By Village Missionary Movement
Thursday, 12-Feb-2026ಧೈನಂದಿನ ಧ್ಯಾನ(Kannada) – 12.02.2026
ಅಂಗೀಕರಿಸುವಿಕೆ
“…ಬಹು ಮಂದಿ ಸುಂಕದವರೂ ಪಾಪಿಗಳೂ ಬಂದು ಯೇಸುವಿನ ಮತ್ತು ಆತನ ಶಿಷ್ಯರ ಪಙ್ತಿಯಲ್ಲೇ ಕೂತುಕೊಂಡರು" - ಮತ್ತಾ. 9:10
1980 ರ ದಶಕದಲ್ಲಿ ಪ್ರಸಿದ್ಧ ಸುವಾರ್ತಾಬೋಧಕ ಜಿಮ್ ವಾಕರ್ ಕ್ರಿಶ್ಚಿಯನ್ ಟಿವಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಅವರು ಒಮ್ಮೆ ಹಣ ವರ್ಗಾವಣೆ ಮತ್ತು ತಪ್ಪು ನಡವಳಿಕೆಯ ಕಾರಣದಿಂದಾಗಿ ಜೈಲಿನಲ್ಲಿದ್ದರು. ಕ್ರಿಶ್ಚಿಯನ್ ಸಮುದಾಯವು ಅವರ ಮೇಲೆ ಕೋಪಗೊಂಡಿತು. ಆದರೆ ಜಿಮ್ ವಾಕರ್ ಬಿಡುಗಡೆಯಾದಾಗ, ಬಿಲ್ಲಿ ಗ್ರಹಾಂ ಮತ್ತು ಅವರ ಪತ್ನಿ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದರು. ಊಟದ ಮೇಜಿನ ಬಳಿ ಮಾತನಾಡುತ್ತಿರುವಾಗ, ಜಿಮ್ ಒಬ್ಬರ ವಿಳಾಸವನ್ನು ನೀಡಲು ಪೇಪರ್ ಕವರ್ ಅನ್ನು ಎತ್ತಿಕೊಂಡಾಗ, ಬಿಲ್ಲಿ ಗ್ರಹಾಂ ರವರ ಪತ್ನಿ ನಿಮ್ಮ ಬಳಿ ಪರ್ಸ್ ಇಲ್ಲವೇ?" ಎಂದು ಕೇಳಿದರು. ನಾನು ಜೈಲಿನಲ್ಲಿದ್ದಾಗ ಯಾರೋ ನನ್ನ ಪರ್ಸ್ ಅನ್ನು ಎತ್ತಿಕೊಂಡುಬಿಟ್ಟರು. ನಾಲ್ಕು ವರ್ಷಗಳಿಂದ, ಹೀಗೆ ಪೇಪರ್ ಕವರ್ ನಲ್ಲೇ ನನ್ನ ಪ್ರಮುಖ ವಸ್ತುಗಳನ್ನು ಇಡುತ್ತಿದ್ದೇನೆ ಎಂದರು. ಬಿಲ್ಲಿ ಗ್ರಹಾಂ ರವರ ಪತ್ನಿ ತಕ್ಷಣ ಅವರಿಗೆ ಒಂದು ಹೊಸ ಪರ್ಸ್ ಅನ್ನು ತಂದುಕೊಟ್ಟರು. ಆ ದಿನದಿಂದ, ಜಿಮ್ ವಾಕರ್ ಬಿಲ್ಲಿ ಗ್ರಹಾಂ ಅವರ ಪರ್ಸ್ ಅನ್ನು ಬಳಸಿದರು. ಯಾವುದೇ ಹಳೆಯ ಸಮಸ್ಯೆಗಳ ಬಗ್ಗೆ ಕೇಳದೆ, ಅವರೊಂದಿಗೆ ಪ್ರೀತಿಯಿಂದ ಮಾತನಾಡಿ, ಅವರಿಗಾಗಿ ಪ್ರಾರ್ಥಿಸಿ ಅವರನ್ನು ಕಳುಹಿಸಿಕೊಟ್ಟರು.
ಹೌದು, ಅದೇ ರೀತಿ, ಯೇಸು ಕ್ರಿಸ್ತನು ಭೂಮಿಯಲ್ಲಿ ವಾಸಿಸುತ್ತಿದ್ದಾಗ, ಅವರು ಪಾಪಿಗಳಾಗಲಿ ಅಥವಾ ತೆರಿಗೆ ವಸೂಲಿಗಾರರಾಗಲಿ, ಎಲ್ಲರನ್ನೂ ಸ್ವೀಕರಿಸಿದರು ಮತ್ತು ಅವರನ್ನು ಪ್ರೀತಿಯಿಂದ ನಡೆಸಿಕೊಂಡರು. ಅವರು ತೆರಿಗೆ ವಸೂಲಿಗಾರನಾದ ಜಕ್ಕಾಯನ ಮನೆಗೆ ಹೋಗಿ ರಕ್ಷಣೆಯನ್ನು ಆಜ್ಞಾಪಿಸಿದರು. ಒಮ್ಮೆ, ಶಾಸ್ತ್ರಿಗಳು ಮತ್ತು ಫರಿಸಾಯರು ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಒಬ್ಬ ಮಹಿಳೆಯನ್ನು ಅವರ ಬಳಿಗೆ ಕರೆತಂದು, ಇಂತವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆ ಧರ್ಮಶಾಸ್ತ್ರದಲ್ಲಿ ಆಜ್ಞಾಪಿಸಿದ್ದಾರಲ್ಲಾ ಎಂದು ಹೇಳಿ ಕಲ್ಲೆಸೆಯಲು ಸಿದ್ಧರಾಗಿದ್ದರು. ಆಗ ಯೇಸು ಕ್ರಿಸ್ತನು, ನಿಮ್ಮಲ್ಲಿ ಪಾಪಮಾಡದವನು ಮೊದಲು ಅವಳ ಮೇಲೆ ಕಲ್ಲು ಎಸೆಯಲಿ ಎಂದು ಹೇಳಿದರು. ತಕ್ಷಣ, ದೊಡ್ಡವರಿಂದ ಹಿಡಿದು ಚಿಕ್ಕವರವರೆಗೆ ಎಲ್ಲರೂ ಒಬ್ಬೊಬ್ಬರಾಗಿ ಹೊರಟುಹೋದರು.
ಇತರರನ್ನು ಪಾಪಿಗಳು ಮತ್ತು ಅಪರಾಧಿಗಳು ಎಂದು ನೋಡುವ ನಾವು ಸಹ ಯಾವುದೋ ಒಂದು ಪಾಪದಲ್ಲಿ ಇದ್ದೇವೆ. ಅದನ್ನೇ ಪೌಲನು, "ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ" ಎಂದು ರೋಮಾ 3:10 ರಲ್ಲಿ ಹೇಳಿದ್ದಾರೆ. ಯೇಸು ಕ್ರಿಸ್ತನು ಸಹ ತಂದೆಯನ್ನು ಹೊರತುಪಡಿಸಿ ಒಳ್ಳೆಯವನು ಒಬ್ಬನೂ ಇಲ್ಲ ಎಂದು ಹೇಳುತ್ತಾರೆ. ಹಾಗಾದರೆ ನಾವು ಇತರರೊಂದಿಗೆ ಸಹವಾಸ ಮಾಡಿ ಅವರನ್ನು ಸ್ವೀಕರಿಸಲು ಹಿಂಜರಿಯುವುದೇಕೆ?
ಪ್ರಿಯರೇ, "ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ" (ರೋಮಾ 5:8). ನಾವು ಸಹ ನಮ್ಮ ಪ್ರೀತಿಯನ್ನು ಬಹಿರಂಗಪಡಿಸುವ ಹಾಗೆ ಎಲ್ಲರನ್ನೂ ಅಂಗೀಕರಿಸೋಣ. ಮತ್ತು ಒಂದು ಕಾಲದಲ್ಲಿ ಎಲ್ಲರೂ ಪಾಪ ಮಾಡಿದವರೇ ಎಂದು ಹೇಳಿ, ಮತ್ತೆ ಮತ್ತೆ ಪಾಪದಲ್ಲಿ ಮುಂದುವರೆಯದೇ ಕರ್ತನ ಕೃಪೆಯಿಂದ ವಿಮೋಚಿಸಲ್ಪಡೋಣ. ಇಂದೇ ರಕ್ಷಣೆಯ ದಿನ!
- Mrs. ಅನ್ಬು ಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಮಿಷನರಿ ತರಬೇತಿ ಕಟ್ಟಡವನ್ನು ನಿರ್ಮಿಸಲು ಸರ್ಕಾರದ ಅನುಮತಿ ಸಿಗುವುದಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482