Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.01.2026
Share:

By Village Missionary Movement

Friday, 30-Jan-2026

ಧೈನಂದಿನ ಧ್ಯಾನ(Kannada) – 30.01.2026

 

ಯಶಸ್ಸಿನ ರಹಸ್ಯ

 

"...ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ" - ಎಫೆಸ 4:29

 

ಯಶಸ್ಸಿನ ರಹಸ್ಯವೆಂದರೆ ಇತರರ ಬಳಿ ಇರುವ ಒಳ್ಳೆಯ ಗುಣಗಳ ಬಗ್ಗೆ ಮಾತ್ರ ಮಾತನಾಡುವುದು. ಬೆಂಜಮಿನ್ ಫ್ರಾಂಕ್ಲಿನ್ ಅವರನ್ನು ಫ್ರಾನ್ಸ್‌ಗೆ ಅಮೇರಿಕನ್ ಪ್ರತಿನಿಧಿಯಾಗಿ ನೇಮಿಸಲಾಯಿತು. ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಅವರ ಸಾಧನೆಗಳನ್ನು ಕಂಡು ಆಶ್ಚರ್ಯಚಕಿತರಾದವರು ಅವರ ಬಳಿ, "ನಿಮ್ಮ ಯಶಸ್ಸಿನ ರಹಸ್ಯವೇನು?" ಎಂದು ಕೇಳಿದರು. ಬೆಂಜಮಿನ್ ಫ್ರಾಂಕ್ಲಿನ್ "ನಾನು ಯಾರ ಬಗ್ಗೆಯಾದರೂ ಮಾತನಾಡಬೇಕಾದರೆ ಅವರ ಒಳ್ಳೆಯ ಗುಣಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಾನು ಅವರ ಕೊರತೆಗಳು ಅಥವಾ ವೈಫಲ್ಯಗಳ ಬಗ್ಗೆ ಮಾತನಾಡುವುದಿಲ್ಲ" ಎಂದರು. ಅದೇ ರೀತಿ ನೀವು ಸಹ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬೇಡಿರಿ. ಇತರರಲ್ಲಿ ಏನಾದರೂ ಒಳ್ಳೆಯದು ಇದ್ದರೆ, ಅದರ ಬಗ್ಗೆ ಮಾತನಾಡಬಹುದು, ಇಲ್ಲದಿದ್ದರೆ ಮೌನವಾಗಿರಬಹುದು. ಅದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಹೇಳಿದರು.

 

ಪ್ರೀತಿಯ ದೇವರ ಮಗುವೇ, ನಾವು ಸತ್ಯವೇದದಲ್ಲಿ ಒಂದು ಘಟನೆಯನ್ನು ಓದುತ್ತೇವೆ. ಯೂದ 1:9 ರಲ್ಲಿ, ಪ್ರಧಾನ ದೇವದೂತನಾದ ಮಿಕಾಯೇಲನು ಮೋಶೆಯ ದೇಹದ ಬಗ್ಗೆ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ, ಅವನ ವಿರುದ್ಧ ದೂಷಣೆಯ ಆರೋಪವನ್ನು ತರಲು ಧೈರ್ಯ ಮಾಡದೆ, “ಕರ್ತನು ನಿನ್ನನ್ನು ಖಂಡಿಸಲಿ” ಎಂದು ಹೇಳಿದನು. ಸೈತಾನನು ಯೆಹೋಶುವನಿಗೆ ವಿರೋಧವಾಗಿ ಕೆಡುಕು ಮಾಡಲು ಅವನ ಬಲಗಡೆಯಲ್ಲಿ ನಿಂತಾಗಲೂ, ಕರ್ತನು ನಿನ್ನನ್ನು ಖಂಡಿಸಲಿ ಎಂದರು.

 

ಜೆಕರ್ಯ 3:1,2 ರಲ್ಲಿ, ಮಹಾಯಾಜಕನಾದ ಯೆಹೋಶುವನು ಕರ್ತನ ದೂತನ ಮುಂದೆ ನಿಂತಾಗ, ಸೈತಾನನು ಅವನಿಗೆ ವಿರೋಧವಾಗಿ ಕೇಡು ಮಾಡಲು ಅವನ ಬಲಗಡೆಯಲ್ಲಿ ನಿಂತನು. ಆಗ ಯೆಹೋವನ ದೂತನು ಸೈತಾನನಿಗೆ - ಸೈತಾನನೇ, ಯೆಹೋವನು ನಿನ್ನನ್ನು ಖಂಡಿಸಲಿ! ಅದು ಉರಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ ಎಂದು ಹೇಳಿದನು.

 

ಪ್ರೀತಿಯ ದೇವರ ಮಗುವೇ, ಸೈತಾನನು ತಪ್ಪು ಮಾಡಿದರೂ ಕರ್ತನು ಅವನ ವಿರುದ್ಧ ದೂಷಣೆಯ ಆರೋಪವನ್ನು ತರಲು ಧೈರ್ಯ ಮಾಡಲಿಲ್ಲ ಎಂದು ಸತ್ಯವೇದದಲ್ಲಿ ಓದುತ್ತೇವೆ. ಕರ್ತನೇ ಖಂಡಿಸಲು ಧೈರ್ಯ ಮಾಡದಿದ್ದಾಗ, ದೇವರಿಂದ ಆರಿಸಲ್ಪಟ್ಟ, ಅಭಿಷೇಕಿಸಲ್ಪಟ್ಟ ದೇವರ ಸ್ವಾರೂಪ್ಯದಲ್ಲಿ ಸೃಷ್ಟಿಸಲ್ಪಟ್ಟ ದೇವರ ಮಕ್ಕಳ ಮೇಲೆ ನಾವು ಕೊರತೆ ಹೇಳಬಹುದಾ? ಕೊರತೆ ಹೇಳಲೇಬಾರದು ನಿಮ್ಮ ಬಾಯಿಯನ್ನು ಕಲುಷಿತಗೊಳ್ಳದಂತೆ ಕಾಪಾಡಿಕೊಳ್ಳಿರಿ. ಅದೇ ಯಶಸ್ಸಿನ ರಹಸ್ಯ.

- R. ಸಲೋಮಿ

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಯಲ್ಲಿ ಇರುವ ಸೇವಕರನ್ನು ದೇವರು ಆತ್ಮದಲ್ಲಿ ತುಂಬಿಸಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet