By Village Missionary Movement
Sunday, 13-Jun-2021ಧೈನಂದಿನ ಧ್ಯಾನ(Kannada) – 13.06.2021 (Kids Special)
ಶಾಂತಿಯ ಮಾದರಿಯಾದ ಜೀವನ
“ನೀವು ಲೋಕಕ್ಕೆ ಬೆಳಕಾಗಿದ್ದೀರಿ." - ಮತ್ತಾಯ 5:14
ಮಾಲಾ, ಕಲಾ, ಶಾಂತಿ ಮೂವರೂ ಒಂದೇ school- ನಲ್ಲಿ ಒಂದೇ class- ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು. ಇದರಲ್ಲಿ ಕಲಾ ಮತ್ತು ಮಾಲಾ ಆಪ್ತ ಸ್ನೇಹಿತೆಯರು. ಅಷ್ಟು ಮಾತ್ರವಲ್ಲದೆ ಭಯಾನಕ ತುಂಟು ಮಕ್ಕಳು. ಅವರು ಯಾವಾಗಲೂ ಯಾರನ್ನಾದರೂ ಗೇಲಿ ಮಾಡುತ್ತಾ ಕೋಪ ಬರಿಸುತ್ತಲೇ ಇರುತ್ತಾರೆ. ಶಾಂತಿ ಬಹಳ ತಾಳ್ಮೆ ಮತ್ತು ತಂದೆ ತಾಯಿಗೆ ವಿಧೇಯಳಾಗುವ ಮಗು. ಅವಳು ಯಾವಾಗಲೂ ಇತರರಿಗೆ ಮೂಲ ಮಾದರಿಯಾಗಿರಬೇಕೆಂದು ಬಯಸುತ್ತಾಳೆ. ಈ ಒಳ್ಳೆಯ ನಡವಳಿಕೆಯನ್ನು ನೋಡಿ ಅನೇಕ ಚಿಕ್ಕ ಮಕ್ಕಳು ಸಹ ತಮ್ಮ ಮನಸ್ಸನ್ನು ಒಳ್ಳೆತನದ ಕಡೆಗೆ ಮಾರ್ಪಡಿಸಿಕೊಳ್ಳುತ್ತಾರೆ.
ಒಂದು ದಿನ, ಮಾಲಾಳ ತಾಯಿ ಕೈಯಲ್ಲಿ ಬಕೆಟ್ ಇಟ್ಟುಕೊಂಡು “ಮಾಲಾ… .ಮಾಲಾ” ಎಂದು ಕರೆಯುತ್ತಾ ಬೀದಿಯೆಲ್ಲಾ ಹುಡುಕಾಡುತ್ತಾ ಕೊನೆಗೆ ತನ್ನ ಮನೆಯ ಸಮೀಪವಿರುವ Garden ಗೆ ಬಂದರು. ಅಲ್ಲಿ ಮಾಲಾ ಒಂದು ಕಥೆ ಪುಸ್ತಕವನ್ನು ಓದುತ್ತಿದ್ದಳು. ತಾಯಿಯ ಧ್ವನಿ ಕೇಳಿದಾಗ ಅವಳಿಗೆ ಕೋಪಬಂತು. ವೇಗವಾಗಿ ಬಂದು, "ನೀವು ಯಾಕೆ ಹೀಗೆ ಕಿರುಚುತ್ತಿದ್ದೀರಿ?" ಎಂದು ಅವಳು ಗಟ್ಟಿಯಾಗಿ ಹೇಳಿದಳು. ಮಾಲಾಳ ತಾಯಿ ಸದ್ದಿಲ್ಲದೆ ತನ್ನ ಕೈಯಲ್ಲಿದ್ದ ಬಕೆಟ್ ಅನ್ನು ಅವಳ ಕೈಗೆ ಕೊಟ್ಟು, "ಇದರಲ್ಲಿ ಅಕ್ಕಿ ಇದೆ, ಇದನ್ನು Rice Mill-ಗೆ ಕೊಟ್ಟು ಪುಡಿ ಮಾಡಿಸಿಕೊಂಡು ಬಾ" ಎಂದು ಹೇಳಿದರು. ತಕ್ಷಣ ಮಾಲಾ, "ನನಗೆ ಸಾಧ್ಯವಿಲ್ಲ, ನಾನು ಓದಬೇಕು" ಎಂದು ಹೇಳಿದಳು. ತಕ್ಷಣ, ಮಾಲಾಳ ತಾಯಿ, "ನಿನ್ನೊಂದಿಗೆ ಓದುತ್ತಿರುವ ಶಾಂತಿ ಕೂಡ ಈಗಲೇ ಬಕೆಟ್ ತೆಗೆದುಕೊಂಡು ರೈಸ್ ಮಿಲ್‌ಗೆ ಹೋದಳು" ಎಂದು ಹೇಳಿದರು. ಮಾಲಾ ತಕ್ಷಣ, “ಮತ್ತೊಬ್ಬರನ್ನು ನನಗೆ ಹೋಲಿಸಬೇಡ. ನಾನು ಹೋಗಿ ಅದನ್ನು ಪುಡಿಮಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿ ಹೋದಳು. ಮರುದಿನ ಎಂದಿನಂತೆ School ಗೆ ಹೋದಳು. Teacher maths ಪಾಠ ನಡೆಸುತ್ತಿದ್ದರು. ಪಾಠ ಮುಗಿದ ನಂತರ, ಯಾರಾದರೂ ಮುಂದೆ ಬಂದು ಈ ಲೆಕ್ಕವನ್ನು Board-ನಲ್ಲಿ ಬರೆಯಿರಿ ಎಂದು ಹೇಳಿದರು. ಎಲ್ಲಾ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿರಲು, ಶಾಂತಿ ಮನಸ್ಸಿನಲ್ಲಿ ಪ್ರಾರ್ಥಿಸಿಕೊಳ್ಳುತ್ತಾ ಬಂದು ಪ್ರಯತ್ನಿಸೋಣ ಎಂದು ಮನಸ್ಸಿನಲ್ಲಿ ಯೋಚಿಸುತ್ತಾ Board - ನಲ್ಲಿ ಬರೆದಳು. ಎಲ್ಲವೂ ಸರಿಯಾಗಿ ಬಂದವು. Teacher ಶಾಂತಿಯನ್ನು ಹೊಗಳಿ, " ಇವಳಂತೆ ನೀವು ಕೂಡ ಧೈರ್ಯವುಳ್ಳ, ಮೂಲ ಮಾದರಿಯಾದ ಮಕ್ಕಳಾಗಿರಬೇಕು" ಎಂದು ಹೇಳಿದರು. ಶಾಂತಿಯನ್ನು ಹೊಗಳಿದ್ದನ್ನು ಸಹಿಸಲಾಗದ ಮಾಲಾ ಮತ್ತು ಕಲಾ ಅವರ ಮನಸ್ಸಿನಲ್ಲಿ ಬಹಳ ಉರಿಗೊಂಡರು. ಆದರೂ, Class ಮುಗಿದ ನಂತರ ಶಾಂತಿಯ ಬಳಿಗೆ ಹೋಗಿ, "ನೀನು ಮಾತ್ರ ಈ ರೀತಿ ಎಲ್ಲರ ಬಳಿ ಹೇಗೆ ಒಳ್ಳೆಯ ಹೆಸರನ್ನು ಪಡೆಯಲು ಸಾಧ್ಯವಾಗುತ್ತಿದೆ" ಎಂದು ಕೇಳಿದರು. ಶಾಂತಿ ನಗು ಮುಖದಿಂದ, “ಯೇಸಪ್ಪ ನಮ್ಮೊಳಗಿದ್ದರೆ ಇಂತಹ ಲಕ್ಷಣಗಳು ಬರುತ್ತವೆ. ನಾನು ಹೋಗುವ Sunday school-ನಲ್ಲಿ ಅವರು ಇನ್ನೂ ಹೆಚ್ಚಾಗಿ ಕಲಿಸಿಕೊಡುತ್ತಾರೆ, ನೀವೂ ಬರುತ್ತೀರಾ? ” ಎಂದು ಕೇಳಿದಳು. ಅವರೂ ಖಂಡಿತವಾಗಿ ಬರುತ್ತೇವೆ ಎಂದು ಹೇಳಿದರು.
ಪುಟ್ಟ ತಮ್ಮ, ತಂಗಿ! ನೀವೂ ಈ ಶಾಂತಿಯಂತಹ ಮೂಲ ಮಾದರಿಯಾದ ಮಗುವಾಗಿ ಬದುಕಿ ತೋರಿಸಬೇಕು. Ok.
- Mrs. ಸಾರಾ ಸುಭಾಷ್
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482