Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.02.2026
Share:

By Village Missionary Movement

Wednesday, 04-Feb-2026

ಧೈನಂದಿನ ಧ್ಯಾನ(Kannada) – 04.02.2026

 

ಅತ್ಯಲ್ಪವಾಗಿ ನೆನೆಸಬೇಡಿ

 

"ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡಬಾರದು ನೋಡಿರಿ;..." - ಮತ್ತಾಯ 18:10

 

ಹನ್ನೆರಡು ವರ್ಷದ ಸ್ವಾತಿ ಒಂದು ಕನ್ವೆಂಷನ್ ಕೂಟಕ್ಕೆ ಹೋಗಿದ್ದಳು. ಅವಳೊಂದು ವಿಶ್ವಾಸಿಯಾಗಿದ್ದಳು. ಆ ದಿನ ಬೋಧಕರು ರಕ್ಷಣೆಯ ಕುರಿತು ಅದ್ಭುತವಾಗಿ ಮಾತನಾಡುತ್ತಿದ್ದರು. ಸ್ವಾತಿಯ ಮುಂದೆ ಸಾಲಿನಲ್ಲಿ ಕುಳಿತಿದ್ದ ಯುವತಿ ಜೀಕ್ಕಿ, ಅವಳಿಗೆ ತುಂಬಾ ಕೋಪವನ್ನುಂಟುಮಾಡಿದಳು. ಅವಳ ಲಿಪ್ಸ್ಟಿಕ್ ಮತ್ತು ಮೇಕಪ್ ಅನ್ನು ಸ್ವಾತಿಯಿಂದ ಸಹಿಸಲಾಗಲಿಲ್ಲ. ಅವಳ ಗಾಜಿನ ಬಳೆಗಳ ಶಬ್ದವು ಸ್ವಾತಿಯನ್ನು ಎಷ್ಟು ಕಾಡಿತೆಂದರೆ ಸಂದೇಶಕ್ಕೆ ಗಮನ ಕೊಡಲು ಸಾಧ್ಯವಾಗದಷ್ಟು ಮಟ್ಟಿಗೆ. ಸ್ವಾತಿ ತನ್ನ ಹೃದಯದಲ್ಲಿ ಅವಳನ್ನು ಶಪಿಸುತ್ತಿದ್ದಳು. ಹನ್ನೆರಡು ವರ್ಷ ತುಂಬಿಬಿಟ್ಟರೆ ಸಾಕು, ಈ ರೀತಿಯ ಉಡುಗೆಯನ್ನು ಧರಿಸಿ ಸಭೆಗೆ ಬರುತ್ತಾರಾ ಎಂದು ಭಾವಿಸಿದಳು. ಸಂದೇಶವು ಮುಗಿಯಿತು.

 

ಬೋಧಕರು ಒಂದು ಪ್ರಶ್ನೆಯನ್ನು ಕೇಳಿದರು. ಯಾರ್ಯಾರು ದೇವರನ್ನು ಸ್ವೀಕರಿಸಲು ಬಯಸುತ್ತೀರೋ ಅವರೆಲ್ಲರೂ ಮುಂದೆ ಬನ್ನಿ ಎಂಬ ಕರೆಯನ್ನು ನೀಡಿದರು. ಸ್ವಾತಿಗೆ ಒಂದೇ ಆಶ್ಚರ್ಯ, ನಂಬಲು ಸಾಧ್ಯವಾಗಲಿಲ್ಲ ಒಂದು ರೀತಿಯ ವಿಸ್ಮಯ. ಅವಳು ಶಪಿಸಿದ ಅದೇ ಜೀಕ್ಕಿ ಮೊದಲು ಎದ್ದು ಮುಂದೆ ಹೋಗಿ ಬೋಧಕರ ಮುಂದೆ ಮಂಡಿಯೂರಿದಳು. ದೇವಸೇವಕರು ಪ್ರಾರ್ಥಿಸಿದರು, ಪ್ರಾರ್ಥನೆಯ ನಂತರ, ಜೀಕ್ಕಿ ತನ್ನ ಕಣ್ಣುಗಳನ್ನು ಒರೆಸಿಕೊಂಡು ತನ್ನ ಸ್ಥಳಕ್ಕೆ ಹಿಂತಿರುಗಿದಳು. ಸ್ವಾತಿ ಆ ಹುಡುಗಿಯನ್ನು ತಾತ್ಸಾರವಾಗಿ ಪರಿಗಣಿಸಿದ್ದಕ್ಕಾಗಿ ತಪ್ಪಿತಸ್ಥ ಭಾವನೆ ಹೊಂದಿದಳು. ಯಾರನ್ನೂ ಅವರ ನೋಟವನ್ನು ಆಧರಿಸಿ ಇನ್ನು ಮುಂದೆ ಪರಿಗಣಿಸಬಾರದೆಂದು ನಿರ್ಧರಿಸಿದಳು ಮತ್ತು ಎಲ್ಲರಿಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದಳು.

