By Village Missionary Movement
Thursday, 05-Feb-2026ಧೈನಂದಿನ ಧ್ಯಾನ(Kannada) – 05.02.2026
ಕಾರ್ಯಕರ್ತ
"ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು;..." - ಪ್ರಸಂಗಿ 9:10
ನಮ್ಮ ಶಿಕ್ಷಣ, ಸಂಪತ್ತು, ಆಸ್ತಿಗಳು, ಪ್ರತಿಭೆಗಳು, ಬುದ್ಧಿವಂತಿಕೆ, ಪ್ರಭಾವ, ಸ್ಥಾನಮಾನ ಮತ್ತು ಒಳ್ಳೆಯ ಗುಣಗಳೆಲ್ಲವೂ ಕರ್ತನು ನಮಗೆ ನೀಡಿದ ಕೃಪೆಯ ಕೊಡುಗೆಗಳಾಗಿವೆ. ನಮ್ಮಲ್ಲಿ ಯಾರೂ ನನಗೆ ಅಂತಹ ಕೃಪೆಯ ಕೊಡುಗೆ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ನಾವು ಅವುಗಳನ್ನು ಕರ್ತನ ಹೆಸರಿನ ಮಹಿಮೆಗಾಗಿ ಬಳಸಿದಾಗ, ಕರ್ತನು ಮಹಿಮೆ ಹೊಂದುತ್ತಾರೆ, ನಾವು ಸಹ ಆಶೀರ್ವದಿಸಲ್ಪಡುತ್ತೇವೆ ಮತ್ತು ಇತರರಿಗೆ ಆಶೀರ್ವಾದವಾಗಿಯೂ ಇರುತ್ತೇವೆ.
"ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ." (ಕೊಲೊ. 3:23). "ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವದು.." (1 ಪೇತ್ರ 4:11).
ಕರ್ತನು ತನಗೆ ನೀಡಿದ ಪ್ರತಿಭೆಗಳ ಮೂಲಕ ದಾವೀದನು ಸಂತೋಷದಿಂದ ಮಧುರವಾದ ಕೀರ್ತನೆಗಳನ್ನು ಹಾಡಿದರು. ಸೊಲೊಮೋನನು ಕರ್ತನು ತನಗೆ ನೀಡಿದ ಜ್ಞಾನದಿಂದ 3000 ಜ್ಞಾನೋಕ್ತಿಗಳು ಮತ್ತು 1005 ಹಾಡುಗಳನ್ನು ಬರೆದರು. ಇಂದಿಗೂ ಲಕ್ಷಾಂತರ ಜನರು ಅವರ ಮೂಲಕ ಆಶೀರ್ವದಿಸಲ್ಪಟ್ಟಿದ್ದಾರೆ. ಎಸ್ತೇರ್ ತನಗೆ ದೊರೆತ ರಾಜಮನೆತನದ ಘನತೆ ಮತ್ತು ಸ್ಥಾನಮಾನವನ್ನು ಬಳಸಿಕೊಂಡು ತನ್ನ ಜನರನ್ನು ವಿಪತ್ತಿನಿಂದ ರಕ್ಷಿಸಿದರು. ಪೇತ್ರನು ತನ್ನ ದೋಣಿಯನ್ನು ಯೇಸುವಿಗೆ ಕೊಟ್ಟಾಗ ಯೇಸುವಿನ ಸೇವೆ ನೆರವೇರಿತು. ಮೀನು ಸಿಗದಿದ್ದಾಗ, ಪೇತ್ರ ಮತ್ತು ಅವನ ಸಂಗಡಿಗರು ಎರಡು ಪಟ್ಟು ಆಶೀರ್ವಾದ ಪಡೆದರು, ಅರಿಮಥಾಯದ ಯೋಸೇಫನು ತನ್ನ ಪ್ರಭಾವ ಮತ್ತು ಧೈರ್ಯವನ್ನು ಬಳಸಿಕೊಂಡು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಕೇಳಿ ಪಡೆದು ಅದನ್ನು ಹೊಸ ಸಮಾಧಿಯಲ್ಲಿ ಬಹಳ ಗೌರವದಿಂದ ಹೂಳಿದರು. ನಾಲ್ಕು ಸುವಾರ್ತೆಗಳಲ್ಲಿಯೂ ಸ್ಥಾನ ಪಡೆದರು. ಒಳ್ಳೆಯ ಕಾರ್ಯಗಳು ಮತ್ತು ದಾನಗಳನ್ನು ಮಾಡುತ್ತಿದ್ದ ತಬೀತಳು ಮರಣಹೊಂದಿ ಮತ್ತೆ ಬದುಕಿದಳು. ಅನೇಕ ದಾನಧರ್ಮಗಳನ್ನು ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಿದ ಕೊರ್ನೇಲ್ಯನ ಮೂಲಕ ಸುವಾರ್ತೆ ಅನ್ಯಜನರನ್ನು ತಲುಪಿತು.
ಪ್ರಿಯರೇ! ಕರ್ತನು ನಮಗೆ ನೀಡಿದ ಕೃಪೆಯನ್ನು ನಾವೂ ಕರ್ತನಿಗಾಗಿ ಬಳಸಿದಾಗ, ದೇವರ ನಾಮ ಮಹಿಮೆ ಹೊಂದುತ್ತದೆ. ನಾವೂ ಸಹ ಆಶೀರ್ವದಿಸಲ್ಪಡುತ್ತೇವೆ ಮತ್ತು ಇತರರಿಗೆ ಆಶೀರ್ವಾದವಾಗುತ್ತೇವೆ. ನಾವು ಕಾರ್ಯಕರ್ತರಾಗಿ ಮಾರ್ಪಡೋಣವಾ?
- Mrs. ಗೀತಾ ರಿಚರ್ಡ್
ಪ್ರಾರ್ಥನಾ ಅಂಶ:
ಟ್ಯೂಷನ್ ಸೆಂಟರ್‌ನಲ್ಲಿ ಓದುತ್ತಿರುವ ಮಕ್ಕಳು ದೇವರ ಪ್ರೀತಿಯನ್ನು ಅರಿತುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482