By Village Missionary Movement
Thursday, 01-Jan-2026ಧೈನಂದಿನ ಧ್ಯಾನ(Kannada) – 01.01.2026 (Happy New Year - 2026)
ಜೊತೆಗಿರುವ ದೇವರು
“..ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ" - ಯೆಹೋಶುವ 1:6
ಸೇವೆಯ ಆರಂಭಿಕ ವರ್ಷಗಳಲ್ಲಿ ಒಂದು ಬಾರಿ ನಾನು ರಾತ್ರಿ ಪ್ರಾರ್ಥನೆಗೆ ಸಿದ್ಧನಾಗುತ್ತಿದ್ದಾಗ, ದೇವರು ನನಗೆ ಅನೇಕ ಪ್ರವಾದನೆಯ ಮಾತುಗಳನ್ನು ಕೊಟ್ಟರು. ಅಲ್ಲಿಗೆ ಹೋಗಲು ನನಗೆ 50 ರೂಪಾಯಿಗಳು ಬೇಕಾಗಿದ್ದವು. ನನ್ನ ಬಳಿ ಅದು ಇರಲಿಲ್ಲ. ಆದರೆ ದೇವರು ನನಗೆ ವಾಕ್ಯಗಳನ್ನು ಕೊಟ್ಟಿದ್ದಾರೆ, ಅಲ್ಲಿಗೆ ಹೇಗೆ ಹೋಗದೆ ಇರುವುದು ಎಂದು ನನ್ನೊಳಗೆ ಒಂದು ಆಲೋಚನೆ. ಹಾಗಾಗಿ ನಾನು ಹೊರಟು ಬಸ್ ನಿಲ್ದಾಣಕ್ಕೆ ಹೋದೆ. ಅಲ್ಲಿ ಕಣ್ಣಿಲ್ಲದ ಒಬ್ಬರು ಬಂದರು. ಯೇಸು ನಿನ್ನನ್ನು ಪ್ರೀತಿಸುತ್ತಾರೆ ಎಂದು ನಾನು ಅವರಿಗೆ ಹೇಳಿದೆ. ನಾನು ಕೂಡ ಸೇವಕನು ಎಂದು ಅವರು ಹೇಳಿದರು. ಅವರು ನನ್ನೊಂದಿಗೆ ಮಾತನಾಡಿ ಹೋಗುವಾಗ ನನ್ನ ಕೈಯಲ್ಲಿ 50 ರೂಪಾಯಿಗಳನ್ನು ಕೊಟ್ಟರು. ನಾನು ದೇವರಿಗೆ ಧನ್ಯವಾದ ಹೇಳಿ ರಾತ್ರಿ ಪ್ರಾರ್ಥನೆಗೆ ಹೋದೆ ಮತ್ತು ಕರ್ತನಿಗೆ ಮಹಿಮೆಯೊಂದಿಗೆ ನನ್ನ ಸೇವೆಯನ್ನು ಮುಗಿಸಿದೆ. ದೇವರು ನನಗೆ ಪ್ರವಾದನೆಯ ಮಾತುಗಳನ್ನು ಕೊಟ್ಟದ್ದರೊಂದಿಗೆ ನನ್ನನ್ನು ಬಿಟ್ಟು ಬಿಡದೆ, ನನ್ನೊಂದಿಗಿದ್ದು ನನ್ನನ್ನು ನಡೆಸಿದರು.
ಅಂತೆಯೇ, ಪೇತ್ರನು ಯೇಸುವನ್ನು ನಿರಾಕರಿಸಿದಾಗ, ದೇವರು ಅದರೊಂದಿಗೆ ಬಿಟ್ಟುಬಿಡದೆ ಪೇತ್ರನ ಕಡೆಗೆ ನೋಡಿದರು. ತಕ್ಷಣ, ಪೇತ್ರನು ಮನನೊಂದು ಅತ್ತನು. ಯೇಸು ಅವನೊಂದಿಗಿದ್ದು ಅವನನ್ನು ಬಲವಾಗಿ ಉಪಯೋಗಿಸಿದರು. ಪೇತ್ರನ ನೆರಳು ಬಿದ್ದು ಸ್ವಸ್ಥತೆ, ಆತನ ಕೈವಸ್ತ್ರ ಉಡಿವಸ್ತ್ರಗಳು ಬಿದ್ದು ಸ್ವಸ್ಥತೆ ಹೊಂದುವಂತೆ ದೇವರು ಜೊತೆಗಿದ್ದು ನಡೆಸಿದರು. ನಮ್ಮನ್ನು ಸೃಷ್ಟಿಸಿದ ದೇವರು, ನಾವು ಆತನನ್ನು ಬಿಟ್ಟು ಹೋದರೂ ನಮ್ಮನ್ನು ಕ್ಷಮಿಸಿ ನಮ್ಮೊಂದಿಗಿದ್ದು ಕಾಯುತ್ತಾರೆ. ನಾವು ಸಹ ಅವರೊಂದಿಗೆ ಇರಲು ಹಾತೊರೆಯುವಾಗ, ಆತನು ನಮ್ಮನ್ನು ಬಲವಾಗಿ ಉಪಯೋಗಿಸುತ್ತಾರೆ.
ಪ್ರಿಯರೇ, ನಮ್ಮ ದೇವರು ಎಷ್ಟು ಪ್ರೀತಿಯುಳ್ಳವರು! ನಮ್ಮನ್ನು ಬಿಟ್ಟು ಹೋಗದೆ ನಮ್ಮನ್ನು ಮುನ್ನಡೆಸುವ ದೇವರನ್ನು ಅನುಸರಿಸೋಣ. ಕಳೆದ ಎಲ್ಲಾ ವರ್ಷಗಳಲ್ಲಿ ನಮ್ಮನ್ನು ಎಂದಿಗೂ ಕೈಬಿಡದ ಕರ್ತನಿಗೆ ನಾವು ಈ ವರ್ಷ ಏನು ಮಾಡಲಿದ್ದೇವೆ. ನಮ್ಮ ಕೊಡುಗೆಯಾಗಿ ನಾವು ಏನು ಮಾಡಬಲ್ಲೆವು? ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ಈ ಹೊಸ ವರ್ಷವನ್ನು "ನಿರ್ಣಾಯಕ ಕೊಡುಗೆಯ ವರ್ಷ"ವನ್ನಾಗಿ ಮಾಡಲು ದೇವರು ನಮ್ಮನ್ನು ಕರೆದೊಯ್ದರು. ನಮ್ಮ ಕುಟುಂಬಕ್ಕಾಗಿ ನಾವು ಎಷ್ಟು ಶ್ರಮಿಸುತ್ತೇವೆ. ಆದರೆ ನಮ್ಮ ಮೂಲಕ ದೇವರಿಗೆ ಏನಾದರೂ ಪ್ರಯೋಜನವಿದೆಯೇ? ಯಾವುದೇ ಲಾಭವಿದೆಯೇ? ಇಲ್ಲ. ಆದ್ದರಿಂದ ಈ ವರ್ಷ ಅವರಿಗೆ ಪ್ರಯೋಜನ ಮತ್ತು ಲಾಭ ಉಂಟಾಗಲು ನಮ್ಮ ಪಾಲನ್ನು ನಿರ್ಧರಿಸಿ ಕೊಡಲು ಕೆಲಸ ಮಾಡೋಣ. ಜೊತೆಗಿರುವ ಕರ್ತನು ಬಿಡದವರಾಗಿ ನಮ್ಮೊಂದಿಗಿದ್ದು ನಮಗೆ ಮಾರ್ಗದರ್ಶನ ನೀಡಲಿ. ಆಮೆನ್. Wish you all a happy and blessed new year.
- Bro.ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ಈ ತಿಂಗಳ ಸೇವೆಗಳಿಗಾಗಿ ಮತ್ತು ಸೇವಕರ ಸೌಖ್ಯಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482