By Village Missionary Movement
Wednesday, 28-Jan-2026ಧೈನಂದಿನ ಧ್ಯಾನ(Kannada) – 28.01.2026
ಸ್ವಾರ್ಥವು ಸಾಯಲಿ
“ಯೆಹೋವನ ಭಯವೇ ಜ್ಞಾನೋಪದೇಶ;..." - ಜ್ಞಾನೋಕ್ತಿ 15:33
ನಂಬಿಕೆಯ ಯೋಧ ಜಾರ್ಜ್ ಮುಲ್ಲರ್ ಬಳಿಗೆ ಒಮ್ಮೆ ಒಬ್ಬ ಯುವಕ ಹೋಗಿ ನಿಮ್ಮ ಯಶಸ್ಸಿಗೆ ಕಾರಣವೇನು ಎಂದು ಕೇಳಿದನು. ಅದಕ್ಕೆ ಅವರು, “ಕ್ರಿಸ್ತನೊಂದಿಗೆ ಶಿಲುಬೆಗೇರಿಸಲ್ಪಟ್ಟಿದ್ದೇನೆ ನನ್ನ ಸ್ವಾರ್ಥವು ಸತ್ತುಹೋಯಿತು. ಅದೇ ನನ್ನ ಸೇವೆಯ ಯಶಸ್ಸಿಗೆ ಕಾರಣ ಎಂದರು. ಆಗ ಆ ಯುವಕನು ಅಯ್ಯಾ, ಸ್ವಾರ್ಥಕ್ಕೆ ಸಾಯುವುದು ಎಂದರೆ ಏನು? ಎಂದು ಕೇಳಿದನು. ಅದಕ್ಕೆ ಅವರು ತಮ್ಮಾ, ನೀನು ಸ್ಮಶಾನಕ್ಕೆ ಹೋಗಿ, ಅಲ್ಲಿನ ಸಮಾಧಿ ಕಲ್ಲುಗಳ ಮೇಲೆ ಬರೆದಿರುವ ಸತ್ತವರ ಹೆಸರುಗಳನ್ನು ಓದಿ, ಅವರನ್ನು ಶಪಿಸು. ನಂತರ ಸ್ವಲ್ಪ ಸಮಯದ ನಂತರ, ಅವರನ್ನು ಹೊಗಳಿ ಮಾತಾಡು. ನಂತರ ನನ್ನ ಬಳಿಗೆ ಬಾ ಎಂದು ಹೇಳಿ ಕಳುಹಿಸಿದರು. ಹಾಗೆಯೇ ಆ ಯುವಕನು ಸ್ಮಶಾನಕ್ಕೆ ಹೋಗಿ, ಅವರನ್ನು ಶಪಿಸಿ, ಹೊಗಳಿ ಮಾತಾಡಿ ಹಿಂತಿರುಗಿ ಬಂದನು. ಜಾರ್ಜ್ ಮುಲ್ಲರ್ ಅವನ ಬಳಿ, ಸಮಾಧಿಗಳಲ್ಲಿ ಹೂಳಲ್ಪಟ್ಟವರು ನಿನ್ನನ್ನು ಶಪಿಸಿದರಾ? ಎಂದು ಕೇಳಿದರು. ಇಲ್ಲ, ಯಾವ ಪ್ರತ್ಯುತ್ತರವೂ ಹೇಳಲಿಲ್ಲ ಎಂದು ಹೇಳಿದನು. ನೀನು ಅವರನ್ನು ಹೊಗಳಿದಾಗ ಅವರು ಹೆಮ್ಮೆಪಟ್ಟು ನಿನ್ನನ್ನು ಹೊಗಳಿದರಾ? ಎಂದು ಕೇಳಿದರು. ಇಲ್ಲ, ಏನೂ ಮಾತಾಡಲಿಲ್ಲ ಎಂದನು. 'ಸ್ವಾರ್ಥ ಮರಣ' ಎಂಬುದು ಅದೇ. ಇತರರ ಹೊಗಳಿಕೆ ನಮ್ಮನ್ನು ಹೆಮ್ಮೆಪಡುವಂತೆ ಮಾಡಲೂಬಾರದು, ಅಥವಾ ತಿರಸ್ಕಾರವು ನಮ್ಮ ಮೇಲೆ ಪರಿಣಾಮ ಬೀರಲೂಬಾರದು. ಈ ಮನಸ್ಥಿತಿಯನ್ನು, ಶಿಲುಬೆಯ ಮೇಲೆ ತನ್ನ ಪ್ರಾಣವನ್ನು ನೀಡಿದ ಯೇಸುಕ್ರಿಸ್ತನ ಸಹಾಯದಿಂದ ಪಡೆದುಕೊಳ್ಳುವುದೇ ಸ್ವಾರ್ಥ ಸಾಯುವುದು ಎಂದು ಮುಲ್ಲರ್ ಹೇಳಿದರು.
ಬೈಬಲ್‌ನಲ್ಲಿ ಪೌಲನ ಕುರಿತು ನೋಡುವುದಾದರೆ ದೇವರ ಚಿತ್ತವನ್ನು ಪೂರೈಸಲು ಅನೇಕ ಕಷ್ಟಗಳನ್ನು ಸಹಿಸಿಕೊಂಡರು. ಮೆಲೀತೆ ಎಂಬ ದ್ವೀಪದಲ್ಲಿ ಇರುವಂತಹ ಸಂದರ್ಭ ಬಂದಾಗ ಮಳೆ ಮತ್ತು ಚಳಿಯಿಂದಾಗಿ ಬೆಂಕಿಯನ್ನು ಹೊತ್ತಿಸಿ, ಅಲ್ಲಿ ಎಲ್ಲರೂ ಚಳಿಕಾಯಿಸಿಕೊಳ್ಳುತ್ತಿದ್ದರು. ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ಬೆಂಕಿಯ ಮೇಲೆ ಹಾಕಲು ಆ ಕಾವಿನ ದೆಸೆಯಿಂದ ಒಂದು ಹಾವು ಹೊರಗೆ ಬಂದು ಅವರ ಕೈಯನ್ನು ಬಿಗಿಯಾಗಿ ಹಿಡುಕೊಂಡಿತು. ಆ ಜಂತು ಅವರ ಕೈಯಿಂದ ಜೋತಾಡುವದನ್ನು ದ್ವೀಪದವರು ನೋಡಿ - ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಇವನನ್ನು ಬದುಕಗೊಡಿಸುವದಿಲ್ಲವೆಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. ಪೌಲನು ಆ ಮಾತನ್ನು ಕೇಳಿದಾಗ ಸ್ವಾರ್ಥವನ್ನು ಅಡಗಿಸಿ, ಆ ಜಂತುವನ್ನು ಬೆಂಕಿಯಲ್ಲಿ ಝಾಢಿಸಿಬಿಟ್ಟರು. ಇವನು ಬಾತುಹೋದಾನು ಇಲ್ಲವೆ ಅಕಸ್ಮಾತ್ತಾಗಿ ಸತ್ತುಬಿದ್ದಾನು ಎಂದು ಅವರು ನೋಡಿಕೊಂಡೇ ಇದ್ದರು. ಬಹಳ ಹೊತ್ತು ನೋಡಿಕೊಂಡಿದ್ದ ಮೇಲೆ ಅವನರಿಗೆ ವಿಕಾರವೇನೂ ಆಗಿಲ್ಲವೆಂದು ಕಂಡು ಬೇರೆ ಯೋಚನೆಯುಳ್ಳವರಾಗಿ - ಇವನು ಒಬ್ಬ ದೇವರು ಎಂದು ಹೇಳಿಕೊಂಡರು.
ಕ್ರಿಸ್ತನಲ್ಲಿ ಪ್ರಿಯರೇ, ನಮ್ಮ ಸ್ವಾರ್ಥವು ದಿನನಿತ್ಯ ಶಿಲುಬೆಯಲ್ಲಿ ಸಾಯಲಿ. ಆಗ ದೇವರ ನಾಮವು ಮಹಿಮೆ ಹೊಂದುತ್ತದೆ.
- J. P. ಹೆಪ್ಸಿಬಾ
ಪ್ರಾರ್ಥನಾ ಅಂಶ:
ನಮ್ಮ ಬಳಿ ಸಂಪೂರ್ಣ ಬೈಬಲ್ ಅನ್ನು ಸ್ವೀಕರಿಸಿದವರು ಅದನ್ನು ಸತತವಾಗಿ ಆಸೆಯಿಂದ ಓದುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482