By Village Missionary Movement
Wednesday, 21-Jan-2026ಧೈನಂದಿನ ಧ್ಯಾನ(Kannada) – 21.01.2026
ಹಾರಿದ ಹತ್ತಿ
"ಆದರೆ ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ; ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು" - ಮತ್ತಾಯ 5:37
ಒಬ್ಬ ಮಹಿಳೆ ತನ್ನ ಸಭೆಯ ಬೋಧಕರ ಬಗ್ಗೆ ಎಲ್ಲರಿಗೂ ಕೆಟ್ಟ ವರದಿಯನ್ನು ಹರಡಿದಳು. ಕೆಲವು ದಿನಗಳ ನಂತರ, ಅದು ವದಂತಿ ಎಂದು ಅವಳು ಅರಿತುಕೊಂಡು ತುಂಬಾ ವಿಷಾದಿಸಿದಳು. ಆದ್ದರಿಂದ, ಏನು ಮಾಡಬೇಕೆಂದು ಯೋಚಿಸುತ್ತಾ, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಲು ನಿರ್ಧರಿಸಿ ಬೋಧಕರ ಬಳಿಗೆ ಹೋದಳು. ಬೋಧಕರು ಅವಳನ್ನು ನೋಡಿ ನಿನಗೆ ಏನು ಬೇಕು ಎಂದು ಕೇಳಿದರು. ಅವಳು ಅಳುತ್ತಾ, ಅಯ್ಯಾ ನನ್ನನ್ನು ಕ್ಷಮಿಸಿಬಿಡಿ ಎಂದಳು.
ಬೋಧಕರು ಅವಳನ್ನು ಮೇಲೆ ಮಹಡಿಗೆ ಕರೆದೊಯ್ದರು. ಮೇಲಕ್ಕೆ ಹೋಗುವಾಗ, ತನ್ನ ಕೈಯಲ್ಲಿ ಒಂದು ದಿಂಬನ್ನು ತೆಗೆದುಕೊಂಡು ಹೋಗಿ, ಅದನ್ನು ಹರಿದು, ಅದರಲ್ಲಿರುವ ಎಲ್ಲಾ ಹತ್ತಿಯನ್ನು ನಾಲ್ಕು ದಿಕ್ಕುಗಳಲ್ಲಿಯೂ ಹರಡಿ ಹಾರಲು ಬಿಟ್ಟರು. ನಂತರ ಅವಳನ್ನು ಕರೆದು, ಮಗಳೇ, ನೀನು ಹೋಗಿ ಎಲ್ಲಾ ಹತ್ತಿಯನ್ನು ಮತ್ತೆ ಸಂಗ್ರಹಿಸಿಕೊಂಡು ಬಾ ಎಂದು ಹೇಳಿದರು. ನಿನ್ನಿಂದ ಸಾಧ್ಯವಾ? ಸಾಧ್ಯವಿಲ್ಲ ಅಲ್ವಾ ಯಾಕೆ? ಹತ್ತಿ ಗಾಳಿಯಲ್ಲಿ ಅನೇಕ ಸ್ಥಳಗಳಿಗೆ ಹೋಗಿರುತ್ತದೆ. ಅದು ಎಲ್ಲಿಗೆ ಹೋಗಿರುತ್ತದೆ ಎಂದು ಗೊತ್ತಾ ಎಂದರು. ಆಗ ಅವಳು ತಲೆ ಬಾಗಿಸಿ, ತಾನು ಎಷ್ಟು ದೊಡ್ಡ ತಪ್ಪು ಮಾಡಿದ್ದೇನೆಂದು ಅರಿತುಕೊಂಡಳು.
ನಾವು ಮಾತನಾಡುವ ಪ್ರತಿಯೊಂದು ಮಾತಿಗೂ ಲೆಕ್ಕ ಕೊಡಬೇಕು ಎಂದು ಪರಿಶುದ್ಧ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಆದ್ದರಿಂದ, ವ್ಯರ್ಥ ಮಾತುಗಳಿಗೂ ಲೆಕ್ಕ ಕೊಡಬೇಕು. "ಒಮ್ಮೆ ಒಂದು ಮಾತು ಮಾತನಾಡಿದರೆ, ಅದನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುವುದಿಲ್ಲ" ಎಂದು ಹೇಳಲಾಗಿದೆ. ನಾವು ಮಾತನಾಡುವ ಎಲ್ಲಾ ಮಾತುಗಳ ಬಗ್ಗೆಯೂ ನಾವು ಜಾಗರೂಕರಾಗಿರಬೇಕು. ನಾವು ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಪ್ರೀತಿಯ ದೇವರ ಮಕ್ಕಳೇ! ಮೊದಲು, ನಾವು ಮಾತನಾಡುವುದು ಒಳ್ಳೆಯದಾ? ಉಪಯುಕ್ತವಾದದ್ದಾ? ಅಥವಾ ಅದು ನಿಷ್ಪ್ರಯೋಜಕವಾ ಎಂದು ನೋಡಬೇಕು. ಅದರಲ್ಲೂ ಮತ್ತೊಬ್ಬರ ಬಗ್ಗೆ ಮಾತನಾಡಬಾರದು. ನಾವು ಹಾಗೆ ಮಾತನಾಡಲೇಬಾರದು. ಹಾಗೆ ಮಾತನಾಡುವಾಗ ನಾವೇ ದೊಡ್ಡ ಅಪರಾಧಗಳನ್ನು ಮಾಡಿದವರಾಗಿ ಕಾಣಲ್ಪಡುತ್ತೇವೆ. ನಾವು ವ್ಯರ್ಥ ಮಾತುಗಳನ್ನು ತೊಲಗಿಸಿ, ಭಕ್ತಿಯ ಬೆಳವಣಿಗೆಗೆ ಅನುಕೂಲಕರವಾದ ಒಳ್ಳೆಯ ಮಾತುಗಳನ್ನು ಮಾತನಾಡೋಣ. ಹಾಗೆ ಮಾತನಾಡುವುದೇ ದೇವರಿಗೂ ಇಷ್ಟ. ಮಾತುಗಳ ಬಗ್ಗೆ ನಾವು ಜಾಗರೂಕರಾಗಿರೋಣ! ಆಮೆನ್!
- Mrs.ಹೆಪ್ಸಿಬಾ ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ಒಡಿಶಾದಲ್ಲಿರುವ ನಮ್ಮ ಸೇವಕರನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482