Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.06.2021
Share:

By Village Missionary Movement

Friday, 11-Jun-2021

ಧೈನಂದಿನ ಧ್ಯಾನ(Kannada) – 11.06.2021

 

ಬಳಲಿ ಹೋಗಬೇಡ

 

"...ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸುಮಾಡುವವರೆಲ್ಲರೂ ಹಿಂಸೆಗೊಳಗಾಗುವರು." - 2 ತಿಮೊಥೆ 3:12

 

ಭಕ್ತಿಯಾದ ಕುಟುಂಬ, ಯಾವ ಕೊರತೆಯೂ ಇಲ್ಲದ ಜೀವನ. ಹೀಗಿದ್ದ ಒಂದು ಮನೆಯಲ್ಲಿ ಧಿಡೀರ್ ಎಂದು ಬೀಸಿದ ಒಂದು ದೊಡ್ಡ ಬಿರುಗಾಳಿಯಲ್ಲಿ ಗಂಡ ಅಸ್ವಸ್ಥನಾಗಿ ಮರಣಹೊಂದಿದರು. ಅವರ ಆರೋಗ್ಯಕ್ಕಾಗಿ ಮಾಡಿದ ಪ್ರಾರ್ಥನೆಗಳೆಲ್ಲಾ ವ್ಯರ್ಥವಾಯಿತೇ! ದೇವರು ನನ್ನನ್ನು ಕೈಬಿಟ್ಟು ಬಿಟ್ಟರೇ, ಎಂದು ಹೆಂಡತಿ ಬಹಳ ಜಿಗುಪ್ಸೆಗೊಂಡು ಪ್ರಾರ್ಥಿಸುವುದನ್ನೇ ಬಿಟ್ಟುಬಿಟ್ಟರು. ಪುನಃ ದೇವರನ್ನು ಬಿಟ್ಟರೆ ಗತಿಯೇ ಇಲ್ಲ, ಅವರಿಲ್ಲದೆ ಹೇಗೆ ಈ ಲೋಕದಲ್ಲಿ ಬದುಕಲು ಸಾಧ್ಯ. ಅವರ ಸತ್ಯವೇದ ವಾಕ್ಯಗಳು ಕೊಡುವ ಆದರಣೆ ಬೇರೆ ಎಲ್ಲಿ ಸಿಗುತ್ತದೆ ಎಂದು ಗ್ರಹಿಸಿ, ಪುನಃ ದೇವರನ್ನು ಹಿಡಿದುಕೊಂಡರು. ದೇವರು ಹೊಸ ಬಲವನ್ನು, ನಂಬಿಕೆಯನ್ನು ಕೊಟ್ಟು ಹಾಗೆ ಮುಂದುವರೆಯಲು ಸಹಾಯ ಮಾಡಿದರು.

 

ಈ ದಿನಗಳಲ್ಲಿ ಎಲ್ಲಿ ನೋಡಿದರೂ ಸಾವು,ರೋಗ, ನಷ್ಟ, ಬರಗಾಲ, ಹಸಿವು, ಕೆಲಸವಿಲ್ಲದ ಸಮಸ್ಯೆ, ಕುಟುಂಬವನ್ನು ನಡೆಸಲಾಗದ ಪರಿಸ್ಥಿತಿ..... ಇದು ಎಲ್ಲಿಯವರೆಗೂ ಇರುತ್ತದೆ? ಏಕೆ ಹೀಗೆ ದೇವರು ಅನುಮತಿಸಿದ್ದಾರೆ? ಇದು ಬದಲಾಗುವುದಿಲ್ಲವೋ? ಯಾವಾಗ ಈ ರೋಗದ ಸೋಂಕು ಕೊನೆಗಾಣುತ್ತದೆ? ಏಕೆ ನನ್ನ ಕುಟುಂಬದಲ್ಲಿ ಇಷ್ಟೊಂದು ನಷ್ಟ? ಎಂದು ಯೋಚಿಸುತ್ತಾ ಪರಿತಪಿಸುವವರು ಹೇರಳವಾಗಿ ದ್ದಾರೆ! ನಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಯೇಸುಕ್ರಿಸ್ತನೇ! ಅವರು ಶಿಲುಬೆಯಲ್ಲಿ ಜಜ್ಜಲ್ಪಟ್ಟಾಗ, ಕೈಬಿಡಲ್ಪಟ್ಟವರಾಗಿ, ವೇದನೆಯಿಂದ ನೇತಾಡುತ್ತಿದ್ದರು. ನನ್ನ ದೇವರೇ! ನನ್ನ ದೇವರೇ! ಯಾಕೆ ನನ್ನನ್ನು ಕೈ ಬಿಟ್ಟಿದ್ದೀ! ಎಂದು ನಮ್ಮಂತೆಯೇ ಗೋಳಾಡಿದರು. ಆದ್ದರಿಂದ ಅವರಿಗೂ ನಮ್ಮ ವೇದನೆ ಚೆನ್ನಾಗಿ ಅರ್ಥವಾಗುತ್ತದೆ. ನಮ್ಮ ನೋವನ್ನು, ವೇದನೆಯನ್ನು ಅವರು ಅರಿತಿದ್ದಾರೆ. ಆದ್ದರಿಂದ ಖಂಡಿತವಾಗಿ ನಮಗೆ ಸಹಾಯ ಮಾಡುತ್ತಾರೆ. ಏಕೆಂದರೆ ಅವರು ಮರಣ ಗೆದ್ದವರು. ನಮ್ಮನ್ನು ಗೆಲ್ಲುವಂತೆ ಮಾಡುತ್ತಾರೆ. ಸೈತಾನನನ್ನು, ಅವನ ತಲೆಯನ್ನು ಶಿಲುಬೆಯಲ್ಲಿ ಜಜ್ಜಿದ ದೇವರು ನಾವೂ ಗೆಲ್ಲುವಂತೆ ಸಹಾಯ ಮಾಡುತ್ತಾರೆ. ಆದ್ದರಿಂದ ಈ ಕಠಿಣವಾದ ಕಾಲದಲ್ಲಿಯೂ, ಸಮಸ್ಯೆಗಳನ್ನು ಕಂಡು ಬಳಲಿ ಹೋಗದಂತೆ ಅದನ್ನು ಸಹಿಸಲು, ನಿರ್ವಹಿಸಲು, ಬಲವನ್ನು ತಾಳ್ಮೆಯನ್ನು ಅನುಗ್ರಹಿಸುವಂತೆ ಪ್ರಾರ್ಥಿಸೋಣ. ಹೋರಾಟಗಳು ಶಾಶ್ವತವಲ್ಲ ಇದೂ ಕೂಡ ಬದಲಾಗುತ್ತದೆ. ಹಲ್ಲೇಲೂಯ!

- Mrs. ಜ್ಯೋತಿ ಆನಂದ್

 

ಪ್ರಾರ್ಥನಾ ಅಂಶ:-

ಗ್ರಾಮ ಮಿಷನರಿ ಒಕ್ಕೂಟದಲ್ಲಿರುವ ಸೇವಕರ ಅತ್ಯವಶ್ಯಕ ಅಗತ್ಯತೆಗಳು ಪೂರೈಸಲ್ಪಡಲು ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş