Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.01.2026
Share:

By Village Missionary Movement

Monday, 19-Jan-2026

ಧೈನಂದಿನ ಧ್ಯಾನ(Kannada) – 19.01.2026

 

ಇಂದೇ ರಕ್ಷಣೆಯ ದಿನ

 

“ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ" - ಎಫೆಸ 5:16

 

ಸಮಯ ಆಲಸ್ಯ ಎಂಬುದು ಸಾಮಾನ್ಯವಾಗಿ ನಮ್ಮೆಲ್ಲರ ಬಳಿ ಕಾಣಲ್ಪಡುವ ವಿಷಯ. ವಿದ್ಯಾರ್ಥಿಗಳು ತಮ್ಮ ಪಾಠಗಳನ್ನು ಓದಿ ಮುಗಿಸಲು, ಹೋಮ್ ವರ್ಕ್ ಮಾಡಲು ಆಲಸ್ಯ ಮಾಡುತ್ತಾರೆ. ಅನೇಕ ಬಾರಿ ನಾವು ಬೈಬಲ್ ಓದುವುದರಲ್ಲಿ ಮತ್ತು ಧ್ಯಾನಿಸುವುದರಲ್ಲಿಯೂ ವಿಳಂಬ ಮಾಡುತ್ತೇವೆ. ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಯೇಸುವಿನೊಂದಿಗೆ ದೀಕ್ಷಾಸ್ನಾನ ಮಾಡಿಸುವಲ್ಲಿ ವಿಳಂಬ ಮಾಡುತ್ತಾರೆ. ನಾವು ಅವರಿಗೆ ಯೇಸುಕ್ರಿಸ್ತನ ಬಗ್ಗೆ ಹೇಳುವುದರಲ್ಲಿ ಮತ್ತು ಅವರನ್ನು ಯೇಸುವಿನ ಬಳಿಗೆ ಕರೆದೊಯ್ಯುವಲ್ಲಿ ವಿಳಂಬ ಮಾಡುತ್ತೇವೆ.

 

ಆಲಸ್ಯವು ದೊಡ್ಡ ಹಾನಿಯನ್ನುಂಟುಮಾಡಬಹುದು. ಏಕೆಂದರೆ ಕಳೆದುಹೋದ ಸಮಯವು ಹಿಂತಿರುಗುವುದಿಲ್ಲ. ಒಮ್ಮೆ ಸಿಕ್ಕಿದ ಅವಕಾಶ ಮತ್ತೆ ಸಿಗುವುದಿಲ್ಲ. ವಿಶೇಷವಾಗಿ ರಕ್ಷಣೆಯ ವಿಷಯದಲ್ಲಿ ಇದು ಬಹಳ ಪ್ರಾಮುಖ್ಯವಾಗಿದೆ. ಪರಿಶುದ್ಧಾತ್ಮನು ಸತ್ಯವನ್ನು ನಮ್ಮ ಮನಸ್ಸಿನಲ್ಲಿ ಕೊಟ್ಟು ಅದನ್ನು ನಮ್ಮ ಬಳಿ ಅಂಗೀಕರಿಸಲು ಹೇಳುವಾಗ‌ ಈಗ ಬೇಡ ಇನ್ನೊಂದು ಬಾರಿ ನೋಡೋಣ ಎಂದು ಯೋಚಿಸುವುದು ತುಂಬಾ ತಪ್ಪು. ಇದು ಸೈತಾನನ ತಂತ್ರ. ಹಾಗೆ ಮಾಡುವುದರಿಂದ ಅನೇಕರು ಪರಲೋಕ ಜೀವನವನ್ನು ಕಳೆದುಕೊಂಡಿದ್ದಾರೆ.

 

ಒಮ್ಮೆ, ತಮಿಳುನಾಡಿನ ದಕ್ಷಿಣ ಭಾಗದಲ್ಲಿ, 40 ದಿನಗಳ ಶುಭಸಂದೇಶದ ಕೂಟ ನಡೆದಾಗ, ಒಬ್ಬ ಹಿರಿಯನು ಸತ್ಯವನ್ನು ಕೇಳಿ ತನ್ನ ಮನಸ್ಸಿನ ಪ್ರಕಾರ ದೇವರ ಮಾತುಗಳನ್ನು ಪಾಲಿಸಬೇಕು, ದೀಕ್ಷಾಸ್ನಾನ ಪಡೆಯಬೇಕು ಮತ್ತು ಸಭೆ ಕೂಡಿಬರುವಲ್ಲಿ ಐಕ್ಯವಾಗಬೇಕು ಎಂಬುದನ್ನು ಅಂಗೀಕರಿಸಿದರು.

 

ಆದರೆ ನಿಜವಾದ ರಕ್ಷಣೆಗೆ ಸ್ಥಳಕೊಡಲಿಲ್ಲ. ಇವರಿಗೆ ದೇವರ ಬಗ್ಗೆ ಹೇಳಲು ಮತ್ತು ದೀಕ್ಷಾಸ್ನಾನ ಪಡೆಯಲು ಅವರನ್ನು ಆಹ್ವಾನಿಸಿದಾಗ, ತಕ್ಷಣ ಒಪ್ಪದೇ ತನಗೆ 15 ದಿನಗಳು ಕಾಲಾವಕಾಶ ಬೇಕು ಎಂದು ಕೇಳಿದರು. ಎಷ್ಟೇ ಒತ್ತಿ ಹೇಳಿದರೂ ಕೇಳದೆ ಹೋದದ್ದರಿಂದ ಅವರಿಗಾಗಿ ಆಸಕ್ತಿಯಿಂದ ಪ್ರಾರ್ಥಿಸಿ ಆ ಸೇವಕರು ಹೊರಟು ಹೋದರು. ಆದರೆ ಎರಡನೇ ದಿನ ಅವರು ಹೃದಯಾಘಾತದಿಂದ ನಿಧನರಾದರು. ಅಂದು ಪರಿತಾಪ! ಅವರ ಜೀವನದಲ್ಲಿ ಆ 15 ದಿನಗಳು ಸಿಗಲೇ ಇಲ್ಲ. 

 

ಪರಿಶುದ್ಧಾತ್ಮನು ನಮ್ಮ ಪಾಪವನ್ನು ಎತ್ತಿ ತೋರಿಸಿದಾಗ, ಕಾಲವನ್ನು ವಿಳಂಬಮಾಡದೆ ಕ್ಷಮೆಯನ್ನು ಪಡೆಯುವುದು ತುಂಬಾ ತುಂಬಾ ಮುಖ್ಯ. ನೀವು ಬುದ್ಧಿಹೀನರಂತೆ ನಡೆಯದೇ, ಜ್ಞಾನವುಳ್ಳವರಾಗಿ ಜಾಗರೂಕತೆಯಿಂದ ನಡೆದುಕೊಂಡು,ದಿನಗಳು ಕೆಟ್ಟವುಗಳಾಗಿರುದರಿಂದ ಕಾಲವನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.

- T. ಪಾಲ್ ರಾಜ್ 

 

ಪ್ರಾರ್ಥನಾ ಅಂಶ:

ಎಲ್ಲಾ ತಾಲೂಕುಗಳಲ್ಲಿ ಸತತ ಸರಪಳಿ ಪ್ರಾರ್ಥನೆಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş