By Village Missionary Movement
Friday, 13-Feb-2026దిన ధ్యానము(Telugu) 13.02.2026
ಯೌವನ ಪ್ರಾಯ- ಇಂಪಾದ ಪ್ರಾಯ
"...ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು." - ಪ್ರಸಂಗಿ 12:1
ಅಮೆರಿಕದ ರಾಕ್‌ಫೆಲ್ಲರ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಒಮ್ಮೆ, ಅವರು ನಡೆದುಕೊಂಡು ಹೋಗುತ್ತಿದ್ದಾಗ, ಒಬ್ಬ ಸುಂದರ, ಬಲಿಷ್ಠ ಯುವಕ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ. ರಾಕ್‌ಫೆಲ್ಲರ್ ಅವನನ್ನು ತಡೆದು ಕಾರಣವನ್ನು ಕೇಳಿದರು. ನಾನು ಅತ್ಯುನ್ನತ ಶಿಕ್ಷಣವನ್ನು ಪಡೆದಿದ್ದೇನೆ, ಆದರೆ ನನಗೆ ಅದಕ್ಕೆ ಸರಿಹೊಂದುವ ಸಂಬಳ ಅಥವಾ ಕೆಲಸ ಸಿಗುತ್ತಿಲ್ಲ. ತೀವ್ರ ಬಡತನದಿಂದ ನನ್ನ ಜೀವನದಲ್ಲಿ ಸಂತೋಷವೆಂಬುದು ಸ್ವಲ್ಪವೂ ಇಲ್ಲ. ಅದಕ್ಕಾಗಿಯೇ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನೀವು ಯಾರು? ಎಂದು ಕೇಳಿದನು. ನಂತರ ರಾಕ್‌ಫೆಲ್ಲರ್ ತನ್ನನ್ನು ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಪರಿಚಯಿಸಿಕೊಂಡರು.
ತಕ್ಷಣ, ಆ ಯುವಕ, ನೀವು ಎಲ್ಲಾ ಸೌಲಭ್ಯಗಳೊಂದಿಗೆ ಸಂತೋಷದಿಂದ ಮತ್ತು ಆರಾಮವಾಗಿ ಬದುಕುತ್ತಿದ್ದೀರಿ. ನೀವು ನನಗೆ ನಿಮ್ಮ ಸಂಪತ್ತಿನ ಒಂದು ಭಾಗವನ್ನು ಕೊಟ್ಟರೂ, ನಾನು ಕೂಡ ಸಂತೋಷದಿಂದ ಬದುಕುತ್ತೇನೆ ಎಂದು ಹೇಳಿದನು. ರಾಕ್‌ಫೆಲ್ಲರ್, ಒಂದು ಭಾಗ ಏಕೆ, ನನ್ನ ಎಲ್ಲಾ ಸಂಪತ್ತನ್ನು ಕೊಟ್ಟು ಬಿಡುತ್ತೇನೆ. ಆದರೆ ನೀನು ನನಗೆ ಒಂದು ಕೊಡಬೇಕು ಎಂದರು. ನಾನೇ ತುಂಬಾ ಬಡವ, ನಾನು ನಿಮಗೆ ಏನು ಕೊಡಲು ಸಾಧ್ಯ? ಎಂದನು. ನಿನ್ನ ಅಮೂಲ್ಯವಾದ ಯೌವನವನ್ನು ನನಗೆ ಕೊಡಬೇಕು ಕೊಡುತ್ತೀಯಾ? ಎಂದರು. ಎಷ್ಟೇ ಸಂಪತ್ತಿದ್ದರೂ, ಅದು ಯೌವನಕ್ಕೆ ಸಮಾವಾಗುವುದಿಲ್ಲ ಎಂದು ಅರ್ಥಮಾಡಿಕೊಂಡ ಆ ಯುವಕ ಕಷ್ಟಪಟ್ಟು ದುಡಿದು ಪ್ರಗತಿ ಸಾಧಿಸಲು ನಿರ್ಧರಿಸಿದನು. ಹೌದು, ಉತ್ಸಾಹಭರಿತ ರೋಮಾಂಚಕ ಯೌವನಪ್ರಾಯವೇ ಅಮೂಲ್ಯ ಆಸ್ತಿ. ನಮ್ಮಲ್ಲಿ ಅನೇಕರು ಅದನ್ನು ಅರಿತುಕೊಳ್ಳುವುದಿಲ್ಲ.
ಸಾಮಾಜಿಕ ಮಾಧ್ಯಮವು ನಿನ್ನನ್ನು ಉರುಳಿಸಲು ಮತ್ತು ನಾಶಮಾಡಲು ನಿನ್ನೊಂದಿಗೆ ಪ್ರಯಾಣಿಸುತ್ತಿದೆ. ಸಿನಿಮಾ ವ್ಯಾಮೋಹ, ಆಕರ್ಷಣೆ, ಮಾದಕ ವಸ್ತುಗಳ ಸೆಳೆತ, ಲೈಂಗಿಕ ಬಯಕೆಗಳು.... ಮತ್ತು ಇನ್ನೂ ಅನೇಕ. ಲೌಕಿಕ ಸುಖಗಳಿಗೆ ಅವಕಾಶ ನೀಡುವ ಮೂಲಕ ನಿನ್ನ ಈ ಅಮೂಲ್ಯ ಯೌವನವನ್ನು ಕಳೆದುಕೊಳ್ಳಬೇಡ. ನಿನ್ನ ಯೌವನದಲ್ಲಿ ನೀನು ಮಾಡುವ ತಪ್ಪುಗಳು ವೃದ್ಧಾಪ್ಯದವರೆಗೂ ರಹಸ್ಯವಾಗಿ ನಿನ್ನನ್ನು ಹಿಂಬಾಲಿಸುತ್ತವೆ, ನಿನ್ನನ್ನು ಅವಮಾನಕ್ಕೆ ದೂಡುತ್ತವೆ.
ನನಗೆ ಪ್ರಿಯರಾದ ಯೌವನ ಮಕ್ಕಳೇ, ಜಾಗರೂಕನಾಗಿರು! ಮನತಿರುಗು! ಯೌವನದಲ್ಲಿ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು. ಆತನ ಕೈಗಳಿಗೆ ನಿನ್ನನ್ನು ಒಪ್ಪಿಸಿಕೊಡು. ದೇವರು ನಿನ್ನನ್ನು ಕಾಪಾಡುತ್ತಾರೆ ಮತ್ತು ಆಶೀರ್ವದಿಸುತ್ತಾರೆ.
- Mrs.ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ಮಿಷನರಿ ತರಬೇತಿ ಕಟ್ಟಡದ ನಿರ್ಮಾಣಕ್ಕೆ ಹಣಕಾಸಿನ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ఈ దిన ధ్యాన సందశమును తమిళ్, ఇంగ్లీష్ , హిందీ, మలయాళం, తెలుగు, కన్నడ, పంజాబీ మరియు ఒరియా బాషలలో వాట్సాప్ త్వరా పొందుటకు *+91 94440 11864* అనే నెంబర్ ను సంబ్రదించగలరు.
www.vmm.org.in
ఈమెయిల్: info@vmm.org.in
Android App: https://play.google.com/store/apps/details?id=com.infobells.vmmorgin
విలేజ్ మిషనరీ మూమెంట్, విరుదునగర్, ఇండియా- 626001
ప్రార్ధనా అవసరాల కోసం: +91 94424 93250