Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.02.2026
Share:

By Village Missionary Movement

Monday, 09-Feb-2026

ಧೈನಂದಿನ ಧ್ಯಾನ(Kannada) – 09.02.2026

 

ಗದ್ದಿಸುವುದು ಒಳ್ಳೆಯದು

 

“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು" - ಜ್ಞಾನೋಕ್ತಿ 22:6

 

ಉತ್ತರ ಅಮೆರಿಕಾದಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದವನ್ನು ಕಾಪಾಡಲು ಆ ದೇಶದ ಸರ್ಕಾರವು ನಿರ್ಧರಿಸಿತು. ಆದ್ದರಿಂದ, ಮೃಗಾಲಯದಲ್ಲಿ ಪ್ರತ್ಯೇಕ ಆವರಣವನ್ನು ಸ್ಥಾಪಿಸಲಾಯಿತು, ಅದನ್ನು ರಕ್ಷಿಸಿ ಪಕ್ಷಿಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಯಿತು. ಆ ಪಕ್ಷಿ ಪ್ರಭೇದಗಳು ಹೆಚ್ಚಿದಾಗ, ಅದನ್ನು ಹೊರಗಿನ ಪ್ರಪಂಚಕ್ಕೆ ಸ್ವತಂತ್ರವಾಗಿ ಹಾರಲು ಬಿಡಲಾಯಿತು. ಪಕ್ಷಿಗಳನ್ನು ಒಂಟಿಯಾಗಿ ಮತ್ತು ಸುರಕ್ಷಿತವಾಗಿ ಬೆಳೆಸಿದ ಕಾರಣ, ಅವು ಸುಲಭವಾಗಿ ಶತ್ರುಗಳಿಗೆ ಆಹಾರವಾಗಿ ಮಾರ್ಪಟ್ಟು ಸಾಯಲು ಪ್ರಾರಂಭಿಸಿದವು. ಯಾವ ಪಕ್ಷಿ ಪ್ರಭೇದಗಳು ಅಳಿಯಬಾರದು ಎಂದು ಪ್ರಯತ್ನಿಸಲಾಯಿತೋ ಆ ಪ್ರಯತ್ನವೇ ಅವುಗಳ ಅಳಿವಿಗೆ ಕಾರಣವಾಯಿತು.

 

ಅದೇ ರೀತಿ, ನಮ್ಮ ಮಕ್ಕಳಿಗಾಗಿ ನಾವು ರಚಿಸುವ ಕೆಲವು ಸೌಲಭ್ಯಗಳು ಅವರ ನಾಶಕ್ಕೂ ಕಾರಣವಾಗುತ್ತವೆ. ಉದ್ಯಾನವನಗಳಲ್ಲಿ ಸಾಕಲಾದ ಪಕ್ಷಿಗಳಿಗೆ ಬೇಟೆಯಾಡುವುದು ಹೇಗೆಂದು ಗೊತ್ತಿಲ್ಲ. ಅದೇ ರೀತಿ, ಅತಿಯಾದ ಪೋಷಣೆಯಿಂದ ಹಾರೈಕೆ ಮಾಡಲ್ಪಡುವ ಮಕ್ಕಳು ವೈಫಲ್ಯಗಳನ್ನು ಸಹಿಸುವುದಿಲ್ಲ. ನಿಮ್ಮ ಮಕ್ಕಳಿಗೆ ಹೊರಗಿನ ಪ್ರಪಂಚವನ್ನು ತೋರಿಸಿ. ಅದರಲ್ಲಿರುವ ಸಮಸ್ಯೆಗಳನ್ನು ಎದುರಿಸಲು ದೇವರ ಶಕ್ತಿಯನ್ನು ಹುಡುಕುವ ಮೂಲಕ ಅವರು ಹೋರಾಡಿ ಗೆಲ್ಲಲಿ.

 

ಹಳೆಯ ಒಡಂಬಡಿಕೆಯಲ್ಲಿ, ದೇವರ ಸೇವಕನಾದ ಏಲಿಯು ತನ್ನ ಪುತ್ರರನ್ನು ಕರ್ತನ ಮಾರ್ಗದಲ್ಲಿ ನಡೆಸಲು ವಿಫಲರಾದರು. ಅವರು ತನ್ನ ಮಕ್ಕಳಿಗೆ ಒಳ್ಳೆಯದನ್ನು ಕಲಿಸದ ಕಾರಣ, ದೇವದರ್ಶನದ ಗುಡಾರದ ಬಾಗಲಿನಲ್ಲಿ ಸೇವೆಮಾಡುವ ಸ್ತ್ರೀಯರೊಡನೆ ಸಂಗವಿುಸುತ್ತಿರುವದನ್ನೂ ಕೇಳಿ ಅವರನ್ನು ನೋಡಿ: ಎಲ್ಲಾ ಜನರಿಂದಲೂ ನಿಮ್ಮ ದುಷ್ಕೃತ್ಯಗಳನ್ನು ಕೇಳುತ್ತಿರುತ್ತೇನೆ. ಯಾಕೆ ಹೀಗೆ ಮಾಡುತ್ತೀರಿ? ನನ್ನ ಮಕ್ಕಳೇ, ಹೀಗೆ ಮಾಡಬಾರದು ಎಂದು ಎಚ್ಚರಿಸುತ್ತಾರೆ. 

 

ಪ್ರಿಯರೇ! ಸೊಲೊಮೋನನು ಇಸ್ರಾಯೇಲ್ ದೇಶದ ರಾಜನಾಗಿದ್ದ ದಿನಗಳಲ್ಲಿ ಅನುಭವಿಸದೇ ಇರುವ ಯಾವ ವಿಷಯವೂ ಇರಲಿಲ್ಲ. ಅವರು ಎಲ್ಲವನ್ನೂ ಅನುಭವಿಸಿದ್ದರು, ಅವರು ಹೇಳುತ್ತಾರೆ ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು ಎಂದು. ಮಕ್ಕಳನ್ನು ಪ್ರೀತಿಯಿಂದ ಕೂಡಿದ ಗದರಿಸುವಿಕೆಯಿಂದ ನಡೆಸಬೇಕು. ಕೇವಲ ಪ್ರೀತಿಯನ್ನು ಮಾತ್ರ ತೋರಿಸಿದರೆ, ಅವರು ದಾರಿ ತಪ್ಪುವ ಅವಕಾಶವಿದೆ. ನೀವು ಗದರಿಕೆಯನ್ನು ಮಾತ್ರ ತೋರಿಸಿದರೆ, ಅವರು ನಮ್ಮಿಂದ ದೂರ ಸರಿಯುವ ಅವಕಾಶವಿದೆ. ಆದ್ದರಿಂದ, ಕರ್ತನು ನಮಗೆ ದಯೆಯಿಂದ ನೀಡಿರುವ ಮಕ್ಕಳನ್ನು ದೇವರ ಸಹಾಯದಿಂದ ನಡೆಸೋಣ. ನಾವು ಅವರಿಗೆ ಬಾಲ್ಯದಲ್ಲಿಯೇ ಒಳ್ಳೆಯ ಮಾರ್ಗವಾಗಿರುವ ಯೇಸುವನ್ನು ತೋರಿಸಿಬಿಟ್ಟರೆ, ಅವರು ಅದನ್ನು ತಮ್ಮ ವೃದ್ಧಾಪ್ಯದಲ್ಲಿಯೂ ಬಿಡುವುದಿಲ್ಲ. ನಾವು ಅವರಿಗೆ ಅದನ್ನು ಕಲಿಸಲು ವಿಫಲವಾದರೆ, ಈ ಸಮಾಜ ಮತ್ತು ಪ್ರಕೃತಿ ಅವರಿಗೆ ಕಲಿಸಬೇಕಾಗುತ್ತದೆ. 

- Bro. T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಶಾಲಾ ಸೇವೆಯ ಮೂಲಕ ಮಕ್ಕಳು ಕೇಳಿದ ವಾಕ್ಯಗಳು ಅವರ ಹೃದಯದಲ್ಲಿ ಕ್ರಿಯೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş kargabet kargabet giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş casibom çarkbet vizebet alobet alobet giriş amgbahis amgbahis giriş sweet bonanza casinomilyon jojobet betsalvador bahiscasino casibom casibom giriş jojobet jojobet giriş perabet perabet giriş holiganbet holiganbet giriş casibom casibom giriş casibom güncel giriş matbet matbet giriş superbetin superbetin giriş carkbet carkbet giris supertotobet supertotobet giriş