Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.01.2026
Share:

By Village Missionary Movement

Wednesday, 07-Jan-2026

ಧೈನಂದಿನ ಧ್ಯಾನ(Kannada) – 07.01.2026

 

ಕರ್ತನ ಕೃಪೆಯು ಹೊತ್ತು ಸಹಿಸುತ್ತದೆ

 

"ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನನ್ನು ಹಿಂಬಾಲಿಸುವವು..." - ಕೀರ್ತನೆ 23:6

 

ದೀರ್ಘಕಾಲ ಬದುಕಿದ ಒಬ್ಬ ವ್ಯಕ್ತಿಯ ಬಳಿ, ಅವರ ದೀರ್ಘಾಯುಷ್ಯದ ರಹಸ್ಯವನ್ನು ತಿಳಿದುಕೊಳ್ಳಲು ಬಯಸಿ ಅನೇಕ ವರದಿಗಾರರು ಸುತ್ತುವರೆದಿದ್ದರು. ಉತ್ತರಿಸಲು ಆಸಕ್ತಿ ಇಲ್ಲ ಎಂಬಂತೆ, ನಾನು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಲಿಲ್ಲ ಅಥವಾ ವಿಶೇಷ ವ್ಯಾಯಾಮಗಳನ್ನೂ ಮಾಡಲಿಲ್ಲ. "ನನ್ನ ದೀರ್ಘಾಯುಷ್ಯಕ್ಕೆ ಕಾರಣ ನನ್ನ ದೇವರು ಮಾತ್ರವೇ, ಅವರ ಕೃಪೆಯು ಮಾತ್ರವೇ ನನ್ನನ್ನು ಇಲ್ಲಿಯವರೆಗೆ ಮುನ್ನಡೆಸುತ್ತಾ ಬಂದಿದೆ" ಎಂದರು. 2025 ನೇ ವರ್ಷ ಮೊದಲುಗೊಂಡು ಮತ್ತೊಂದು ಹೊಸ ವರ್ಷ 2026 ಅನ್ನು ನೋಡಲು ದೇವರು ದಯೆ ತೋರಿಸಿದ್ದಾರೆ. ಅನೇಕ ಸಮಸ್ಯೆಗಳು, ಭಯಗಳು ಮತ್ತು ದುಷ್ಟತನಗಳಿಂದ ತುಂಬಿರುವ ಈ ಜಗತ್ತಿನಲ್ಲಿ ವಾಸಿಸುವ ನಮಗೆ, ದೇವರು ಮಾತ್ರವೇ ರಕ್ಷಣೆ. "ನಾವು ನಿರ್ಮೂಲವಾಗದೇ ಇರುವುದು ಆತನ ಕೃಪೆಯೇ" "ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ" ಎಂದು ಹೇಳಿದ ದೇವಾದಿ ದೇವನು, ಎಂಥಹ ಕಷ್ಟಕರ ಸಂದರ್ಭಗಳು ಬಂದರೂ ನಮ್ಮನ್ನು ರಕ್ಷಿಸಲು ಶಕ್ತನು. ಅನೇಕ ನೈಸರ್ಗಿಕ ವಿಕೋಪಗಳು, ಬಿರುಗಾಳಿಗಳು, ಮಳೆಗಳು, ಗಂಭೀರ ಅಪಘಾತಗಳು, ಕೊಲೆಗಳು ಮತ್ತು ದರೋಡೆಗಳನ್ನು ಕಳೆದ ವರ್ಷದಲ್ಲಿ ನೋಡಿದ್ದೇವೆ. ಆದಾಗ್ಯೂ, ದೇವರ ಮಕ್ಕಳಾದ ನಾವು ದೇವರ ಬಲವಾದ ಕೈಯಲ್ಲಿ ಸುರಕ್ಷಿತರಾಗಿದ್ದೇವೆ. ನಾವು ಕರ್ತನಿಂದ ಸುರಕ್ಷಿತವಾಗಿ ಕಾಯಲ್ಪಡುವುದಕ್ಕೆ ಒಂದು ಉದ್ದೇಶ ಇದೆ. ಅದು ನಾವು ಆತನ ಬಗ್ಗೆ ಅನೇಕ ಜನರಿಗೆ ಹೇಳಬೇಕು ಎಂಬುದೇ. ನಮಗೆ ಜೀವ, ಸೌಖ್ಯ, ಶಕ್ತಿ ಮತ್ತು ಆರೋಗ್ಯವನ್ನು ನೀಡಿದವರು ಅದನ್ನು ಇತರರಿಗೂ ನೀಡಲು ಸಮರ್ಥನೆಂದು ನಮ್ಮ ಕೊನೆಯ ಉಸಿರಿರುವವರೆಗೂ ಅವರಿಗೆ ಹೇಳುತ್ತಲೇ ಇರಬೇಕು. ಅದು ಅನೇಕ ಜನರನ್ನು ದೇವರ ಕಡೆಗೆ ಕರೆದೊಯ್ಯುತ್ತದೆ.

 

ನನಗೆ ಪ್ರಿಯವಾದವರೇ, ನಮ್ಮ ಸಮಯಗಳು ದೇವರ ಕೈಯಲ್ಲಿವೆ. "ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು" ಎಂದು ಹೇಳಿದ ದೇವರು ಎಲ್ಲಾ ಸಮಯಗಳಲ್ಲಿ ಮತ್ತು ಎಲ್ಲಾ ಸಂದರ್ಭಗಳಲ್ಲಿ ನಮ್ಮೊಂದಿಗಿದ್ದಾರೆ. ನಮ್ಮ ಕೈಗಳನ್ನು ಹಿಡಿದು ತನ್ನ ಎದೆಯಲ್ಲಿ ಅಪ್ಪಿಕೊಳ್ಳುವ ದೇವರು ಈ ವರ್ಷವಿಡೀ ಪ್ರತಿ ಕ್ಷಣವೂ ನಮ್ಮನ್ನು ರಕ್ಷಿಸಲಿ! ಆಮೆನ್.

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ವಿರುಧುನಗರ - ಮಧುರೈ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಪ್ರಾರ್ಥನಾ ಗೋಪುರ ನಿರ್ಮಿಸಲು ಭೂಮಿಯನ್ನು ಖರೀದಿಸಲು ಹಣಕಾಸಿನ ಅಗತ್ಯಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel