Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.01.2026
Share:

By Village Missionary Movement

Friday, 16-Jan-2026

ಧೈನಂದಿನ ಧ್ಯಾನ(Kannada) – 16.01.2026

 

ಪಾಪ

 

"ಆದರೆ ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ; ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು." - ಮತ್ತಾ. 5:37

 

ವಿಶ್ವಪ್ರಸಿದ್ಧ ಸುವಾರ್ತಾಬೋಧಕ ಡಾ. ಬಿಲ್ಲಿ ಗ್ರಹಾಂ ಹೇಳಿದ ಒಂದು ಘಟನೆ ಇಲ್ಲಿದೆ. ಒಬ್ಬ ಪಾದ್ರಿ ತನ್ನ ಚರ್ಚ್ ಸೇವೆಯಲ್ಲಿ ಪಾಪದ ಬಗ್ಗೆ ಬಹಳ ಬಲವಾಗಿ ಮಾತನಾಡಿದರು. ಇದನ್ನು ಕೇಳುತ್ತಿದ್ದ ಸಭೆಯ ಸದಸ್ಯರೊಬ್ಬರು ಪಾದ್ರಿಯ ಬಳಿಗೆ ಬಂದು, "ಅಯ್ಯಾ, ನೀವು ಪಾಪದ ಬಗ್ಗೆ ಅಷ್ಟೊಂದು ಕಠೋರವಾಗಿ ಮಾತನಾಡಬೇಕಾದ ಅಗತ್ಯವಿಲ್ಲ; ಏಕೆಂದರೆ ನಮ್ಮ ಸಭೆಯ ಯೌವನಸ್ಥ ಮಕ್ಕಳು ಪಾಪದ ಬಗ್ಗೆ ಕಲಿತರೆ, ಅವರು ಸುಲಭವಾಗಿ ಪಾಪಿಗಳಾಗುತ್ತಾರೆ. ಆದ್ದರಿಂದ ಪಾಪವನ್ನು "ಪಾಪ" ಎಂದು ಹೇಳುವ ಬದಲು, ಅದು "ಬಲಹೀನತೆ" ಎಂದು ಹೇಳಿ ಅಂದರಂತೆ.

 

ಅದಕ್ಕೆ ಆ ಬೋಧಕರು ಒಂದು"ವಿಷ" ತುಂಬಿದ ಬಾಟಲಿಯನ್ನು ತೆಗೆದುಕೊಂಡು, ಅದನ್ನು ಆ ವ್ಯಕ್ತಿಗೆ ತೋರಿಸಿ, "ವಿಷ" ಎಂದು ಬರೆದಿರುವ ಲೇಬಲ್ ಅನ್ನು ಅಳಿಸಿಬಿಟ್ಟು "ಜೇನುತುಪ್ಪ" ಎಂದು ಬರೆಯಲಾ? ಹೀಗೆ ವಿಷವನ್ನು ಜೇನುತುಪ್ಪ ಎಂದೂ, ಸಿಹಿಯಾದ ಔಷಧಿ ಎಂದೂ ಎಷ್ಟು ದೂರ ಅದರ ಸ್ವರೂಪವನ್ನು ಮರೆಮಾಡಿ ಬರೆಯುತ್ತೇವೋ ಅಷ್ಟು ದೂರ ಅದು ಅಪಾಯಕಾರಿಯಾಗಿ ಮುಗಿಯುತ್ತದೆ" ಎಂದರಂತೆ.

 

ನನಗೆ ಪ್ರಿಯವಾದವರೇ! ಈ ಕೊನೆಯ ದಿನಗಳಲ್ಲಿ, ಚರ್ಚುಗಳಲ್ಲಿ ಮತ್ತು ದೇಶದಲ್ಲಿ ಜನರು ಪಾಪವನ್ನು ಪಾಪ ಎಂದು ಕರೆಯಲು ಹೆದರುತ್ತಾರೆ. ಅವರು ಅದನ್ನು "ತಪ್ಪು" ಅಥವಾ "ಬಲಹೀನತೆ" ಎಂದು ನೆವ ಹೇಳುತ್ತಾರೆ. ಅಷ್ಟೇ ಅಲ್ಲ, ಎಲ್ಲರೂ ಮಾಡುವಂತೆಯೇ ನಾನೂ ಮಾಡುತ್ತೇನೆ; ಇದರಲ್ಲೇನು ತಪ್ಪು ಎಂದು ಮೀರಿ ಪಾಪಮಾಡುವವರೂ ಇದ್ದೇ ಇರುತ್ತಾರೆ. ಪಾಪವನ್ನು ಕಾನೂನನ್ನಾಗಿ ಮಾಡುವ ದೇಶಗಳೂ ಇವೆ.

 

ದೇವರ ಮಕ್ಕಳೇ! ಪರಿಶುದ್ಧಾತ್ಮನು ಬಂದು ಪಾಪ ನೀತಿ ನ್ಯಾಯತೀರ್ವಿಕೆ ಈ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುವನು (ಯೋಹಾನ 16:8). ಆದ್ದರಿಂದ, ನಾವು ಕೂಡ ಪಾಪವನ್ನು ಖಂಡಿಸಬೇಕು. ಪಾಪದ ಶಕ್ತಿ ಭಯಾನಕವಾಗಿದೆ 'ಪಾಪದ ಸಂಬಳ ಮರಣ' ಎಂದು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತಿದೆ. ನಾವು ಪರಿಶುದ್ಧ ಜೀವನವನ್ನು ನಡೆಸಲು ಕರೆಯಲ್ಪಟ್ಟಿದ್ದೇವೆ ಮತ್ತು ದೇವರಿಂದ ಪ್ರತ್ಯೇಕಿಸಲ್ಪಟ್ಟಿದ್ದೇವೆ. ಆದ್ದರಿಂದ, ನಾವು ಪಾಪವನ್ನು ನೋಡಿಯೂ ನೋಡದಂತೆ ಇರದೇ, ಪಾಪವನ್ನು ಪಾಪ ಎಂದು ಹೇಳಿ ಬಹಿರಂಗವಾಗಿ ಖಂಡಿಸಿ ತಿಳಿಸೋಣ! ನರಕಕ್ಕೆ ಹೋಗುವವರಿಗೆ ಸುವಾರ್ತೆಯನ್ನು ಸಾರೋಣ ಮತ್ತು ಪರಲೋಕಕ್ಕೆ ದಾರಿ ತೋರಿಸೋಣ!

- Mrs.ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ಪ್ರತಿ ತಾಲೂಕುಗಳಲ್ಲಿ ಅನೇಕ ಹೊಸ ಮನೆ ಪ್ರಾರ್ಥನಾ ಗುಂಪುಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino