Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.01.2026
Share:

By Village Missionary Movement

Friday, 23-Jan-2026

ಧೈನಂದಿನ ಧ್ಯಾನ(Kannada) – 23.01.2026

 

ಇತರರ ಪ್ರಯೋಜನಕ್ಕಾಗಿ.. 

 

"...ನಾನು ವಿಧಿ ಮೀರಿ ಅರಸನ ಬಳಿಗೆ ಹೋಗುವೆನು, ಸತ್ತರೆ ಸಾಯುತ್ತೇನೆ ಎಂದು ಮೊರ್ದೆಕೈಗೆ ಮರಳಿ ಹೇಳಿಸಿದಳು." - ಎಸ್ತೇರ್ 4:16

 

ಒಮ್ಮೆ, ಮಹಾನಾಯಕ ಕಾಮರಾಜರ್, ಪರಮಕುಡಿ ಭೂ ಸೇತುವೆಯನ್ನು ನೋಡಿದಾಗ ತಮ್ಮೊಂದಿಗೆ ಬಂದ ಶಿಕ್ಷಣ ಅಧಿಕಾರಿಯ ಬಳಿ, ಈ ಕಾಡಿನ ಹೊಳೆಯಲ್ಲಿ ನೀರು ಹರಿಯುವಾಗ ಹೊಳೆಯ ಈ ಬದಿಯಲ್ಲಿರುವ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೇಗೆ ಹೋಗುತ್ತಾರೆ? ಎಂದು ಕೇಳಿದರು. ಮಳೆಗಾಲದಲ್ಲಿ ಅವರು ಶಾಲೆಗೆ ಬರುವುದಿಲ್ಲ ಅಯ್ಯಾ ಎಂದು ಅಧಿಕಾರಿ ಹೇಳಿದರು. ಹಾಗಾದರೆ ಹೊಳೆಯ ಈ ಬದಿಯಲ್ಲಿ ಶಾಲೆಯನ್ನು ನಿರ್ಮಿಸಬೇಕು ತಾನೇ ಎಂದರು. ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ, ಮೂರು ಮೈಲಿಗಳ ಒಳಗೆ ಶಾಲೆ ಇದ್ದರೆ, ಈ ಬದಿಯಲ್ಲಿ ಶಾಲೆಗೆ ಅವಕಾಶವಿಲ್ಲ ಎಂದು ಅಧಿಕಾರಿ ಹೇಳಿದರು. ಅವರು ಮಾತಾಡಿ ಮುಗಿಸುವ ಮೊದಲು ಅರಣ್ಯ ಹೊಳೆಯನ್ನು ಕಾರಣ ತೋರಿಸಿ ಈ ಬದಿಯಲ್ಲಿ ಶಾಲೆಯನ್ನು ನಿರ್ಮಿಸಲು ಅನುಮತಿ ಕೇಳಿರಿ, ನಾನು ವ್ಯವಸ್ಥೆಗಳನ್ನು ಮಾಡುತ್ತೇನೆ ಎಂದರಂತೆ ಕಾಮರಾಜರ್.

 

