Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.02.2026
Share:

By Village Missionary Movement

Sunday, 08-Feb-2026

ಧೈನಂದಿನ ಧ್ಯಾನ(Kannada) – 08.02.2026

 

ಕೇಳಿನೋಡು 

 

"ಕರ್ತನು ಒಳ್ಳೆಯವನೆಂದು ರುಚಿಸಿ ನೋಡಿರಿ;..." - ಕೀರ್ತನೆ 34:8

 

ಪ್ರೀತಿಯ ಮುದ್ದು ಮಕ್ಕಳೇ, How are you? ಇಂದು Sunday school ಗೆ ಹೋಗಲು ರೆಡೀನಾ? ಅಲ್ಲಿ ಹೇಳಿಕೊಡುವುದನ್ನು ಗಮನವಿಟ್ಟು ಕೇಳಿ, ಅದರಂತೆ ನಡೆಯಲು Jesus ಬಳಿ ಸಹಾಯ ಕೇಳಬೇಕು. O.K.ನಾ ಮುದ್ದು ಮಕ್ಕಳೇ!

 

ಶೀಲಾ, ಪ್ರತಿ ಭಾನುವಾರ ತಪ್ಪದೇ Sunday class ಗೆ ಹಾಜರಾಗುತ್ತಿದ್ದಳು. Daily prayer ಮಾಡುತ್ತಿದ್ದಳು. ನೀವು ಹೇಗೆ ಪುಟಾಣಿಗಳೇ? ಏನು ಮರೆತರೂ, ಪ್ರತಿದಿನ ಯೇಸಪ್ಪನೊಂದಿಗೆ ಮಾತನಾಡಲು ಮರೆಯಲೇಬಾರದು. ಶೀಲಾ ಹಾಸ್ಟೆಲ್‌ನಲ್ಲಿ ಓದಿದಳು. ಎಲ್ಲಾ ಮಕ್ಕಳನ್ನು ನೋಡಲು ಪೋಷಕರು ಬರುತ್ತಾರೆ, ಅಗತ್ಯವಿರುವ ತಿಂಡಿಗಳನ್ನೆಲ್ಲಾ ತೆಗೆದುಕೊಡುತ್ತಾರೆ. ಶೀಲಾಗೆ ತಂದೆ, ತಾಯಿ ಯಾರೂ ಇಲ್ಲ. ಎಷ್ಟು ಕಷ್ಟಕರವಾಗಿರಬೇಕು. ಆಗಾಗ ಯೇಸಪ್ಪ ಬಳಿ ಹೇಳುತ್ತಿದ್ದಳು. ಏನು ಹೇಳುತ್ತಿದ್ದಳು ಎಂದು ತಾನೇ ಯೋಚಿಸುತ್ತಿದ್ದೀರ? Jesus ನೀವೇ ನನ್ನ ತಾಯಿ, ನನ್ನ ತಂದೆ. ನಾನು ಆಸೆಪಡುವುದನ್ನು ನೀವು ತಿಳಿದಿದ್ದೀರ ಎಂದು ಪ್ರಾರ್ಥಿಸುತ್ತಿದ್ದಳು.

 

ಒಂದು ದಿನ, ಇವಳಿಗೂ ಚಕ್ಕಲಿ ತಿನ್ನಬೇಕೆಂಬ ಆಸೆ ಇತ್ತು. ಎಲೀಯ ತಾತನಿಗೆ ಕಾಗೆಯೊಂದು ರೊಟ್ಟಿ ಮತ್ತು ಮಾಂಸವನ್ನು ನೀಡಿತು. ನೀವು ಸಹ ಪ್ರಾರ್ಥಿಸಿದರೆ ಯೇಸಪ್ಪ ನಿಮ್ಮ ಎಲ್ಲಾ ಕಷ್ಟವನ್ನೂ ಮಾರ್ಪಡಿಸಿ ನಿಮಗೆ ಸಹಾಯ ಮಾಡುತ್ತಾರೆ ಎಂದು Sunday class ನಲ್ಲಿ ಹೇಳಿಕೊಟ್ಟಿದ್ದು ಅವಳ ಜ್ಞಾಪಕಕ್ಕೆ ಬಂತು. ತಕ್ಷಣ ಯೇಸಪ್ಪನ ಬಳಿ ಹೇಳಲು ಪ್ರಾರಂಭಿಸಿದಳು. ನನಗೆ ಚಕ್ಕಲಿ ಬೇಕು ಯೇಸಪ್ಪಾ, ತಿನ್ನಲು ಆಸೆಯಾಗಿದೆ ಎಂದು ಪ್ರಾರ್ಥಿಸಿದಳು. ನಿಮಗೆ ಏನಾದರೂ ಬೇಕಾದರೆ, ಅಪ್ಪ, ಅಮ್ಮಾನೇ ಅದನ್ನು ನಿಮಗೆ ತೆಗೆದುಕೊಡುತ್ತಾರೆ. ಇಲ್ಲದಿದ್ದರೆ, Zomoto, Swiggy ನಲ್ಲಿ Order ಮಾಡಿ ತಿನ್ನುತ್ತೀರ. ಆದರೆ ಶೀಲಾಗೆ ಹಾಗೆ ಯಾರೂ ಇಲ್ಲ ಅಲ್ವಾ. ಮುಂದೆ ಏನಾಯ್ತು ಗೊತ್ತಾ ? ಬೆಳಿಗ್ಗೆ ಎದ್ದಾಗ ಎಂತಹ ಆಶ್ಚರ್ಯ! ಒಂದು ಕಾಗೆ ಚಕ್ಕಲಿ ಪ್ಯಾಕೆಟ್ ತಂದು ಅವಳ ಪಕ್ಕದಲ್ಲಿ ಹಾಕಿಬಿಟ್ಟು ಹೊರಟುಹೋಯ್ತು. ಶೀಲಾಗೆ ತನ್ನ ಸಂತೋಷವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. Thank you JESUS ಎಂದು ಹೇಳಿ ಕುಣಿದಾಡಿದಳು. ಅವಳು ಕೇಳುವುದನ್ನೆಲ್ಲಾ ಕೊಡಲು ಯೇಸಪ್ಪ ಇದ್ದಾರೆ ಎಂದೂ, ತಮಗೂ ಅವರು ಸಹಾಯ ಮಾಡುತ್ತಾರೆ ಎಂದೂ ಎಲ್ಲಾ ಹಾಸ್ಟೆಲ್ ಮಕ್ಕಳು ಯೇಸಪ್ಪನನ್ನು ನಂಬಲು ಪ್ರಾರಂಭಿಸಿದರು.

- Sis. ಎಸ್ತೇರ್ ಸೆಲ್ವಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al