Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.02.2026
Share:

By Village Missionary Movement

Tuesday, 10-Feb-2026

ಧೈನಂದಿನ ಧ್ಯಾನ(Kannada) – 10.02.2026

 

ತೀರ್ಮಾನದಲ್ಲಿ ದೃಢತೆ

 

"ಒಳ್ಳೇ ವಿಷಯದಲ್ಲಿ ನೀವು ಆಸಕ್ತರಾಗಿರುವದು ಒಳ್ಳೇದು..." - ಗಲಾತ್ಯ 4:18

 

ಅರವಿಂದ್ ಎಂಬವರು ಒಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಬಂದು ತನ್ನ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಅವರು ಸಮಗ್ರತೆಯನ್ನು ಕಾಯ್ದುಕೊಂಡರು. ಅವರ ಸುತ್ತಲಿನ ಕೆಲವು ಜನರು ಸುಲಭವಾದ ಅಡ್ಡದಾರಿಗಳನ್ನು ಆರಿಸಿಕೊಂಡು ತಪ್ಪು ಮಾಡಲು ಮನವೊಲಿಸಿದರೂ, ಅರವಿಂದ್ ತಮ್ಮ ಆತ್ಮಸಾಕ್ಷಿಗೂ ಮತ್ತು ದೇವರಿಗೆ ಭಯಪಡುವ ಭಯದಲ್ಲೂ ದೇವರಿಗೆ ವಿರುದ್ಧವಾಗಿ ಏನನ್ನೂ ಮಾಡಲು ಬಯಸಲಿಲ್ಲ. ಅರವಿಂದ್ ನ ಸಮಗ್ರತೆಯು ಕೆಲವೊಮ್ಮೆ ಅವರನ್ನು ಒಂಟಿಯಾಗಿಸಿದರೂ, ಅವರು ನಂಬಿಗಸ್ತರಾಗಿದ್ದರು. ದಿನಗಳು ಕಳೆದಂತೆ, ಅವರ ತೀರ್ಮಾನ ಮತ್ತು ಉತ್ತಮ ನಡವಳಿಕೆ ಅವರಿಗೆ ಪದವಿಯನ್ನು, ಉನ್ನತಿಯನ್ನು ಪಡೆಯಲು ಅವರ ಬಗ್ಗೆ ಗೌರವವನ್ನು ಉಂಟುಮಾಡಲು ಕಾರಣವಾಯಿತು.

 

