Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.02.2026 (Kids special)
Share:

By Village Missionary Movement

Sunday, 01-Feb-2026

ಧೈನಂದಿನ ಧ್ಯಾನ(Kannada) – 01.02.2026 (Kids special)

 

ತೆಂಗಿನಕಾಯಿ ಕಥೆ

 

"...ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು." - 2 ಕೊರಿಂ. 9:7

 

ಪ್ರೀತಿಯ ಪುಟಾಣಿಗಳೇ! ಹೇಗಿದ್ದೀರ? ಇಂದು ಒಂದು ಕಥೆಯನ್ನು ಕೇಳೋಣ್ವಾ? ಒಂದು ಕುಟುಂಬವಿತ್ತು ಮತ್ತು ಅವರಿಗೆ ಒಂದು ತೆಂಗಿನ ತೋಟವೂ ಇತ್ತು. ಅಲ್ಲಿ ರಾಜು ಮತ್ತು ರಘು ಎಂಬ ಅಣ್ಣ ತಮ್ಮ ಇದ್ದರು. ಅವರು ತುಂಬಾ ಒಗ್ಗಟ್ಟಾಗಿ ಪ್ರೀತಿಯಿಂದ ಇದ್ದರು. ಅವರಿಗೆ ಸುಮಾರು ಹತ್ತು ಹನ್ನೆರಡು ವರ್ಷವಿದ್ದಾಗ, ಅವರ ತಂದೆ ನಿಧನರಾದರು. ಅವರು ದೊಡ್ಡವರಾದಾಗ, ಇಬ್ಬರೂ ತಮ್ಮ ತಂದೆಯ ತೆಂಗಿನ ತೋಟವನ್ನು ನೋಡಿಕೊಂಡರು. ಆ ವರ್ಷ, ಅವರು ಸಾವಿರ ತೆಂಗಿನಕಾಯಿಗಳನ್ನು ಕಿತ್ತುಕೊಂಡರು. 500 ತೆಂಗಿನಕಾಯಿಗಳನ್ನು ಮಾರುವುದು ನಿನಗೆ, 500 ತೆಂಗಿನಕಾಯಿಗಳನ್ನು ಮಾರುವುದು ನನಗೆ ಎಂದು ಹಂಚಿಕೊಂಡರು. ಅಣ್ಣ ಹೇಳಿದ್ರು ಹಗಲಲ್ಲಿ ನಾನು ತೋಟವನ್ನು ನೋಡಿಕೊಳ್ಳುತ್ತೇನೆ, ನೀನು ರಾತ್ರಿಯಲ್ಲಿ ನೋಡಿಕೋ ಎಂದು. ಆ ತೋಟ ಸರಿಯಾದ ಭದ್ರತೆ ಇಲ್ಲದೆ ಇತ್ತು. ಒಂದು ದಿನ ಅಣ್ಣ ರಾತ್ರಿಯಿಡೀ ತಮ್ಮ ನೋಡಿಕೊಳ್ಳುತ್ತಿದ್ದಾನೆ ಕಷ್ಟಪಡುತ್ತಿದ್ದಾನೆ ಎಂದು ಭಾವಿಸಿ, ನಾನು ಕೊಟ್ಟರೆ ಅವನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಒಂದು 50 ಕಾಯಿಗಳನ್ನು ತನ್ನ ಪಾಲಿನಿಂದ ತನ್ನ ತಮ್ಮನ ಪಾಲಿನಲ್ಲಿ ಹಾಕಿದನು. ರಾತ್ರಿ ಅಲ್ಲಿಗೆ ತಮ್ಮ ಬಂದನು, ಅವನು ನಮ್ಮ ತಂದೆ ತೀರಿಕೊಂಡ ನಂತರ ನನ್ನ ಅಣ್ಣ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ನಾವು ಅವನಿಗೆ ಏನಾದರೂ ಮಾಡಬೇಕು ಎಂದು ಭಾವಿಸಿದನು, ನಾವು ಕೊಟ್ಟರೆ ಅವನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಅವನು ತನ್ನ ಪಾಲಿನಿಂದ 50 ಕಾಯಿಗಳನ್ನು ತೆಗೆದುಕೊಂಡು ತನ್ನ ಅಣ್ಣನ ಪಾಲಿನಲ್ಲಿ ಹಾಕಿದನು.

 

ಮರುದಿನ, ಎಲ್ಲಾ ಕಾಯಿಗಳನ್ನು ಸಾಗಿಸಲು ಲಾರಿ ಬಂತು. ಆಗ ಮೊದಲು ಅಣ್ಣನ ಪಾಲನ್ನು ಎಣಿಸಿದರು. ಎಷ್ಟು ಇರುತ್ತದೆ ಎಂದು ನೀವು ಭಾವಿಸುತ್ತೀರಿ? ಹೌದು, ಕರೆಕ್ಟಾಗಿ 500 ಕಾಯಿಗಳು ಇದ್ದವು! ಅಣ್ಣನಿಗೆ ಒಂದೇ ಆಶ್ಚರ್ಯ! ನಾನೇ ತಾನೇ ತಮ್ಮನಿಗೆ 50 ಕಾಯಿ ಎತ್ತಿಹಾಕಿದ್ದು ಹಾಗಾದರೆ ನಮ್ಮ ಪಾಲಿನಲ್ಲಿ 450 ತಾನೇ ಇರಬೇಕು. ಆದರೆ ಅವನು ಅಂದುಕೊಂಡ, ನಾವು ಇತರರಿಗೆ ಕೊಟ್ಟರೆ, ಅದರಲ್ಲಿ ಕೊರತೆಯೇ ಇರುವುದಿಲ್ಲ ಎಂದು! ಸ್ವೀಕರಿಸುವುದಕ್ಕಿಂತ ಕೊಡುವುದು ಉತ್ತಮ ಎಂದು ಸತ್ಯವೇದವು ಹೇಳುತ್ತದೆ! "ಕೇಳಿರಿ ಕೊಡಲ್ಪಡುವುದು ಎಂಬ ವಾಕ್ಯ ಇಡೀ ಜಗತ್ತಿಗೇ ತಿಳಿದಿದೆ. ಆದರೆ "ಕೊಡಿರಿ ಆಗ ಕೊಡಲ್ಪಡುವುದು ಎಂಬ ವಾಕ್ಯದ ಪ್ರಕಾರ ನಾವು ಇತರರಿಗೆ ಕೊಡುವಾಗ ಕರ್ತನು ನಮ್ಮನ್ನು ಎಂದಿಗೂ ಮರೆಯುವುದೇ ಇಲ್ಲ. ನಾವು ಮನುಷ್ಯರಿಗೆ ಕೊಟ್ಟಾಗ, ದೇವರು ನಮಗೆ ಹಿಂತಿರುಗಿ ಕೊಡುತ್ತಾರೆ. ಅದೂ ಅಳತೆಗೆ ಮೀರಿದ್ದು ಕೊಡುತ್ತಾರೆ. ಆದ್ದರಿಂದ ಈ ವರ್ಷ, ನಾವು ಕರ್ತನಿಗಾಗಿ ಕೊಡೋಣ. ನಮ್ಮ ಜೀವನದಲ್ಲಿ ಆಶೀರ್ವಾದಗಳು ಬರುತ್ತವೆ ಸರೀನಾ ಮಕ್ಕಳೇ, ನಿಮಗಾಗಿ ಪ್ರಾರ್ಥಿಸಿಕೊಳ್ಳುತ್ತೇನೆ. ಆಮೆನ್. 

- Sis.ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al