Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.01.2026
Share:

By Village Missionary Movement

Saturday, 10-Jan-2026

ಧೈನಂದಿನ ಧ್ಯಾನ(Kannada) – 10.01.2026

 

ಪರಿಶುದ್ಧತೆಯನ್ನು ಕಾಪಾಡಿಕೋ

 

"ಆಗ ಅವನು ( ಬೋವಜನು) ನನ್ನ ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ;..." - ರೂತಳು 3:10

 

ರೂತಳ ಇತಿಹಾಸದಲ್ಲಿ ಸ್ಥಾನಪಡೆದಿರುವ ಈ ವಾಕ್ಯವು, ರೂತಳ ಅತ್ತೆ ನವೋಮಿ ತನ್ನ ವಿಧವೆ ಸೊಸೆಯ ಜೀವನವನ್ನು ಪುನರ್ನಿರ್ಮಿಸಲು ಮಾಡಿದ ಒಂದು ಸಣ್ಣ ಪ್ರಯತ್ನವಾಗಿದೆ. ರೂತಳು ಆಶೀರ್ವಾದದ ಸರಿಯಾದ ಜೀವನವನ್ನು ನಡೆಸಬೇಕೆಂದು ನವೋಮಿ ಬಯಸುತ್ತಾಳೆ. ಆದಾಗ್ಯೂ, ಈ ಪ್ರಯತ್ನವು ಕರ್ತನ ಸೇವಕನಾದ ಬೋವಜನಿಗೆ ಪರೀಕ್ಷೆಯ ರಾತ್ರಿಯಾಗಿ ಬದಲಾಯಿತು. ಅವರು ಅದನ್ನು ಹೇಗೆ ನಿರ್ವಹಿಸಿದರು ಎಂಬುದರ ಕುರಿತು ನೋಡೋಣ.

 

ಇಸ್ರಾಯೇಲ್ ಜನರ ಪದ್ಧತಿಯ ಪ್ರಕಾರ, ಬೋವಜನು ಸುಗ್ಗಿಯ ದಿನಗಳಲ್ಲಿ ರಾತ್ರಿಯಲ್ಲಿ ತನ್ನ ಕೆಲಸವನ್ನು ಮುಗಿಸಿದ ನಂತರ ಹಾಡಿ, ಕುಣಿದು, ತಿಂದು ವಿಶ್ರಾಂತಿ ಪಡೆಯುತ್ತಾರೆ. ಆ ಸಮಯದಲ್ಲಿ, ರೂತಳು ಅವರ ಪಾದಗಳ ಬಳಿ ಮಲಗಿದ್ದಾಳೆ. ಬೋವಜನು ಈ ಪರಿಸ್ಥಿತಿಯ ಲಾಭವನ್ನು ಪಡೆದಿರಬಹುದು. ಆದರೆ ಬೋವಜನು ತನ್ನನ್ನು ಪರಿಶುದ್ಧವಾಗಿ ಕಾಪಾಡಿಕೊಂಡರು. ಅವರು ರೂತಳನ್ನು ನನ್ನ ಮಗಳೇ ಎಂದು ಎರಡು ಬಾರಿ ಕರೆಯುತ್ತಾರೆ. ಎಷ್ಟು ಶ್ರೇಷ್ಟವಾದ ಪರಿಶುದ್ಧತೆ ನೋಡಿ.

 

ನಮ್ಮ ಸುತ್ತಮುತ್ತಲಿನ ಪರಿಸ್ಥಿತಿ ಪರಿಶುದ್ಧವಾಗಿದ್ದಾಗ ನಾವು ಪವಿತ್ರರಾಗಿರುವುದು ದೊಡ್ಡ ವಿಷಯವಲ್ಲ. ವಿರುದ್ಧವಾದ ಪರಿಸ್ಥಿತಿಯಲ್ಲಿ ಆಲೋಚನೆಗಳು ಮನಸ್ಥಿತಿ ಹೇಗಿದೆ ಎಂಬುದನ್ನು ಕರ್ತನು ಗಮನಿಸುತ್ತಿದ್ದಾರೆ. ಎಲ್ಲಾ ಸಂದರ್ಭಗಳಲ್ಲಿಯೂ ನಮ್ಮ ಆಲೋಚನೆಗಳು, ಆಸೆಗಳು ಮತ್ತು ಕಲ್ಪನೆಗಳು ಪರಿಶುದ್ಧವಾಗಿರಬೇಕೆಂದು ಕರ್ತನು ನಿರೀಕ್ಷಿಸುತ್ತಾರೆ. ನಮ್ಮ ಭಾವನೆಗಳು ಮತ್ತು ಆಲೋಚನೆಗಳು ಕಲುಷಿತವಾಗಿದ್ದರೆ, ಅದು ನಮ್ಮ ಆಧ್ಯಾತ್ಮಿಕ ಜೀವನದ ಬೆಳವಣಿಗೆಯನ್ನು ನಿಲ್ಲಿಸುತ್ತದೆ.

 

ಯೋಸೇಫನಿಗೆ ಉಂಟಾದ ಶೋಧನೆ (ಆದಿ. 39:12) ಕೆಲವೇ ನಿಮಿಷಗಳ ಕಾಲ ನಡೆಯಿತು, ಅದರಿಂದ ಅವರು ತಪ್ಪಿಸಿಕೊಂಡು ಓಡಿಹೋದರು. ಆದರೆ ಬೋವಜನ ಶೋಧನೆಯು ರಾತ್ರಿಯಿಡೀ ಮುಂದುವರೆಯಿತು. ಬೋವಜನು ತನ್ನ ಪರಿಶುದ್ಧ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಿಂದ ಅದನ್ನು ಜಯಿಸಿದರು. ಎಷ್ಟು ಉನ್ನತವಾದ ಪರಿಶುದ್ಧತೆ ನೋಡಿ! ದಾವೀದನನ್ನು ನೋಡಿ, ಎಂತಹ ಮಹಾನ್ ಪ್ರವಾದಿ, ಕೀರ್ತನೆಗಾರ ಮತ್ತು ನಂಬಿಕೆಯುಳ್ಳ ವ್ಯಕ್ತಿ, ಆದರೆ ಶೋಧನೆಯಲ್ಲಿ ಬಿದ್ದುಹೋದರು.

 

ಕರ್ತನ ಪ್ರಿಯ ಮಗುವೇ, ಪ್ರತಿದಿನ ನಮಗೆ ಶೋಧನೆಗಳು ಬರುತ್ತಲೇ ಇರುತ್ತವೆ. ಸೈತಾನನ ಉದ್ದೇಶ ಕರ್ತನ ಮಕ್ಕಳನ್ನು ಹೇಗಾದರೂ ದಾರಿ ತಪ್ಪಿಸಬೇಕು ಎಂಬುದೇ. ಆದ್ದರಿಂದ ಎಚ್ಚರವಾಗಿರಿ ಮತ್ತು ಪ್ರಾರ್ಥಿಸಿ. ವಾಕ್ಯವನ್ನು ಬಿಗಿಯಾಗಿ ಹಿಡಿದು ಪರಿಶುದ್ಧ ಜೀವನವನ್ನು ನಡೆಸಲು ಕರ್ತನು ಸ್ವತಃ ನಮಗೆ ಸಹಾಯ ಮಾಡಲಿ!

- Mrs. ಎಲಿಜಬೆತ್

 

ಪ್ರಾರ್ಥನಾ ಅಂಶ:

ಪ್ರಾರಂಭಿಸಲಾದ 12 kids club ಗಳು ತಡೆಯಿಲ್ಲದೆ ಕಾರ್ಯನಿರ್ವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482