ಸತ್ಯವೇದದಲ್ಲಿಯೂ ಸಹ, ದಾನಿಯೇಲ್ ಅನ್ನು, ಬಾಬಿಲೋನ್ ದೇಶಕ್ಕೆ ಸೆರೆಯಾಳಾಗಿ ಕರೆದೊಯ್ಯಲಾಯಿತು. ಅಲ್ಲಿ ಅವರು ರಾಜಮನೆತನದ ಆಹಾರವನ್ನು ತಿನ್ನದಿರಲು ನಿರ್ಧಾರ ತೆಗೆದುಕೊಂಡರು. ಏಕೆಂದರೆ ದೇವರು ಯಾಜಕಕಾಂಡ 11 ನೇ ಅಧ್ಯಾಯದಲ್ಲಿ ತಿನ್ನಬಹುದಾದ ಮತ್ತು ತಿನ್ನಬಾರದ ಆಹಾರಗಳ ಕುರಿತು ಪಟ್ಟಿಯನ್ನು ಮಾಡಿದ್ದರು. ದೇವರು ನಿಷೇಧಿಸಿದ ಆಹಾರ ಪದಾರ್ಥಗಳನ್ನು ತಿನ್ನಬಾರದೆಂದು ಭಾವಿಸಿ ಅವುಗಳನ್ನು ತಿನ್ನಬಾರದೆಂದು ಅವರು ನಿರ್ಧರಿಸಿರಬಹುದು. ಆದರೆ ಅವರು ತನ್ನ ನಿರ್ಧಾರದಲ್ಲಿ ದೃಢವಾಗಿದ್ದರು. ಹತ್ತು ದಿನಗಳ ಪರೀಕ್ಷೆಯ ನಂತರ, ಅವರ ಮುಖವು ಹೆಚ್ಚು ಸುಂದರವಾಗಿತ್ತು ಮತ್ತು ಅವರ ದೇಹವು ಎಲ್ಲರಿಗಿಂತ ಪುಷ್ಟಿಯಾಗಿತ್ತು. ಕೆಲವು ತಿಂಗಳುಗಳ ನಂತರ, ರಾಜನು ಪರೀಕ್ಷಿಸಿದ ಎಲ್ಲಾ ವಿಷಯಗಳಲ್ಲಿ ಅವರು ಇತರರಿಗಿಂತ ಹತ್ತು ಪಟ್ಟು ಹೆಚ್ಚು ಸಮರ್ಥರೆಂದು ಕಂಡುಬಂದಿತು. ದಾನಿಯೇಲ್ ತೆಗೆದುಕೊಂಡ ನಿರ್ಧಾರವು ತುಂಬಾ ಅಪಾಯಕಾರಿಯಾಗಿತ್ತು. ಏಕೆಂದರೆ ಅವರು ಸೆರೆಹಿಡಿಯಲ್ಪಟ್ಟು ಗುಲಾಮರಾಗಿ ಹೋದ ಸ್ಥಳದಲ್ಲಿ ಮೇಲಾಧಿಕಾರಿಗಳು, ತಾವು ಭೇಟಿಯಾಗುವ ಹೊಸ ಮನುಷ್ಯರ ನಡುವೆ ದೃಢವಾಗಿರುವುದು ತುಂಬಾ ಕಷ್ಟ. ಅದರಲ್ಲೂ ವಿಶೇಷವಾಗಿ ದಾನಿಯೇಲನು ತಾನು ಮಾಡಿದ ತೀರ್ಮಾನದಲ್ಲಿ ದೃಢ ನಿರ್ಧಾರವನ್ನು ತೆಗೆದುಕೊಂಡು ಅಧಿಕಾರಿಗಳ ಮುಖ್ಯಸ್ಥರಿಂದ ಅನುಮತಿ ಕೇಳಿದಾಗ, ದೇವರು ಅನುಮತಿ ಸಿಗುವಂತೆ ಮಾಡಿದರು.

 

ದಾನಿಯೇಲನು ಅನ್ಯ ದೇಶಕ್ಕೆ ಸೆರೆಹಿಡಿದು ಕೊಂಡೊಯ್ಯಲ್ಪಟ್ಟರೂ, ತನ್ನ ನಿರ್ಧಾರದಲ್ಲಿ ದೃಢವಾಗಿದ್ದಾಗಲೂ, ದೇವರು ಅವರಿಗೆ ಅಧಿಕಾರಿಗಳ ಕಣ್ಣುಗಳಲ್ಲಿ ದಯೆ ದೊರಕುವಂತೆ ಮಾಡಿದರು. ಶದ್ರಕ್, ಮೇಷಕ್, ಅಬೇದ್ನೆಗೋ ಎಂಬ ಒಳ್ಳೆಯ ಸ್ನೇಹಿತರನ್ನು ಕೊಟ್ಟರು. ಎಲ್ಲರ ಮುಂದೆ ಹತ್ತು ಪಟ್ಟು ಹೆಚ್ಚು ಸಮರ್ಥನನ್ನಾಗಿ ಮಾಡಿದರು. ದೇಶದಲ್ಲಿ ಜವಾಬ್ದಾರಿಯನ್ನು ಕೊಟ್ಟರು. ಅದೇ ರೀತಿಯಲ್ಲಿ ನೀವು ಸಹ ನಿಮ್ಮ ತೀರ್ಮಾನದಲ್ಲಿ ದೃಢವಾಗಿರಲು ಪ್ರಯತ್ನಿಸಿರಿ. ಆಗ ದೇವರು ಅದಕ್ಕೆ ಸಹಾಯ ಮಾಡುವುದರೊಂದಿಗೆ ಹೇರಳವಾದ ಆಶೀರ್ವಾದವನ್ನೂ ನೀಡುತ್ತಾರೆ. ತೀರ್ಮಾನದಲ್ಲಿ ದೃಢವಾಗಿರಿ. ಲೆಕ್ಕವಿಲ್ಲದಷ್ಟು ಆಶೀರ್ವಾದಗಳನ್ನು ಪಡೆಯಿರಿ. 

- C. ಜಾಯ್ಸ್

 

ಪ್ರಾರ್ಥನಾ ಅಂಶ:

ಈ ತಿಂಗಳು ಎಲ್ಲಾ ಸೇವಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಶಾಲಾ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482