಯೇ ನಡೆಯಿತು.
ಕರ್ತನು ಹೇಳಿದರೆ ಅದನ್ನು ನೆರವೇರಿಸುತ್ತಾರೆ, ನೀವು ಸಹ ನಿಮ್ಮ ಜೀವನದಲ್ಲಿ ಯಾವುದೋ ಒಂದು ಕಾರ್ಯದಲ್ಲಿ ಕಾದಿದ್ದು ಸಿಗದೇ ಸೋತುಹೋಗಿದ್ದೀರಾ? ಯಾವುದೋ ಒಂದು ಕೊರತೆಯಿಂದ ಕಷ್ಟದಿಂದ, ವೇದನೆಯಿಂದ ಇದ್ದೀರಾ? ಹಾಗಾದರೆ ಗುಂಡಿಗಳನ್ನು ತೋಡಿರಿ. ನೀವು ಯೋಚಿಸಿದ ಮತ್ತು ನಿರೀಕ್ಷಿಸಿದ ವಿಷಯವು ಸಿಗುತ್ತದೆ, ಕೊರತೆಯು ಸಂಪೂರ್ಣವಾಗುತ್ತದೆ. ಗುಂಡಿಗಳನ್ನು ತೋಡುವುದು ಎಂಬುದು ನಮ್ಮ ಪ್ರಾರ್ಥನಾ ಜೀವನ, ಸತ್ಯವೇದ ಧ್ಯಾನ ಮತ್ತು ಪರಿಶುದ್ಧತೆ. ಇವುಗಳನ್ನು ನಾವು ಪರೀಕ್ಷಿಸಿ ನೋಡಿ ನಮ್ಮನ್ನು ಸರಿಪಡಿಸಿಕೊಳ್ಳುವಂಥದ್ದಾಗಿದೆ. ಗುಂಡಿಗಳನ್ನು ತೋಡಿ ಆತನಿಗೆ ಹತ್ತಿರವಾಗಬೇಕು. ನಾವು ಹಾಗೆ ಮಾಡಿದಾಗ, ನಾವು ಯಶಸ್ಸನ್ನು ಸಾಧಿಸಲು ಸಾಧ್ಯ.
ಯೆಹೋಶುವನು ಇಸ್ರಾಯೇಲ್ ಜನರನ್ನು ಮುನ್ನಡೆಸುತ್ತಿದ್ದಾಗ, ಅವರ ಮುಂದೆ ಯೊರ್ದಾನ್ ಬಂದಾಗ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ, ನಾಳೆ ಕರ್ತನು ನಿಮ್ಮ ನಡುವೆ ಅದ್ಭುತಗಳನ್ನು ಮಾಡುತ್ತಾರೆ ಎಂದು ಹೇಳಿದರು. ಹೌದು, ಅದ್ಭುತಗಳು ನಡೆಯಬೇಕಾದರೆ, ದೇವರೊಂದಿಗಿನ ನಮ್ಮ ವೈಯಕ್ತಿಕ ಸಂಬಂಧವನ್ನು ಸರಿಪಡಿಸಬೇಕು. ಅದನ್ನು ನಾವು ಪರೀಕ್ಷಿಸಿ ನೋಡಿ ಸರಿಪಡಿಸಿಕೊಳ್ಳೋಣ. ಆಗ ನಮ್ಮ ಅಗತ್ಯಗಳು ಪೂರೈಸಲ್ಪಡುವುದು ಮಾತ್ರವಲ್ಲದೆ ಕರ್ತನು ನಮ್ಮನ್ನು ಅನೇಕರಿಗೆ ಆಶೀರ್ವಾದವಾಗಿಯೂ ಉಪಯೋಗಿಸುತ್ತಾರೆ.
- Bro.ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ಪ್ರತಿ ರಾಜ್ಯದಲ್ಲಿ 500 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482