Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.01.2026
Share:

By Village Missionary Movement

Friday, 02-Jan-2026

ಧೈನಂದಿನ ಧ್ಯಾನ(Kannada) – 02.01.2026

 

ಹಳೆಯದನ್ನು ಬಿಡುವುದು, ಹೊಸದನ್ನು ಸೇರಿಸಿಕೊಳ್ಳುವುದು

 

"...ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ..." - ಇಬ್ರಿಯ 13:5

 

ಒಂದು ವರ್ಷ ಪ್ರಾರಂಭವಾಗುವಾಗ, ಹೊಸ ವರ್ಷದಲ್ಲಿ ದೇವರು ಇಟ್ಟಿರುವ ಕಾರ್ಯಗಳನ್ನು ಕಾತುರದಿಂದ ಕಾಯುತ್ತೇವೆ. ಅದೇ ಸಮಯದಲ್ಲಿ, ಕಳೆದ ವರ್ಷದ ಚಿಂತೆಗಳು, ನೋವುಗಳು, ವೈಫಲ್ಯಗಳು, ಪಾಪಗಳು ಮತ್ತು ಅಪರಾಧಗಳನ್ನು ನಾವು ನೆನಪಿಸಿಕೊಳ್ಳುವಾಗ ಅವು ನಮ್ಮನ್ನು ಭಾರಗೊಳಿಸುತ್ತವೆ. ಜೊತೆಗೆ, ಭವಿಷ್ಯದ ಭಯಗಳು ನಮ್ಮನ್ನು ಕಾಡುತ್ತವೆ. ಆದರೆ ನಮ್ಮ ದೇವರು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ ತೊರೆಯುವುದಿಲ್ಲ ಎಂದು ವಾಗ್ದಾನ ಮಾಡಿದ್ದಾರೆ. ಕಳೆದ ವರ್ಷದ ಎಲ್ಲಾ ಏರಿಳಿತಗಳು, ಒರಟು ಹಾದಿಗಳು, ದುಃಖಗಳು ಮತ್ತು ನಾವು ಸಹಿಸಲಾಗದ ಹೊರೆಗಳು ಇವೆಲ್ಲವುಗಳಿಂದ ದೇವರ ಕೃಪೆ ಮತ್ತು ಕಾಳಜಿ ನಮ್ಮನ್ನು ಹೊರತಂದಿದೆ. ಹಾಗಿರುವಾಗ‌ ಕಳೆದ ವರ್ಷದ ಚಿಂತೆಗಳು ಅಥವಾ ಮುಂಬರುವ ವರ್ಷದ ಭಯಗಳು ನಮ್ಮನ್ನು ಜಯಿಸಬೇಕಾಗಿಲ್ಲ.

 

ಹೊಸ ವರ್ಷದ ಪ್ರತಿ ದಿನವೂ ದೇವರೊಂದಿಗೆ ಸೇರಿ ಕೆಲಸ ಮಾಡಲು, ಆತನಿಗಾಗಿ ಕಾಯಲು, ಆಧ್ಯಾತ್ಮಿಕ ಜೀವನದಲ್ಲಿ ಮುನ್ನಡೆಯಲು, ಆತನನ್ನು ಸ್ತುತಿಸಲು ದೇವರ ಪ್ರಸನ್ನತೆ ನಮ್ಮೊಂದಿಗಿರುವುದನ್ನು ಸಾಬೀತುಪಡಿಸುವ ದಿನವಾಗಿರಲು ದೇವರು ಕೃಪೆ ನೀಡಲಿ. ಪ್ರತಿ ದಿನವೂ ದೇವರ ಕರುಣೆ, ಸತ್ಯ, ಕೃಪೆ ಮತ್ತು ಆತನ ಮುಖದ ಸಂತೋಷವನ್ನು ಅನುಭವಿಸುವ ದಿನವಾಗಲಿ. ನಮ್ಮ ಅಗತ್ಯಗಳು, ಹೊರೆಗಳು ಮತ್ತು ದೌರ್ಬಲ್ಯಗಳನ್ನು ದೇವರಿಗೆ ತಿಳಿಸಲೂ, ದೇವರ ಹೃದಯದ ಬಡಿತವನ್ನು ತಿಳಿದುಕೊಳ್ಳಲೂ ಆತನ ಪ್ರೀತಿಯ ಎದೆಯ ಮೇಲೆ ಒರಗಿಕೊಳ್ಳುವಂತಹ ದಿನವಾಗಿರಲಿ. ಆತನು ನೀಡುವ ಶಾಂತಿ, ಸಾಂತ್ವನ ಮತ್ತು ವಿಶ್ರಾಂತಿಯನ್ನು ನಂಬುವ ದಿನವಾಗಿಯೂ ಪ್ರತಿ ದಿನವೂ ಆತನಿಗೆ ಸೇವೆಮಾಡುವ ದಿನವಾಗಿಯೂ ಮಾರ್ಪಡಲಿ. ಹೌದು, ಪ್ರತಿದಿನವೂ ಆತನ ಪ್ರೀತಿಗೆ ಸಾಕ್ಷಿಯಾಗುವ ದಿನ! ಪರಲೋಕ ಜೀವನಕ್ಕಾಗಿ ನಮ್ಮನ್ನು ತರಬೇತಿ ಮಾಡುವ ದಿನ! ನಾವು ಈ ಲೋಕದಲ್ಲಿದ್ದರೂ ಅಥವಾ ಪರಲೋಕವನ್ನು ಪ್ರವೇಶಿಸಿದರೂ, ನಾವು ಕರ್ತನವರಾಗಿಯೇ ಇರಲು ಕೊಡಲ್ಪಟ್ಟ ದಿನ.

 

ಪ್ರಿಯರೇ, ಹೊಸ ವರ್ಷದ ಪ್ರತಿ ದಿನವನ್ನು ಮೇಲ್ಕಂಡ ಉಪಕಾರಗಳನ್ನು ಹೊಂದುವಂತೆ ಪ್ರಾರ್ಥಿಸಿ ಪ್ರಾರಂಭಿಸಿ ಆಶೀರ್ವದಿಸಲ್ಪಡೋಣ! ಕರ್ತನು ಒಳ್ಳೆಯವನು ಆತನ ಕೃಪೆಯು ಶಾಶ್ವತವಾದದ್ದು ಎಂಬುದನ್ನು ರುಚಿ ನೋಡೋಣ.

- Mrs. ಗೀತಾ ರಿಚರ್ಡ್ 

 

ಪ್ರಾರ್ಥನಾ ಅಂಶ:

ಈ ವರ್ಷದ ಗುರಿಗಳು ಮತ್ತು ದರ್ಶನಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel