By Village Missionary Movement
Saturday, 14-Feb-2026ಧೈನಂದಿನ ಧ್ಯಾನ(Kannada) – 14.02.2026
ನಿಜವಾದ ಪ್ರೀತಿ ಯಾವುದು?
"...ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಲು..." - ಯೋಹಾನ 21:16
ಸತ್ಯವೇದವನ್ನು ಓದುವ ನಮಗೆ, ಯೇಸು ಕ್ರಿಸ್ತನು ಮಾತ್ರವೇ ತುಂಬಾ ಪ್ರಿಯವಾದವರು. ಅವರ ಪ್ರೀತಿಯು ಒಂದು ಗುಂಪಿನ ಜನರಿಗೆ ಮಾತ್ರವೇ ಸೀಮಿತವಲ್ಲ, ಯೋಹಾನ 3:16 ರಲ್ಲಿರುವಂತೆ, ಅವರು ಇಡೀ ಜಗತ್ತನ್ನು ಎಷ್ಟೋ ಪ್ರೀತಿಸಿದರು. ಇದನ್ನು ಓದುತ್ತಿರುವ ಯೌವನಸ್ಥರಿಗೆ ನಾನು ಒಂದೇ ಒಂದು ವಿಷಯವನ್ನು ಉಲ್ಲೇಖಿಸುತ್ತೇನೆ.
ಸತ್ಯವೇದದಲ್ಲಿ ಪರಮಗೀತೆ ಎಂಬ ಪುಸ್ತಕವಿದೆ. ಅದೊಂದು ಅದ್ಭುತವಾದ ಪ್ರೇಮಪತ್ರ (Love letter). ಇಂತಹ ಒಂದು ಪ್ರೇಮಪತ್ರವನ್ನು ಯಾರೂ ಬರೆದಿಲ್ಲ, ಮತ್ತು ಇನ್ನು ಮುಂದೆ ಯಾರೂ ಬರೆಯುವುದೂ ಇಲ್ಲ. ಪ್ರೀತಿಯ ಮದಲಿಂಗ - ಯೇಸು, ಪ್ರೀತಿಯ ಮದಲಗಿತ್ತಿ - ಸಭೆ. ಪರಮಗೀತೆ 4:7 ರಲ್ಲಿ, "ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿಯು, ನಿನ್ನಲ್ಲಿ ಕಳಂಕವೇನೂ ಇಲ್ಲ". ಕ್ರಿಸ್ತನ ಪ್ರೀತಿಯು ಶಿಲುಬೆಯಲ್ಲಿ ಬಹಿರಂಗವಾಯಿತು. ಅವರು ಯಾರನ್ನೂ ಖಂಡಿಸಲೂ ಇಲ್ಲ, ಯಾರಿಗೂ ತೀರ್ಪು ಮಾಡಲೂ ಇಲ್ಲ, ಬದಲಿಗೆ ಎರಡೂ ತೋಳುಗಳನ್ನು ಚಾಚಿ ಎಲ್ಲರನ್ನೂ ಅಪ್ಪಿಕೊಳ್ಳುವ ದೊಡ್ಡ ಪ್ರೀತಿ. ಯೋಹಾನ 8:11 ರಲ್ಲಿ, ಆತನು ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಮಹಿಳೆಯನ್ನು ನೋಡಿ, "ಹೋಗು, ಇನ್ನು ಮೇಲೆ ಪಾಪಮಾಡಬೇಡ" ಅಂದನು. ಕಲ್ಲೆಸೆಯಲು ಮನಸ್ಸಿಲ್ಲದ ಪ್ರೀತಿ.
