By Village Missionary Movement
Sunday, 11-Jan-2026ಧೈನಂದಿನ ಧ್ಯಾನ(Kannada) – 12.01.2026
ಪ್ರಾರ್ಥನೆಯ ಶ್ರೇಷ್ಠತೆ
"...ಪ್ರಾರ್ಥನೆ ಯಲ್ಲಿ ನಿರತರಾಗಿರ್ರಿ." - ರೋಮಾ 12:12
ನಮ್ಮ ಹೃದಯಗಳನ್ನು ತೆರೆದು ಕರ್ತನೊಟ್ಟಿಗೆ ಮಾತನಾಡುವುದು, ನಮ್ಮೊಂದಿಗೆ ಮಾತನಾಡುವ ದೇವರ ವಾಕ್ಯಕ್ಕೆ ವಿಧೇಯರಾಗುವುದೇ ಪ್ರಾರ್ಥನೆ. ಪ್ರಾರ್ಥನೆಯೇ ದೇವರ ನಿಧಿಯ ಮನೆಯನ್ನು ತೆರೆಯುವ ಕೀಲಿಯಾಗಿದೆ.
ಸಹೋದರ ಎಮಿಲ್ ಜೆಬಸಿಂಗ್ ರವರು ರಕ್ಷಣೆ ಹೊಂದಿದ 17 ನೇ ವರ್ಷದಿಂದಲೇ ಬೆಳಿಗ್ಗೆ ಬೇಗನೆ ಎಚ್ಚರಗೊಂಡು, ದೇವರ ಸಮ್ಮುಖದಲ್ಲಿ ನೇರ ಮೊಣಕಾಲೂರಿ, ಹಾಡುಗಳನ್ನು ಹಾಡಿ, ಬೈಬಲ್ ಓದಿ ನಂತರ ಪ್ರಾರ್ಥಿಸುವುದು ಅವರ ಅಭ್ಯಾಸವಾಗಿತ್ತು. ದೇಶಕ್ಕಾಗಿ ಪೌಳಿಯ ಒಡಕಿನಲ್ಲಿ ನಿಂತು ಭಾರವಾದ ಹೃದಯದಿಂದ ಪ್ರಾರ್ಥಿಸಿದ ಮಹಾನ್ ಪ್ರಾರ್ಥನಾ ಯೋಧ. ಅವರು ಸುಮಾರು 45 ವರ್ಷಗಳ ಕಾಲ ಕರ್ತನಿಗಾಗಿ ಸೇವೆ ಸಲ್ಲಿಸಿದರು. ಅವರು ಫ್ರೆಂಡ್ ಗಾಸ್ಪೆಲ್ ಪ್ರಾರ್ಥನಾ ಗುಂಪಿನಲ್ಲಿ ಸೇವೆ ಸಲ್ಲಿಸಿ, ನಂತರ ಮಿಷನರಿ ಸಂಸ್ಥೆ ವಿಶ್ವವಾಣಿಯ ಸ್ಥಾಪಕರಾದರು. ಅವರು ಬರೆದ ಸುಮಾರು 135 ಹಾಡುಗಳು ಭಾರತ ದೇಶವನ್ನು ದೇವರು ಭೇಟಿಯಾಗಬೇಕೆಂಬ ಹೊರೆಯಿಂದ ತುಂಬಿವೆ. ಅವರು ನಮ್ಮನ್ನು ಬಿಟ್ಟು ಪರಲೋಕಕ್ಕೆ ಹೋದರೂ, ಅವರ ಹಾಡುಗಳು ಭಾರತದಾದ್ಯಂತ ಅನೇಕ ಭಾಷೆಗಳಲ್ಲಿ ಹಾಡಲಾಗುತ್ತಿದೆ.
ದೇವರ ಮನುಷ್ಯನಾದ ದಾನಿಯೇಲ್ ಎಂಬ ವ್ಯಕ್ತಿ, ತನ್ನ ವಿರುದ್ಧ ದಾಖಲೆಗೆ ಸಹಿ ಹಾಕಲಾಗಿದೆ ಎಂದು ತಿಳಿದಿದ್ದರೂ, ಅವರು ಯಾವಾಗಲೂ ಮಾಡಿದಂತೆ ದಿನಕ್ಕೆ ಮೂರು ಬಾರಿ ಮೊಣಕಾಲೂರಿ ತನ್ನ ದೇವರ ಮುಂದೆ ಪ್ರಾರ್ಥಿಸಿದರು. ದೇವರು ತನ್ನ ದೇವದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಮುಚ್ಚಿದರು. ಇದರ ಮೂಲಕ, ಅರಸನಾದ ದಾರ್ಯಾವೆಷನು ದಾನಿಯೇಲನ ದೇವರೇ "ಜೀವವುಳ್ಳ ದೇವರು" ಎಂದು ಘೋಷಿಸಿದನು.
ಪ್ರೀತಿಯ ದೇವರ ಮಕ್ಕಳೇ, ನಮ್ಮ ಪ್ರಾರ್ಥನಾ ಜೀವನ ಹೇಗಿದೆ? ಮುಂಜಾನೆಯೇ ಆತನನ್ನು ಹುಡುಕುತ್ತೇವಾ? ಅಥವಾ ನಮ್ಮ ಅಗತ್ಯಗಳಿಗಾಗಿ ಮಾತ್ರ ಪ್ರಾರ್ಥಿಸುತ್ತೇವಾ? "ಈ ಜೀವದಲ್ಲಿ ಮಾತ್ರ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡವ ರಾಗಿದ್ದರೆ ನಾವು ಎಲ್ಲಾ ಮನುಷ್ಯರಿಗಿಂತಲೂ ನಿರ್ಭಾಗ್ಯರೇ" ಎಂದು ಸತ್ಯವೇದವು ಹೇಳುತ್ತಿದೆ (1 ಕೊರಿಂಥ 15:19). ನಮ್ಮ ಪರಿಸ್ಥಿತಿಗಳು ಪ್ರತಿಕೂಲವಾಗಿದ್ದರೂ, ನಾವು ಆತನ ಸನ್ನಿಧಿಗೆ ಹೋಗಿ ಪ್ರಾರ್ಥಿಸಿದಾಗ, ಶಾಶ್ವತ ಸಂತೋಷವು ನಮ್ಮ ಹೃದಯಗಳನ್ನು ತುಂಬುತ್ತದೆ. ಕಣ್ಣೀರು ಮತ್ತು ಚಿಂತೆಗಳು ಮಾಯವಾಗುತ್ತವೆ. ಈ ಲೋಕದಲ್ಲಿ ಸಮಾಧಾನವಾಗಿ ಬದುಕಲು ದೇವರು ನಮ್ಮನ್ನು ಆಶೀರ್ವದಿಸಲಿ.
- Mrs.ನಿರ್ಮಲಾ ಜೆಬರಾಜ್
ಪ್ರಾರ್ಥನಾ ಅಂಶ:
7000 ಮಿಷನರಿಗಳು 1 ಲಕ್ಷ ಹಳ್ಳಿಗಳು ಎಂಬ ಗುರಿಗಳನ್ನು ತಲುಪಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482