Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.06.2021
Share:

By Village Missionary Movement

Monday, 14-Jun-2021

ಧೈನಂದಿನ ಧ್ಯಾನ(Kannada) – 14.06.2021

ನಷ್ಟದಲ್ಲಿ ಲಾಭ

"...ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ." – ರೋಮಾ 8:28

ಆಸ್ಟ್ರೇಲಿಯಾದ ಗ್ರಹಾಂ ಸ್ಟೇನ್ಸ್ ಎಂಬ ಮಿಷನರಿ ಭಾರತದ ಒರಿಸ್ಸಾ ರಾಜ್ಯದ ಕಂಧಮಾಲ್ ಜಿಲ್ಲೆಗೆ ನೇರವಾಗಿ ಬಂದು ಅಲ್ಲಿ  ಕುಷ್ಠರೋಗಿಗಳಿಗೆ ಮತ್ತು ಇತರರಿಗೆ ದೇವರ ಪ್ರೀತಿಯನ್ನು ತಿಳಿಸುತ್ತಾ ಸೇವೆ ಮಾಡುತ್ತಿದ್ದರು.  ಜನವರಿ 22, 1999 ನೇ ವರ್ಷ, ಗ್ರಹಾಂ ಸ್ಟೇನ್ಸ್ ಮತ್ತು ಅವರ ಮೂವರು ಗಂಡು ಮಕ್ಕಳಾದ ಫಿಲಿಪ್,  ತಿಮೊಥೆ ಇವರೆಲ್ಲರನ್ನು  ಸುವಾರ್ತಾ ವಿರೋಧಿಗಳು ಜೀಪಿನಲ್ಲಿ ಬಂಧಿಸಿ ಸುಟ್ಟುಹಾಕಿದರು.  ತನ್ನ ಹದಿಹರೆಯದ ಮಗಳು ಎಸ್ತರ್ ಜೊತೆ ಏಕಾಂಗಿಯಾಗಿದ್ದ ಗ್ಲಾಡಿಸ್ ಅಮ್ಮನವರು, ತನ್ನ ಗಂಡ ಮತ್ತು ಮಕ್ಕಳನ್ನು ಕೊಂದವರನ್ನು ಯೇಸು ಕ್ಷಮಿಸಿದ ಹಾಗೆ ನಾನು ಕ್ಷಮಿಸುತ್ತೇನೆ ಎಂದು ಹೇಳಿದರು.  ಇದು ಎಲ್ಲಾ ರಾಷ್ಟ್ರೀಯ ಪತ್ರಿಕೆಗಳಲ್ಲಿ ಮುಖ್ಯಾಂಶವಾಗಿ ಬಂತು.  ಗ್ರಹಾಂ ಸ್ಟೇನ್ಸ್ ರವರ ಜೀವನ ಚರಿತ್ರೆಯನ್ನು ಬರೆಯಲು ಹೋದ ಒಬ್ಬ ಪುಸ್ತಕ ಬರಹಗಾರ ಗ್ಲಾಡಿಸ್ ಅಮ್ಮನವರ ಬಳಿ ಒಂದು ಪ್ರಶ್ನೆ ಕೇಳಿದ.  “ದೇವರು ಎಂದಿಗೂ ಯಾರ ಜೀವನದಲ್ಲಿಯೂ ತಪ್ಪು ಮಾಡುವುದಿಲ್ಲ, ಆತನು ಒಳ್ಳೆಯದನ್ನು ಮಾತ್ರವೇ ಮಾಡುತ್ತಾರೆ.  ನಿಮ್ಮ ಗಂಡ ಮತ್ತು ಮಕ್ಕಳ ಮರಣವನ್ನು ನೀವು ಹೇಗೆ ನೆನೆಸುತ್ತೀರಿ,  ಅದು ದೇವರು ಮಾಡಿದ 

ಒಳ್ಳೆಯ ಕಾರ್ಯವಾ? ” ಎಂಬ ಕಷ್ಟಕರವಾದ ಪ್ರಶ್ನೆಯನ್ನು ಕೇಳಿದಾಗಲೂ,  “ಹೌದು ಅದು ಕೂಡ ಒಳ್ಳೆಯದೇ ಎಂದು ನಾನು ಭಾವಿಸುತ್ತೇನೆ.  ಏಕೆಂದರೆ ಕುಷ್ಠರೋಗಿಗಳಿಗೆ ಒಂದು ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ಸ್ಟೇನ್ಸ್ ರವರು ಭಾವಿಸಿದ್ದರು.  ಅವರು ಮರಣ ಹೊಂದಿದ ಒಂದು ವರ್ಷದೊಳಗೇ ಆಸ್ಪತ್ರೆ ನಿರ್ಮಿಸಲು ದೇವರು ಸಹಾಯ ಮಾಡಿದ್ದಾರೆ.  ಅವರು ಬಯಸಿದ್ದು ನೆರವೇರಿತು. ಇದೂ ಕೂಡ ಒಳ್ಳೆಯದಕ್ಕೇ ತಾನೇ. ”  ಎಂದರಂತೆ. "ನನ್ನ ಗಂಡ ಮತ್ತು ಮಕ್ಕಳು ಕೊನೆಗೆ  ಮಾಡಬೇಕೆಂದಿದ್ದ ಕಾರ್ಯವನ್ನು ಮಾಡಿ ಮುಗಿಸಿದರು. ನಾವು ಬದುಕುಳಿದಿದ್ದೇವೆ.  ನಮ್ಮ ಕಾರ್ಯಗಳು ನಮಗಾಗಿ ಕಾಯುತ್ತಿವೆ.  ಪ್ರಪಂಚವು ತಾನು ತಿರುಗುವುದನ್ನು ನಿಲ್ಲಿಸಿ ಬಿಡಲಿಲ್ಲವೇ.” ಎಂದು ಸಂತೋಷದಿಂದ ಉತ್ತರ ಕೊಟ್ಟರಂತೆ.

ಆತ್ಮೀಯ ಸಹೋದರ, ಸಹೋದರಿಯೇ!  ಈ ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ಕುಟುಂಬದ ವ್ಯಕ್ತಿಗಳು, ಸ್ನೇಹಿತರು, ಸಂಬಂಧಿಕರು ಸೇವಕರು ಹೀಗೆ  ನಮಗೆ ಇಷ್ಟವಾದವರನ್ನು ಕಳೆದುಕೊಂಡು  ದುಃಖಿಸುತ್ತಿರಬಹುದು.  ಶಾಂತಿದಾಯಕನಾದ ನಮ್ಮ ದೇವರೇ ನಿಮ್ಮಲ್ಲಿ ಪ್ರತಿಯೊಬ್ಬರನ್ನು ಆದರಿಸಿ ಸಂತೈಸಲಿ. ನಮ್ಮ ತಲೆಯಲ್ಲಿರುವ ಎಲ್ಲಾ ಕೂದಲನ್ನು ಲೆಕ್ಕ ಹಾಕಿ ನಮ್ಮನ್ನು ಬಹಳ ಎಚ್ಚರವಾಗಿ ನೋಡಿಕೊಳ್ಳುತ್ತಿರುವ ದೇವರು, ನಮ್ಮ ಜೀವನದಲ್ಲಿ ಎಂದಿಗೂ ತಪ್ಪು ಮಾಡುವುದೇ ಇಲ್ಲ.  ಇದನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ ನಾವು ದೇವರ ಬಲದ ಮೇಲೆಯೇ ಒರಗಿಕೊಳ್ಳೋಣ.

“ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; ಇಲ್ಲದಿದ್ದರೆ ನಿಮಗೆ ಹೇಳುತ್ತಿದ್ದೆನು; ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ.ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು;"  (ಯೋಹಾನ 14:2,3) ಎಂದು ವಾಗ್ದಾನ ಮಾಡಿದ ದೇವರು ನಮ್ಮೆಲ್ಲರೊಂದಿಗಿದ್ದಾರೆ. ಆ ದಿನಕ್ಕಾಗಿ ನಾವು ಕಾದಿರೋಣ.  ಆ ದಿನದವರೆಗೂ ನಮಗೆ ಕೊಡಲ್ಪಟ್ಟಿರುವ ಜವಾಬ್ದಾರಿ, ಕೆಲಸ, ಸೇವೆ ಇವನ್ನೆಲ್ಲಾ ಮಾಡಿ ಮುಗಿಸೋಣ. ಎಲ್ಲಕ್ಕಿಂತ ಹೆಚ್ಚಾಗಿ ದೇವರ ಶಾಂತಿ ಕ್ರಿಸ್ತ ಯೇಸುವಿನೊಳಗೆ ನಿಮ್ಮ ಹೃದಯವನ್ನು ಯೋಚನೆಗಳನ್ನು ಕಾಪಾಡಲಿ.  ಆಮೆನ್.

ಪ್ರಾರ್ಥನಾ ಅಂಶ:-
ನಂಬಿಕೆ T.V ಕಾರ್ಯಕ್ರಮಗಳನ್ನು ನೋಡುವ ಅನ್ಯಜನರು ಯೇಸುವಿನ ಪ್ರೀತಿಯನ್ನು ತಿಳಿದುಕೊಂಡು ಅದ್ಭುತಗಳನ್ನು ಹೊಂದಿಕೊಳ್ಳುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/