ಪರ್ವತ ಪ್ರಸಂಗದ ಸಮಯದಲ್ಲಿ ಜನರ ಮೇಲೆ ಕನಿಕರಪಟ್ಟು ಅವರಿಗೆ ಆಹಾರ ನೀಡಿದ ಪ್ರೀತಿ. ಮಾರ್ಥಾ ಮತ್ತು ಮರಿಯಳ ಸಹೋದರ ಲಾಜರನು ಸತ್ತಾಗ ಅವರ ಕಣ್ಣೀರನ್ನು ಒರೆಸಿದ ಪ್ರೀತಿ. ಕುಷ್ಠರೋಗಿಗಳನ್ನು ಗುಣಪಡಿಸಿದ ಪ್ರೀತಿ. ಕುರುಡರಿಗೆ ದೃಷ್ಟಿ ನೀಡಿದ ಪ್ರೀತಿ. ದೆವ್ವ ಹಿಡಿದವರನ್ನು ಬಿಡುಗಡೆ ಮಾಡಿದ ಪ್ರೀತಿ. ಶಿಲುಬೆಯಲ್ಲಿ ಸಾಯುತ್ತಿರುವಾಗಲೂ, "ತಂದೆಯೇ, ಅವರನ್ನು ಕ್ಷಮಿಸು" ಎಂದು ಹೇಳಿದ ಪ್ರೀತಿ. ತನ್ನನ್ನು ನಿರಾಕರಿಸಿದ ಪೇತ್ರನನ್ನು ಮೂರು ಬಾರಿ ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದು ಕೇಳಿ "ನನ್ನ ಕುರಿಗಳನ್ನು ಮೇಯಿಸು" ಎಂದು ಆಜ್ಞಾಪಿಸಿದ ಪ್ರೀತಿ. ಯೇಸುವಿನ ಪ್ರೀತಿ ಮಾತ್ರವೇ ಸ್ಥಿರ ಮತ್ತು ಸತ್ಯ. ನಮ್ಮನ್ನು ಪ್ರೀತಿಸುವ ಪ್ರೀತಿಯು ನಾವು ಬಿದ್ದರೂ-ಬದುಕಿದರೂ, ಗೆದ್ದರೂ-ಸೋತರೂ, ಆರೋಗ್ಯದಲ್ಲೂ- ರೋಗದಲ್ಲೂ, ಸಮೃದ್ಧಿಯಲ್ಲೂ-ಕೊರತೆಯಲ್ಲೂ ನಮ್ಮನ್ನು ಒಂದೇ ರೀತಿ ಪ್ರೀತಿಸುವ ಪ್ರೀತಿ ಯೇಸುವಿನ ಪ್ರೀತಿ ಮಾತ್ರವೇ!
ಪ್ರಿಯ ಯೌವನಸ್ಥರೇ, ಈ ಲೋಕದಲ್ಲಿ ಯೇಸು ಕ್ರಿಸ್ತನ ಪ್ರೀತಿಗಿಂತ ಹೆಚ್ಚು ಪ್ರೀತಿಸಲು ಯಾರಿಗೂ ಸಾಧ್ಯವಿಲ್ಲ. ಇಡೀ ಲೋಕಕ್ಕಾಗಿ ತನ್ನ ಪ್ರಾಣವನ್ನೇ ನೀಡಲು ಬಂದ ಯೇಸುವಿನ ಪ್ರೀತಿಗಿಂತ ಹೆಚ್ಚಿನ ಪ್ರೀತಿ ಇನ್ನೊಂದಿಲ್ಲ. ವಿರುದ್ಧ ಲಿಂಗದ ಪ್ರೀತಿಗಾಗಿ ಹಾತೊರೆದು ಮೋಸಹೋಗಬೇಡಿರಿ! ಯೇಸು ನಿನ್ನನ್ನು ಪ್ರೀತಿಸುತ್ತಾರೆ ಆಮೆನ್.
- Rev. S. ಎಸ್. ಜ್ಯೋತಿನಾಯಗಂ
ಪ್ರಾರ್ಥನಾ ಅಂಶ:
ಎಲ್ಲಾ ತಾಲೂಕುಗಳಲ್ಲಿ ಚೈನ್ ಪ್ರೆಯರ್ ಮಾಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482