Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.01.2026
Share:

By Village Missionary Movement

Sunday, 11-Jan-2026

ಧೈನಂದಿನ ಧ್ಯಾನ(Kannada) – 11.01.2026

 

ಕ್ಷಮಿಸುವ ದೇವರು

 

“ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ." - ಕೀರ್ತನೆ 103:12

 

ದೊಡ್ಡ ಮರಗಳು, ಹೊಲಗಳು, ತೋಟಗಳು ಮತ್ತು ಕೊಳಗಳನ್ನು ಹೊಂದಿರುವ ಹಸಿರು ಹಳ್ಳಿ ನೋಡಲು ತುಂಬಾ ಸುಂದರವಾಗಿರುತ್ತದೆ. ಆ ಹೊಲಗಳಿಗೆ ನೀರುಣಿಸುವ ಪಂಪ್ ಸೆಟ್ ವಿಭಿನ್ನವಾಗಿದೆ. ಏನು ಪುಟಾಣಿಗಳೇ, ಕೇಳೋದಕ್ಕೇ ಆಸೆಯಾಗಿದೆ ಅಲ್ವಾ. ಹಳ್ಳಿಯ ಜೀವನವು ತುಂಬಾ ಶಾಂತಿಯುತ, ಸುಂದರ, ಸಂತೋಷ ಮತ್ತು ಸರಳ ಜೀವನ. ಆ ಹಳ್ಳಿಯಲ್ಲಿ, ಅಪ್ಪ, ಅಮ್ಮ, ಅಕ್ಕ, ತಮ್ಮ ಎಂದು ಒಂದು ಕುಟುಂಬ ವಾಸಿಸುತ್ತಿತ್ತು. ಅಕ್ಕನಿಗೆ love birds ಅಂದರೆ ತುಂಬಾ ಇಷ್ಟ,ತಂದೆ ಕೂಡ ತೆಗೆದುಕೊಟ್ಟರು. ದಿನವೂ ಊಟ ಹಾಕುವುದು, ನೀರು ಕೊಡುವುದು ಮತ್ತು ಸ್ವಚ್ಛಗೊಳಿಸುವಂತಹ ದೈನಂದಿನ ಕೆಲಸಗಳನ್ನು ಮಾಡುತ್ತಿದ್ದಳು. ಸಂಜೆ ತನ್ನ Home work ಎಲ್ಲವನ್ನು ಮುಗಿಸಿ ಬಿಟ್ಟು, ತಮ್ಮ ಮತ್ತು ಅವನ ಸ್ನೇಹಿತರು ಒಟ್ಟಿಗೆ ಚೆಂಡನ್ನು ಆಡುತ್ತಿದ್ದರು. ಇದ್ದಕ್ಕಿದ್ದಂತೆ, ವೇಗವಾಗಿ ಬಂದ ಚೆಂಡು …….. 'ಪಟ್' ಅಂತ ಹೊಡಿತು ನೋಡಿ. ಅಕ್ಕ ಓ... ಎಂದು ಅಳಲು ಪ್ರಾರಂಭಿಸಿದಳು, Friends ಎಲ್ಲಾ ಓಡಿಹೋದರು. ಅಯ್ಯಯ್ಯೋ! ಅಕ್ಕನ ತಲೆಗೆ ಏಟು ಬಿದ್ದು ಬಿಡ್ತಲ್ಲಾ ಎಂದು ತಮ್ಮ ಓಡಿ ಬಂದು ನೋಡಿದ. ಒಂದು love birds ಸತ್ತು ಬಿದ್ದಿತ್ತು.

 

ಮರುದಿನದಿಂದ, ಅಪ್ಪ ವ್ಯಾಪಾರದ ನಿಮಿತ್ತವಾಗಿ ಬೇರೆ ಊರಿಗೆ ಹೊರಟು ಹೋದರು. ಓಯ್ ತಮ್ಮಾ, ಇಲ್ಲಿ ಬಾ ತೋಟಕ್ಕೆ ನೀರು ಹಾಯಿಸಬೇಕು ಎಂದಳು ಅಕ್ಕ. ಹೋಗಕ್ಕಾ ಆಟ ಆಡ್ತಿದೀನಿ ನಾನು ಬರಲ್ಲ ಎಂದು ಹೇಳಿದನು ತಮ್ಮ. "ನಿನ್ನೆ ನಡೆದಿದ್ದು ಅಪ್ಪನ ಹತ್ತಿರ ಹೇಳಿ ಬಿಡ್ತೀನಿ (Love bird) ಎಂದು ಹೇಳಿ, ಹೇಳಿಯೇ ಕೆಲಸ ಮಾಡಿಸಿಕೊಂಡಳು ಅಕ್ಕ. ಹತ್ತು ದಿನಗಳು ಹೀಗೆಯೇ ಕಳೆದವು. ಅಪ್ಪ ಕೂಡ ಮನೆಗೆ ಬಂದ್ರು. ತಮ್ಮ ಓಡಿಹೋಗಿ ಅಪ್ಪ ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ ಎಂದನು. ತಂದೆ ಏನು ನಡೆಯಿತು ಎಂದು ಕೇಳಿ ತಿಳಿದುಕೊಂಡರು. ಪರವಾಗಿಲ್ಲ, ಇನ್ನೊಂದು Love bird ತೆಗೆದುಕೊಡುತ್ತೇನೆ ಎಂದು ಹೇಳಿದ ತಂದೆಯ ಕುತ್ತಿಗೆಯನ್ನು ತಬ್ಬಿಕೊಂಡು Thanks ಅಪ್ಪಾ ಎಂದನು. ಇದೇ ರೀತಿಯೇ ಪುಟಾಣಿಗಳೇ, ನಾವು ಮಾಡಿದ ತಪ್ಪುಗಳನ್ನು ಬಚ್ಚಿಡದೆ ಯೇಸಪ್ಪನ ಬಳಿ ಹೇಳಿ, ಅದನ್ನು ಬಿಟ್ಟು ಬಿಡಲು ಪ್ರಯತ್ನಿಸಿದಾಗ, ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸಿ ಮರೆತುಬಿಡುವ ದೇವರಾಗಿದ್ದಾರೆ. ನಿಮ್ಮನ್ನು ಕ್ಷಮಿಸಲು ಸಿದ್ಧನಾಗಿರುವ ಯೇಸಪ್ಪನ ಬಳಿ ನಿಮ್ಮ ತಪ್ಪುಗಳನ್ನು ಏಕೆ ಮರೆಮಾಡಬೇಕು? ಪುಟಾಣಿಗಳೇ, ಈಗಲೇ ಕ್ಷಮಾಪಣೆ ಕೇಳಿರಿ. ಯಾರೂ ನೀಡಲಾಗದಂತಹ ಸಂತೋಷವು ನಿಮ್ಮ ಹೃದಯವನ್ನು ತುಂಬುತ್ತದೆ ಎಂಬುದನ್ನು taste ಮಾಡಿ ನೋಡಿ ಪುಟಾಣಿಗಳೇ, o.k bye. 

- Sis. ಬ್ಲೆಸ್ಸಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş pokerklas betpas maximcasino pashagaming pashagaming egebet casibom casinolevant virusbet ultrabet grandpashabet royalbet perabet matbet kralbet perabet perabet giriş meritbet meritbet giriş