By Village Missionary Movement
Saturday, 17-Jan-2026ಧೈನಂದಿನ ಧ್ಯಾನ(Kannada) – 17.01.2026
ಬಲಹೀನರನ್ನು ಪ್ರೋತ್ಸಾಹಿಸೋಣ!
“ಆದದರಿಂದ ಬಲವುಳ್ಳವರಾದ ನಾವು... ದುರ್ಬಲರ ಬಲಹೀನತೆಗಳನ್ನು ಸಹಿಸಿಕೊಳ್ಳತಕ್ಕದ್ದು." - ರೋಮಾ 15:1
ಅದೊಂದು ದೊಡ್ಡ ಕ್ರೀಡಾಂಗಣ. ಅಲ್ಲಿ ಅನೇಕ ಪ್ರೇಕ್ಷಕರು ಸೇರಿದ್ದರು. ಅಲ್ಲಿ ಅಂಗವಿಕಲ ಮಕ್ಕಳಿಗಾಗಿ ಓಟಪಂದ್ಯ ನಡೆಯುತ್ತಿತ್ತು. ಶಿಳ್ಳೆ ಹೊಡೆದ ತಕ್ಷಣ, ಎಲ್ಲಾ ಮಕ್ಕಳು ಓಡಲು ಪ್ರಾರಂಭಿಸಿದರು. ಅವರು ಓಡಲು ಪ್ರಾರಂಭಿಸಿದ ಕೆಲವು ಸೆಕೆಂಡುಗಳ ನಂತರ, ಒಬ್ಬ ಹುಡುಗ ಅನಿರೀಕ್ಷಿತವಾಗಿ ಕೆಳಗೆ ಬಿದ್ದುಹೋದನು. ಮುಂದೆ ಓಡುತ್ತಿದ್ದ ಇತರ ಮಕ್ಕಳು ಇದನ್ನು ನೋಡಿದ ಕೂಡಲೇ, ಅವರು ತಮ್ಮ ಓಟವನ್ನು ನಿಲ್ಲಿಸಿ ಬಿದ್ದ ಹುಡುಗನ ಕೈಗಳನ್ನು ಹಿಡಿದು ಮೇಲಕ್ಕೆತ್ತಿದರು. ನಂತರ ಅವರೆಲ್ಲರೂ ಒಟ್ಟಿಗೆ ಓಡಿದರು. ಎಂತಹ ಒಂದು Team spirit! ತಕ್ಷಣ, ಎಲ್ಲಾ ಪ್ರೇಕ್ಷಕರು ತಮ್ಮ ಕೈಗಳನ್ನು ತಟ್ಟಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಇಂದಿನ ಸತ್ಯವೇದ ಭಾಗದಲ್ಲಿ, ದಾವೀದನು ತನ್ನ ತಂಡದೊಂದಿಗೆ ಯುದ್ಧಕ್ಕೆ ಹೋಗುತ್ತಾರೆ. ಆದರೆ ಅವರಲ್ಲಿ ಒಂದು ಗುಂಪು ದಣಿದು ಸುಸ್ತಾಗಿ ಅರ್ಧದಾರಿಯಲ್ಲೇ ನಿಂತುಬಿಟ್ಟಿತು. ಇನ್ನೂ ಕೆಲವರು ದಣಿದಿದ್ದರಿಂದ ಯುದ್ಧಕ್ಕೆ ಹೋಗಲಿಲ್ಲ. ದಾವೀದನು ಉಳಿದ ಜನರೊಂದಿಗೆ ಹೋಗಿ ಜಯ ಹೊಂದಿದರು. ವಿಜಯದಿಂದ ತಂದ ವಸ್ತುಗಳನ್ನು ಯುದ್ಧಕ್ಕೆ ಬರದವರಿಗೆ ನೀಡಬಾರದು ಎಂದು ಜನರ ಗುಂಪೊಂದು ಹೇಳಿತು. ದಾವೀದನು ಯುದ್ಧಕ್ಕೆ ಬರದವರ ಕ್ಷೇಮ ಸಮಾಚಾರವನ್ನು ವಿಚಾರಿಸಿ, ಅವರಿಗೂ ವಸ್ತುಗಳನ್ನು ಸರಿಸಮಾನವಾಗಿ ಹಂಚಲು ಹೇಳಿ, ಅದನ್ನು ಆಜ್ಞೆಯಾಗಿಯೂ ಮತ್ತು ಪ್ರಮಾಣವಾಗಿಯೂ ಏರ್ಪಡಿಸಿದರು ಎಂದು ನೋಡುತ್ತೇವೆ.
ಸ್ನೇಹಿತರೇ! ನಾವು ಇರುವ ಕುಟುಂಬ, ಸಭೆ ಅಥವಾ ಗುಂಪು ಸೇವೆಯಲ್ಲಿ ನಮಗಿಂತ ಯಾವುದೋ ಒಂದು ರೀತಿಯಲ್ಲಿ ಬಲಹೀನರಾದವರನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆಯೇ? ನಾವು ಅವರನ್ನು ಸೇರಿಸಿಕೊಂಡು ಒಟ್ಟಿಗೆ ಓಡುತ್ತಿದ್ದೇವೆಯೇ ಎಂದು ಯೋಚಿಸಬೇಕು. ಗುಂಪಿನಲ್ಲಿರುವ ಎಲ್ಲರೂ ಒಂದೇ ಅಲ್ಲ. ದೇವರು ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನ ಪ್ರತಿಭೆಗಳನ್ನು ನೀಡಿದ್ದಾರೆ. ಕೆಲವರು ವೇದಿಕೆಯ ಮೇಲೆ ಹೋಗಿ ಹಾಡುವುದು, ಸ್ತುತಿಸುವುದು, ಪ್ರಾರ್ಥಿಸುವುದು, ಉಪದೇಶಿಸುವುದು ಮತ್ತು ಪತ್ರಿಕೆಯಲ್ಲಿ ಬರೆಯುವಂತಹ ಕಾರ್ಯಗಳನ್ನು ಮಾಡುವಲ್ಲಿ ಕೆಲವು ಕೊರತೆಗಳು ಮತ್ತು ಎಡವಟ್ಟುಗಳು ಇರಬಹುದು. ಆದರೆ ನಾವು ಅವರನ್ನು ಹಾಗೆಯೇ ಬಿಟ್ಟುಬಿಡಬಾರದು. ಅವರಿಗೆ ಮತ್ತೆ ಮತ್ತೆ ಅವಕಾಶಗಳನ್ನು ನೀಡಿ, ಪ್ರೋತ್ಸಾಹಿಸಿ ಮುಂದುವರಿಯೋಣ! ದೇವರ ಚಿತ್ತವನ್ನು ನೆರವೇರಿಸೋಣ!
- Bro T. ಶಂಕರ್ ರಾಜ್
ಪ್ರಾರ್ಥನಾ ಅಂಶ:
ಮನೆ ಪ್ರಾರ್ಥನಾ ಗುಂಪುಗಳಿಗೆ ತಮ್ಮ ಮನೆಗಳನ್ನು ತೆರೆದುಕೊಡುವವರು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482