By Village Missionary Movement
Friday, 06-Feb-2026ಧೈನಂದಿನ ಧ್ಯಾನ(Kannada) – 06.02.2026
ನೋಡುವ ದೇವರು
“...ನೀನು ನನ್ನನ್ನು ನೋಡುವ ದೇವರು..." - ಆದಿಕಾಂಡ 16:13
ನಮ್ಮ ಕರ್ತನಿಗೆ ಎಂತಹ ಅದ್ಭುತವಾದ ಹೆಸರು! ಕರ್ತನು ಹಾಗರಳನ್ನು ಮಾತ್ರ ನೋಡುವವರಲ್ಲ. ನಮ್ಮಲ್ಲಿ ಪ್ರತಿಯೊಬ್ಬರನ್ನು ನೋಡುವಾತನು. ಸತ್ಯವೇದದಲ್ಲಿ ಅನೇಕ ಮುರಿದ ಹೃದಯಗಳನ್ನು ನೋಡಿ, ಅವರ ದುಃಖವನ್ನು ಗುಣಪಡಿಸಿದವರು. ಸಾರಳಿಗೆ ಮಕ್ಕಳಿಲ್ಲದ ಕಾರಣ, ಅವಳು ತನ್ನ ದಾಸಿಯಾದ ಹಾಗರಳನ್ನು ತನ್ನ ಗಂಡನಾದ ಅಬ್ರಹಾಮನಿಗೆ ಉಪಪತ್ನಿಯಾಗಿ ಕೊಟ್ಟಳು. ಹಾಗರಳು ಗರ್ಭಿಣಿಯಾದಾಗ, ಅವಳು ತನ್ನ ಯಜಮಾನಿಯನ್ನು ತಿರಸ್ಕರಿಸಿದಳು. ಸಾರಳು ಹಾಗರಳನ್ನು ಕಠಿಣವಾಗಿ ನಡೆಸಿಕೊಂಡ ಕಾರಣ, ಅವಳು ತನ್ನ ಯಜಮಾನಿಯನ್ನು ಬಿಟ್ಟು ಓಡಿಹೋದಳು. ದೇವರು ಅವಳ ಹೃದಯದ ವೇದನೆಯನ್ನು ನೋಡಿ ಅವಳನ್ನು ಆಶೀರ್ವದಿಸಿದರು. ಆ ಅರಣ್ಯದಲ್ಲಿ ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ ಎಂದು ಹೇಳಿ, ತನ್ನೊಂದಿಗೆ ಮಾತಾಡಿದ ದೇವರಿಗೆ "ನೀನು ನನ್ನನ್ನು ನೋಡುವ ದೇವರು" ಎಂದು ಹೆಸರಿಟ್ಟಳು.
ಅದೇ ರೀತಿ, 1 ಸಮುವೇಲ 1ನೇ ಅಧ್ಯಾಯದಲ್ಲಿ, ಪೆನಿನ್ನಳು ಮಕ್ಕಳಿಲ್ಲದ ಹನ್ನಳ ಮನಸ್ಸನ್ನು ನೋಯಿಸಿದಳು. ಹನ್ನಳು ತನ್ನ ಮುರಿದ ಹೃದಯವನ್ನು ದೇವರ ಮುಂದೆ ಸುರಿಸಿ ಪ್ರಾರ್ಥಿಸಿದಳು. ಅದರ ನಂತರ, ಅವಳು ದುಃಖ ಮುಖವುಳ್ಳವಳಾಗಿರಲಿಲ್ಲ. ದೇವರು ಅವಳ ಹೃದಯದ ವೇದನೆಯನ್ನು ನೋಡಿ ಪ್ರವಾದಿಯಾದ ಸಮುವೇಲನನ್ನು ಮಗನಾಗಿ ಕೊಟ್ಟರು. ಎಂತಹ ದೊಡ್ಡ ಆಶೀರ್ವಾದ! ನಮ್ಮ ದೇವರು ಮನುಷ್ಯರಂತೆ ಮುಖವನ್ನು ನೋಡುವವರಲ್ಲ; ಅವರು ಹೃದಯವನ್ನು ನೋಡುವವರು. ಯಾರಿಗೂ ತಿಳಿಯದೆ ನಾವು ಸುರಿಸುವ ಕಣ್ಣೀರನ್ನು ಅವರು ನೋಡುತ್ತಾರೆ. ಮುರಿಯಲ್ಪಟ್ಟ ಹೃದಯವನ್ನು ನೋಡುತ್ತಾರೆ. ಮನಮರುಗುವ ದೇವರು ನಮ್ಮ ಕಣ್ಣೀರಿಗೆ ಉತ್ತರಿಸುತ್ತಾರೆ.
ಅಂದು ಇಸ್ರಾಯೇಲ್ ಜನರು, ಅಧಿಕಾರಿಗಳು ಮತ್ತು ಮೇಸ್ತ್ರಿಗಳಿಂದ ಪಟ್ಟ ಸಂಕಟಗಳನ್ನು ಕಂಡರು. ಅವರ ನರಳಾಟವನ್ನು ಕೇಳಿ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಮೋಶೆಯನ್ನು ರಕ್ಷಕನಾಗಿ ಕಳುಹಿಸಿದ ಅದೇ ದೇವರು ನಮ್ಮ ಕಣ್ಣೀರನ್ನೂ ನೋಡುತ್ತಾರೆ. ನಮ್ಮ ಮುರಿದ ಹೃದಯಗಳ ನರಳಾಟವನ್ನು ಅವರು ಕೇಳುತ್ತಾರೆ. ಅವರು ಖಂಡಿತವಾಗಿಯೂ ನಮ್ಮನ್ನು ಬಿಡುಗಡೆ ಮಾಡುತ್ತಾರೆ ಮತ್ತು ನಮಗೆ ಸಾಂತ್ವನ ನೀಡುತ್ತಾರೆ. "ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ" (ಕೀರ್ತನೆ 34:18). ಇಂತಹ ಕರುಣೆಯುಳ್ಳ ದೇವರನ್ನು ನಾವು ಒರಗಿಕೊಳ್ಳೋಣ. ಹನ್ನಳಂತೆ ನಮ್ಮ ಹೃದಯವನ್ನು ಸುರಿಸಿ ಪ್ರಾರ್ಥಿಸೋಣ, ಅದರ ನಂತರ ನಾವು ದುಃಖ ಮುಖವುಳ್ಳವರಾಗಿ ಇರಬೇಕಾದ ಅವಶ್ಯವಿಲ್ಲ. ಹಾಗರಳನ್ನು ನೋಡಿದ ಅದೇ ದೇವರು ನಮ್ಮನ್ನೂ ನೋಡುತ್ತಾರೆ. ನಮ್ಮನ್ನೂ ಆದರಿಸಿ, ಸಂತೈಸಿ, ಬಿಡುಗಡೆ ಮಾಡುತ್ತಾರೆ. ನಂಬಿಕೆಯಿಂದ ಇರೋಣ, ನಮ್ಮ ಗಾಯಗಳು ಗುಣವಾಗುತ್ತವೆ. ಆಮೆನ್.
- Mrs.ಶೀಲಾ ಜಾನ್
ಪ್ರಾರ್ಥನಾ ಅಂಶ:
ಟ್ಯೂಷನ್ ಸೆಂಟರ್‌ನ ಟೀಚರ್ ಗಳ ಕುಟುಂಬಗಳು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482