By Village Missionary Movement
Saturday, 31-Jan-2026ಧೈನಂದಿನ ಧ್ಯಾನ(Kannada) – 31.01.2026
ಒಳ್ಳೆಯ ಉದಾಹರಣೆ
"...ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿಹೋದನು" - 1 ಪೇತ್ರ 2: 21
ಒಂದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಒಂದು ಆಸಕ್ತಿದಾಯಕ ಪ್ರಶ್ನೆಯನ್ನು ಕೇಳಿದರು. ಒಂದು ಮರದ ಕೊಂಬೆಯ ಮೇಲೆ ನಾಲ್ಕು ಪಕ್ಷಿಗಳು ಕುಳಿತಿವೆ. ಅವುಗಳಲ್ಲಿ ಮೂರು ಪಕ್ಷಿಗಳು ಆ ಮರದಿಂದ ಹಾರಿಹೋಗೋಣ ಎಂದು ನಿರ್ಧರಿಸುತ್ತಿವೆ. ಈಗ ಆ ಮರದ ಮೇಲೆ ಎಷ್ಟು ಪಕ್ಷಿಗಳು ಉಳಿಯುತ್ತವೆ? ಎಂದು ಕೇಳಿದರು. ಬಹುತೇಕ ಎಲ್ಲಾ ವಿದ್ಯಾರ್ಥಿಗಳು ತಕ್ಷಣ ಒಂದೇ ಹಕ್ಕಿ ಇರುತ್ತದೆ ಎಂದು ಉತ್ತರಿಸಿದರು. ಆದರೆ ಒಬ್ಬ ವಿದ್ಯಾರ್ಥಿ ಮಾತ್ರ ಎದ್ದುನಿಂತು, ಇಲ್ಲ ಅಯ್ಯಾ, ನಾಲ್ಕು ಪಕ್ಷಿಗಳೂ ಮರದ ಮೇಲೆಯೇ ಇರುತ್ತವೆ ಎಂದು ಹೇಳಿದನು. ತರಗತಿಯಲ್ಲಿದ್ದ ಎಲ್ಲರೂ ಅವನನ್ನು ಆಶ್ಚರ್ಯದಿಂದ ನೋಡಿದರು. ಪ್ರಾಧ್ಯಾಪಕರು, "ಅದು ಹೇಗೆ ಸಾಧ್ಯ? ವಿವರಿಸಿ ಹೇಳು ಎಂದು ಹೇಳಿದರು. ಅದಕ್ಕೆ ಆ ವಿದ್ಯಾರ್ಥಿ ಅಯ್ಯಾ, ಆ ಮೂರು ಪಕ್ಷಿಗಳು ಹಾರಿಹೋಗಲು ಮಾತ್ರ ನಿರ್ಧರಿಸಿದವು. ಆದರೆ ಅವು ಹಾರಿಹೋಗಲಿಲ್ಲ.
ಕರ್ತನಾದ ಯೇಸು ತಾನು ಈ ಭೂಮಿಯ ಮೇಲೆ ವಾಸಿಸುತ್ತಿದ್ದ ದಿನಗಳಲ್ಲಿ ಅನೇಕ ಅದ್ಭುತಗಳನ್ನು ಮಾಡಿದರು. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಅನೇಕರನ್ನು ಅವರು ಗುಣಪಡಿಸಿದರು. ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದರು. ನಾವು ಕರ್ತನಾದ ಯೇಸುವನ್ನು ಗಮನಿಸಿ ನೋಡುವುದಾದರೆ, ಹಿಂದಿನ ದಿನ ಅನೇಕ ಅದ್ಭುತ, ಅತಿಶಯಗಳನ್ನು ಮಾಡಿ ಮುಗಿಸಿ, ಮರುದಿನ ಮುಂಜಾನೆಯಲ್ಲಿ ಪ್ರಾರ್ಥಿಸಲು ಎದ್ದೇಳುತ್ತಿದ್ದರು. ಮುಂಜಾನೆಯಲ್ಲಿ ಎದ್ದು ನಾವು ದೇವರನ್ನು ಹುಡುಕುವಂತೆ ಅವರು ಸ್ವತಃ ನಮಗೆ ಒಂದು ಮಾದರಿಯನ್ನು ತೋರಿಸಿ ಹೋಗಿದ್ದಾರೆ. ಯೇಸುಕ್ರಿಸ್ತನು ತಾನು ಮಾಡಬೇಕಾದದ್ದನ್ನು ಕ್ರಿಯೆಯಲ್ಲಿಯೂ ಮಾಡಿ ತೋರಿಸಿದರು.
ಇದನ್ನು ಓದುತ್ತಿರುವ ಪ್ರಿಯರೇ, ಹೊಸ ವರ್ಷವನ್ನು ಪ್ರವೇಶಿಸಿದ ನಮ್ಮಲ್ಲಿ ಅನೇಕರು ಜೀವನದಲ್ಲಿ ದೊಡ್ಡ ಗುರಿಗಳನ್ನು ಸಾಧಿಸಲು ಮತ್ತು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಲೆಕ್ಕವಿಲ್ಲದಷ್ಟು ನಿರ್ಣಯಗಳನ್ನು ಮಾಡುತ್ತೇವೆ. ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ. ಸ್ನೇಹಿತರ ಬಳಿ ಮತ್ತು ಸಂಬಂಧಿಕರ ಬಳಿ ನಮ್ಮ ಯೋಜನೆಗಳ ಬಗ್ಗೆ ಹೆಮ್ಮೆಯಾಗಿ ಮಾತಾಡುತ್ತೇವೆ. ಆದರೆ ನಮ್ಮಲ್ಲಿ ಎಷ್ಟು ಮಂದಿ ಆ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಮೊದಲ ಹೆಜ್ಜೆ ಇಡುತ್ತೇವೆ? ನಿರ್ಧಾರ ಮತ್ತು ಕ್ರಿಯೆಯ ನಡುವಿನ ವ್ಯತ್ಯಾಸವೆಂದರೆ ಏನನ್ನಾದರೂ ಮಾಡಲು ನಿರ್ಧರಿಸುವುದು ಪ್ರಯಾಣದ ಆರಂಭ ಮಾತ್ರ. ಅದರ ಬಗ್ಗೆ ಮಾತನಾಡುವವರು ಅನೇಕರಿರಬಹುದು. ಆದರೆ ಕ್ರಮ ತೆಗೆದುಕೊಳ್ಳುವವರು ಕಡಿಮೆ. ನಮ್ಮ ಯೇಸು ಆ ಕೆಲವರಲ್ಲಿ ಒಬ್ಬರು. "ಆತುರದಿಂದ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು" ಎಂದು ಹೇಳಿದವರು ಅದನ್ನು ಮಾಡಿ ತೋರಿಸಿ ಹೋಗಿದ್ದಾರಲ್ಲಾ... ಒಳ್ಳೆಯ ಮಾದರಿಯನ್ನು ನಮಗಿಟ್ಟು ಹೋಗಿದ್ದಾರೆ. ಯೇಸುವನ್ನು ನಾವು ಹಿಂಬಾಲಿಸೋಣ. ಇತರರಿಗೆ ಒಳ್ಳೆಯ ಮಾದರಿಯಾಗಿ ಜೀವಿಸೋಣ.
- Mrs. ಶಕ್ತಿ ಶಂಕರ್
ಪ್ರಾರ್ಥನಾ ಅಂಶ:
ಮಾಧ್ಯಮ ಸೇವೆಯ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482