 

ನನ್ನ ಪ್ರೀತಿಯ ದೇವರ ಮಕ್ಕಳೇ! ನಾವು ಒಳ್ಳೆಯ ಭಕ್ತಿ ಜೀವನವನ್ನು ನಡೆಸುತ್ತಿರಬಹುದು. ದೇವರನ್ನು ಮೆಚ್ಚಿಸುವ ಹಲವು ವಿಧಗಳಲ್ಲಿ ನಾವು ಬದುಕಬಹುದು. ಒಳ್ಳೆಯದೇ! ಅದನ್ನು ಮುಂದುವರಿಸಬೇಕು! ಅದೇ ಸಮಯದಲ್ಲಿ, ದೇವರ ವಿಷಯಗಳಲ್ಲಿ ಕೊರತೆಯಿರುವವರನ್ನು ನಾವು ಅತ್ಯಲ್ಪ ಎಂದು ಪರಿಗಣಿಸಬಾರದು. ಲೂಕ 18 ರಲ್ಲಿ, ಒಬ್ಬನು ಭಕ್ತಿಯುಳ್ಳ ವ್ಯಕ್ತಿ ಮತ್ತು ಇನ್ನೊಬ್ಬನು ಪಾಪಿ. ಆದರೆ ಭಕ್ತಿಯುಳ್ಳ ವ್ಯಕ್ತಿಯು ಪಾಪಿಯನ್ನು ಅತ್ಯಲ್ಪ ಎಂದು ಪರಿಗಣಿಸಿದ್ದರಿಂದ, ತನಗೆ ಸಿಗಬೇಕಾದ ಒಳ್ಳೆಯದನ್ನು ಕಳೆದುಕೊಂಡನು. ಅತ್ಯಲ್ಪ ಎಂದು ಪರಿಗಣಿಸಲ್ಪಟ್ಟವನು ದೇವರಿಂದ ಅಂಗೀಕರಿಸಲ್ಪಟ್ಟನು. ಯೇಸು ಎಂತಹ ಪಾಪಿಯ ಮನಸ್ಸನ್ನಾದರೂ ಬದಲಾಯಿಸಲು ಸಮರ್ಥನಾಗಿದ್ದಾನೆ. ನಾವು ಸಹ ಪಾಪ ಮಾಡಿದ್ದೇವೆ ಮತ್ತು ದೇವರ ಕರುಣೆಯಿಂದ ಪಾಪಕ್ಷಮಾಪಣೆಯನ್ನು ಪಡೆದಿದ್ದೇವೆ. ಯಾರನ್ನೂ ಅತ್ಯಲ್ಪವಾಗಿ ಭಾವಿಸಿ ಅವರನ್ನು ತಿರಸ್ಕರಿಸಬಾರದು. ನಾವು ಅವರಿಗಾಗಿ ಹೆಚ್ಚು ಪ್ರಾರ್ಥಿಸಬೇಕು. ಯೇಸು ಅವರನ್ನು ರಕ್ಷಿಸುತ್ತಾರೆ ಮತ್ತು ನಮ್ಮನ್ನು ಸಹ ಆಶೀರ್ವದಿಸುತ್ತಾರೆ. ಈ ವರ್ಷ ನಮ್ಮ ಎಲ್ಲಾ ಕಾರ್ಯಗಳು ಯೇಸುವಿಗೆ ಇಷ್ಟವಾಗಲಿ. ಕರ್ತನು ಸ್ವತಃ ನಮ್ಮನ್ನು ಆಶೀರ್ವದಿಸಲಿ! ಆಮೆನ್. ಹಲ್ಲೆಲೂಯಾ!

- Mrs. ಹೆಪ್ಸಿಬಾ ಇಮ್ಮಾನುವೇಲ್

 

ಪ್ರಾರ್ಥನಾ ಅಂಶ:

12 ಕಿಡ್ಸ್ ಕ್ಲಬ್‌ಗಳಿಗಾಗಿ, ಮಕ್ಕಳು ದೇವರ ಜ್ಞಾನದಿಂದ ತುಂಬಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet meritking meritking giriş meritking güncel giriş perabet perabet giriş perabet güncel giriş holiganbet holiganbet giriş holiganbet güncel giriş holiganbet holiganbet giriş Meritking Perabet Holiganbet jojobet jojobet giriş jojobet güncel giriş