By Village Missionary Movement
Wednesday, 31-Dec-2025ಧೈನಂದಿನ ಧ್ಯಾನ(Kannada) – 31.12.2025
ಕರ್ತನನ್ನು ಸ್ತುತಿಸಿ ಹಾಡಿರಿ
"ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು" - ಕೀರ್ತನೆ 34:1
ಚೀನಾಗೆ ಮಿಷನರಿಯಾಗಿ ಹೋದ ಸೇವಕರೊಬ್ಬರು ಸೇವೆಯು ಬೆಳೆಯದೆ ಅನೇಕ ಕಷ್ಟಗಳನ್ನು ಎದುರಿಸಿ ತುಂಬಾ ನಿರುತ್ಸಾಹಗೊಂಡರು. ವಿರೋಧಗಳು ಹೆಚ್ಚಿದ್ದರಿಂದ ಸೋಲಿನ ಮನೋಸ್ಥಿತಿಯಲ್ಲಿ ಬಹಳ ನೊಂದರು. ತನ್ನ ಖಿನ್ನತೆ ಮತ್ತು ಚಿಂತೆಗಳನ್ನು ತೊಡೆದುಹಾಕಲು ತೀವ್ರವಾಗಿ ಪ್ರಾರ್ಥಿಸಿದರೂ ಯಾವ ಉಪಯೋಗವಿಲ್ಲ.
ಸ್ವಲ್ಪ ಹತ್ತಿರದಲ್ಲಿದ್ದ ಇನ್ನೊಬ್ಬ ಮಿಷನರಿಯೊಂದಿಗೆ ಕೆಲವು ದಿನಗಳನ್ನು ಪ್ರಾರ್ಥನೆಯಲ್ಲಿ ಕಳೆಯಲು ನಿರ್ಧರಿಸಿ, ಅವರ ಮನೆಗೆ ಹೋದರು. ಬಾಗಿಲಲ್ಲಿ ನೇತಾಡುತ್ತಿದ್ದ "ಕರ್ತನನ್ನು ಸ್ತುತಿಸಿ ಹಾಡಿರಿ" ಎಂಬ ವಾಕ್ಯವು ಅವರ ಕಣ್ಣಿಗೆ ಬಿತ್ತು. ಕರ್ತನು ತಾನು ಕೃತಜ್ಞತೆಯಿಂದ ದೇವರನ್ನು ಸ್ತುತಿಸಿ ಹಾಡುತ್ತಿರಲಿಲ್ಲ ಎಂಬುದನ್ನು ಗ್ರಹಿಸುವಂತೆ ಮಾಡಿದರು. ದಟ್ಟವಾದ ಕಾಡಿಗೆ ಹೋಗಿ ಪವಿತ್ರಾತ್ಮದಿಂದ ದೇವರನ್ನು ಸ್ತುತಿಸಲು ಮತ್ತು ಮಹಿಮೆಪಡಿಸಲು ಪ್ರಾರಂಭಿಸಿದರು. ಎಲ್ಲಾ ಖಿನ್ನತೆ, ವೈಫಲ್ಯದ ಭಾವನೆಗಳು ಮತ್ತು ಚಿಂತೆಗಳು ಅವರನ್ನು ಬಿಟ್ಟುಹೋದವು. ಅವರು ಬಿಡುಗಡೆ ಮತ್ತು ಹೊಸ ಉತ್ಸಾಹವನ್ನು ಪಡೆದರು. ಮನೋಲ್ಲಾಸದಿಂದ ಸೇವೆಯನ್ನು ಮುಂದುವರಿಸಿದರು.
ನಾವು 2025 ರ ಕೊನೆಯ ದಿನದಲ್ಲಿದ್ದೇವೆ. ಇಲ್ಲಿಯವರೆಗೆ, ನಮ್ಮ ಜೀವನದಲ್ಲಿ ಮತ್ತು ನಮ್ಮ ಮಕ್ಕಳ ಜೀವನದಲ್ಲಿ ವಿವಿಧ ಖಿನ್ನತೆಗಳು, ಚಿಂತೆಗಳು, ಆರ್ಥಿಕ ನಷ್ಟಗಳು ಮತ್ತು ಕಾಯಿಲೆಗಳು ಸಂಭವಿಸಿರಬಹುದು. ನೀವು ಎಷ್ಟೇ ಪ್ರಾರ್ಥಿಸಿದರೂ, ಕೆಲವು ವಿಷಯಗಳು ಬದಲಾಗಿಲ್ಲ ಎಂದು ನೀವು ನಿರಾಶೆಗೊಂಡಿದ್ದೀರಾ? ಪೌಲ ಸೀಲರು ಸೆರೆಮನೆಯಲ್ಲಿ ದೇವರನ್ನು ಸ್ತುತಿಸಿ ಹಾಡಿದ ಹಾಗೆ ದೇವರನ್ನು ಸ್ತುತಿಸಲು ಪ್ರಾರಂಭಿಸಿ.
ಹೌದು, ನನಗೆ ಪ್ರಿಯರಾದವರೇ, ಸೋಲುಗಳು ಮತ್ತು ದುಃಖಗಳ ಮಧ್ಯದಲ್ಲಿಯೂ, "ಸ್ತುತಿ ಎಂಬ ಧೂಪ" ನಮ್ಮ ಮನೆಗಳಲ್ಲಿ ಎದ್ದೇಳಲಿ. ಸ್ತುತಿಯೇ ತಕ್ಕದ್ದು ಎಂದು ಸತ್ಯವೇದವು ಹೇಳುತ್ತಿದೆ. ಇಲ್ಲಿಯವರೆಗೆ ನಮ್ಮನ್ನು ಕಾಪಾಡಿದ ಇಮ್ಮಾನುವೇಲ್ ಇನ್ನು ಮುಂದೆಯೂ ಕಾಯುವ ಎಬೆನೇಜರ್ ಆಗಿ ನಿಮ್ಮೊಂದಿಗಿದ್ದಾರೆ. ಸ್ತುತಿಸುತ್ತಲೇ ಹೊಸ ವರ್ಷದಲ್ಲಿ ಪ್ರವೇಶಿಸೋಣ. ಹಲ್ಲೆಲೂಯಾ.
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ಹೊಸ ವರ್ಷದ ಗುರಿಗಳು ಮತ್ತು ಯೋಜನೆಗಳನ್ನು ನಿರ್ಧರಿಸುವ ನಾಯಕರಲ್ಲಿ ದೇವರ ಚಿತ್ತವು ಬಹಿರಂಗಗೊಳ್ಳಲಿ ಎಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482