ಇದರಂತೆಯೇ, ನಮ್ಮ ಕರ್ತನಾದ ಯೇಸು ಕ್ರಿಸ್ತನು, ಅವರು ಬದುಕಿದ ದಿನಗಳಲ್ಲಿ, ಸಬ್ಬತ್ ಪ್ರಮಾಣವನ್ನು ಉಲ್ಲಂಘಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿತ್ತು. ಆದರೆ ಆ ದಿನ ಕೈಬತ್ತಿದ್ದವನೊಬ್ಬನ ಕೈಯನ್ನು ಸ್ವಸ್ಥಮಾಡಿದರು (ಮತ್ತಾ. 12:10). ನೆಟ್ಟಗೆ ನಿಲ್ಲಲು ಸಾಧ್ಯವಾಗದ ಗೂನಿಯನ್ನು ಗುಣಪಡಿಸಿದರು (ಲೂಕ 13:11). 38 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಒಬ್ಬ ವ್ಯಕ್ತಿಯನ್ನು ಗುಣಪಡಿಸಿದರು. ತಕ್ಷಣವೇ ಆ ವ್ಯಕ್ತಿ ಗುಣಮುಖನಾಗಿ, ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು. ಆ ದಿನ ಸಬ್ಬತ್ ದಿನವಾಗಿತ್ತು (ಯೋಹಾನ 5:9). ಕ್ರಿಸ್ತನನ್ನು ಹಿಂಬಾಲಿಸಿದ ಶಿಷ್ಯರು ಮತ್ತು ಅವನ ನಂತರ ನಮ್ಮ ದೇಶಕ್ಕೆ ಬಂದ ಮಿಷನರಿಗಳು, ದೇಶದಲ್ಲಿ ಕಾಣಲ್ಪಟ್ಟ ಸತಿ ಎಂಬ ಮೂಢನಂಬಿಕೆ, ಗುಲಾಮಗಿರಿ, ಮಹಿಳೆಯರಿಗೆ ಶಿಕ್ಷಣ ನಿರಾಕರಣೆ ಮತ್ತು ಬಾಲ್ಯವಿವಾಹದಂತಹ ಎಲ್ಲಾ ಅನಗತ್ಯ ನಿರ್ಬಂಧಗಳನ್ನು ತೆಗೆದುಹಾಕಲು ಹೋರಾಡಿದರಲ್ಲಾ. ನಮ್ಮ ಮುತ್ತಜ್ಜಿ ಎಸ್ತೇರ್ ರಾಣಿ, ಕಾನೂನನ್ನು ಮೀರಿ ರಾಜನ ಸನ್ನಿಧಿಗೆ ಪ್ರವೇಶಿಸಿ ತನ್ನ ಜನರಿಗಾಗಿ ಬೇಡಿಕೊಂಡರಲ್ಲಾ.

 

ನನಗೆ ಪ್ರಿಯವಾದವರೇ, ಇನ್ನೂ ನಾವು ಲೇವಿಯನಂತೆ ಮತ್ತು ಯಾಜಕನಂತೆ ಸೈತಾನನ ಹಿಡಿತದಲ್ಲಿ ಸಿಲುಕಿ ಅರೆಜೀವವಾಗಿ ಬಿದ್ದಿರುವ ಮನುಷ್ಯರನ್ನು, ಕಂಡೂ ಕಾಣದಂತೆ ಪಕ್ಕಕ್ಕೆ ಸರಿದು ಹೋಗುವ ಪರಿಸ್ಥಿತಿ ಇನ್ನು ಮುಂದೆಯಾದರೂ ಬದಲಾಗಲಿ. ಯೇಸು ಕ್ರಿಸ್ತನು ಪ್ರೀತಿಯುಳ್ಳವರು ಮತ್ತು ಅವರೇ ನಿಜವಾದ ದೇವರು ಎಂದು ತಿಳಿದೂ, ಊರು ಏನು ಹೇಳುತ್ತದೆ ಸಂಬಂಧಿಕರು ಏನು ಹೇಳುತ್ತಾರೆ ಎಂದು ಹಿಂಜರಿದು ನಿಂತಿರುವ ಗುಂಪಿನವರೇ! "Break the rule" ಇತರರ ಪ್ರಯೋಜನಕ್ಕಾಗಿ. ಯೇಸು ಕ್ರಿಸ್ತನನ್ನು ಸ್ವೀಕರಿಸಿ ಆತನಿಗೆ ಸಾಕ್ಷಿಗಳಾಗಿ ಬದುಕೋಣ. ಹಿಂದಿನ ವಿಷಯಗಳನ್ನು ಮರೆತು ಮುಂದಿರುವ ವಿಷಯಗಳನ್ನು ಹುಡುಕಿ ಕ್ರಿಸ್ತನನ್ನು ಅನುಸರಿಸೋಣವಾ? ಕರ್ತನ ಹಸ್ತ ನಮ್ಮೊಂದಿಗಿರಲಿ.

- R. ಮಂಜುಳಾ 

 

ಪ್ರಾರ್ಥನಾ ಅಂಶ:

ಹಸ್ತಪ್ರತಿ ಸೇವೆಯ ಮೂಲಕ ಹಸ್ತಪ್ರತಿಗಳನ್ನು ಸ್ವೀಕರಿಸಿದವರು ಕ್ರಿಸ್ತನನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet