Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.12.2025 (Happy Christmas)
Share:

By Village Missionary Movement

Thursday, 25-Dec-2025

ಧೈನಂದಿನ ಧ್ಯಾನ(Kannada) – 25.12.2025 (Happy Christmas)

 

ಬಹಿರಂಗಪಡಿಸುವ ದೇವರು

 

"ಅನಾದಿಯಾಗಿ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ... ಪ್ರಕಾಶಕ್ಕೆ ಬಂದಿರುವ ಈ ಮರ್ಮಕ್ಕೆ ಅನುಸಾರ ಅಂದರೆ ಯೇಸು ಕ್ರಿಸ್ತನ ವಿಷಯವಾದಂಥ ನಾನು ಸಾರುವಂಥ ಸುವಾರ್ತೆಗನುಸಾರ..." - ರೋಮಾ 25:26

 

ಯೇಸುವಿನ ಹೆಸರು ಆರಂಭದಿಂದಲೂ ಅವರ ಹೆತ್ತವರ ಹೊರತು ಬೇರೆ ಯಾರಿಗೂ ಬಹಿರಂಗವಾಗಲಿಲ್ಲ (ಮತ್ತಾಯ 1:21). ಯೇಸುವಿನ ಜನನದಲ್ಲಿ ಕೆಲವು ಜನರು ಭಾಗಿಯಾಗಿದ್ದರು. ದೇವರು ಈ ಜನರಿಗೆ ತನ್ನನ್ನು ಹೇಗೆ ಬಹಿರಂಗಪಡಿಸಿದರು? ನೋಡೋಣ.

 

ಯೇಸು ಎಂಬ ಮಾತು ಮೊಟ್ಟ ಮೊದಲು ತನ್ನಲ್ಲಿ ಬಿತ್ತಲ್ಪಟ್ಟಾಗ, ಮರಿಯಳು ಅದನ್ನು ಹಾಗೆಯೇ ಸ್ವೀಕರಿಸಿದ್ದರಿಂದ, ಆ ವಾಕ್ಯವು ಶರೀರವಾಗಿ ಯೇಸುವಾಗಿ ಕಾಣಿಸಿಕೊಂಡರು (ಲೂಕ 1:38). ಗೊಂದಲಮಯ ಸ್ಥಿತಿಯಲ್ಲಿದ್ದ ಯೋಸೇಫನಿಗೆ ಯೇಸು ಎಂಬ ಮಾತು ಬಹಿರಂಗವಾದರೂ, "ಇಮ್ಮಾನುವೇಲ್" ಎಂಬ ಹೆಸರನ್ನು ಕೇಳಿದಾಗ ಮಾತ್ರ ಅವರ ಗೊಂದಲ ದೂರವಾಯಿತು ಮತ್ತು ಅವರು ತನ್ನ ಹೆಂಡತಿಯನ್ನು ಸಂತೋಷದಿಂದ ಸ್ವೀಕರಿಸಿದರು (ಮತ್ತಾಯ 1:21-25). ಮರಿಯಳ ಶುಭವಚನದಲ್ಲಿ ಪ್ರಕಟವಾದ ಪ್ರವಾದನೆಯ ಶಕ್ತಿಯು ಎಲಿಜಬೆತ್ ಮತ್ತು ಆಕೆಯ ಗರ್ಭದಲ್ಲಿರುವ ಮಗುವನ್ನು ಮುಟ್ಟಿದ ತಕ್ಷಣ, ಎಲಿಜಬೆತ್ ಮಗು ಅಸ್ವಾಭಾವಿಕವಾಗಿ ಜಿಗಿಯುವುದನ್ನು ಅನುಭವಿಸಿದಳು, ಪವಿತ್ರಾತ್ಮದಿಂದ ತುಂಬಿದಳು ಮತ್ತು ಯೇಸುವನ್ನು ತನ್ನ ದೇವರಾಗಿ ನೋಡಿದಳು (ಲೂಕ 1:39-45). ಜೆಕರ್ಯನ ನಾಲಿಗೆ ಸಡಿಲಗೊಂಡು ಅವನು ಕರ್ತನನ್ನು ಸ್ತುತಿಸಿದಾಗ. ದರ್ಶನದ ಮೂಲಕ, ಕರ್ತನು ತನ್ನನ್ನು ಜೆಕರ್ಯನಿಗೆ ರಕ್ಷಣೆಯ ಕೊಂಬು ಆಗಿಯೂ (ಜೆಕರ್ಯ 3:8), ಉನ್ನತರಾಗಿಯೂ ಉನ್ನತದಿಂದ ಅರುಣೋದಯವಾಗಿಯೂ ಪ್ರಕಟಿಸಿದರು (ಲೂಕ 1:75-79). ಕರ್ತನು ಸಿಮಿಯೋನನಿಗೆ ತಮ್ಮನ್ನು ಇಸ್ರಾಯೇಲ್ ದೇವರ ರಕ್ಷಣೆಯಾಗಿಯೂ ಆದರಣೆಯಾಗಿಯೂ, ಕರ್ತನ ಕ್ರಿಸ್ತನಾಗಿಯೂ ಬಹಿರಂಗಪಡಿಸಿದರು. ದೇವಾಲಯವನ್ನು ಬಿಟ್ಟು ಹೋಗದೆ ಹಗಲಿರುಳು ಉಪವಾಸ, ಪ್ರಾರ್ಥನೆ ಮತ್ತು ಆರಾಧನೆ ಮಾಡುತ್ತಿದ್ದ ಹನ್ನಳಿಗೆ, ದೇವರು ತನ್ನನ್ನು ವಿಮೋಚಕನಾಗಿ ಬಹಿರಂಗಪಡಿಸಿದರು.

 

ಈ ರೀತಿಯಾಗಿ, ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನ ರೀತಿಯಲ್ಲಿ ತನ್ನನ್ನು ಬಹಿರಂಗಪಡಿಸಿದ ಕರ್ತನು ರಕ್ಷಕನು ವಿಮೋಚಕನು ಎಂದು ಅರ್ಥಗೊಳ್ಳುವಂತೆ ಕ್ರಿಸ್‌ಮಸ್ ದಿನದಂದು ಇಮ್ಮಾನುವೇಲನಾಗಿ ಕಾಣಿಸಿಕೊಂಡರು, ಇದರಂತೆಯೇ, ಕರ್ತನಾದ ಯೇಸು ಈ ಅಂತ್ಯ ಕಾಲದಲ್ಲೂ ನಮ್ಮೊಳಗೂ ನಮ್ಮ ಜೀವನದಲ್ಲೂ ಕಾಣಿಸಿಕೊಳ್ಳಲು ಮತ್ತು ಕ್ರಿಯೆ ಮಾಡಲು ಬಯಸುತ್ತಿದ್ದಾರೆ. ಆತನು ನಮಗೆ ಯಾವುದೇ ಹೆಸರಿನಲ್ಲಿ ಕಾಣಿಸಿಕೊಂಡರೂ, ಆ ಹೆಸರಿನ ಶಕ್ತಿಯು ಆತನು ಅದನ್ನು ಕಳುಹಿಸಿದ ಉದ್ದೇಶವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಅದರಂತೆ, ಮರಿಯಳು ತನ್ನ ಗರ್ಭದಲ್ಲಿ ಯೇಸುವನ್ನು ಹೊತ್ತಿದ್ದಳು; ಯೋಸೇಫನು ಯೇಸುವನ್ನು ತನ್ನ ಮಡಿಲಲ್ಲಿ ಬೆಳೆಸಿದರು; ಸಿಮಿಯೋನ್ ಯೇಸುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡರು.

 

ಪ್ರಿಯರೇ! ಇವರಂತೆಯೇ ನಾವು ಸಹ, ನಮ್ಮನ್ನು ಭೇಟಿ ಮಾಡುವ ದೇವರು ನಮ್ಮ ಬಳಿ ಹೇಳುವ "ನಿನ್ನ ದೇವರನ್ನು ಸಂಧಿಸಲು ಸಿದ್ಧನಾಗು" (ಆಮೋಸ 4:12) ಎಂಬ ಎಚ್ಚರಿಕೆಯ ಶಬ್ದವನ್ನು ಕೇಳಿ, ನಮ್ಮ ಹೃದಯವನ್ನು ತೆರೆದು ಯೇಸುವನ್ನು ರಕ್ಷಕನಾಗಿ ಮಾತ್ರವಲ್ಲದೆ ನಮ್ಮೆಲ್ಲರ ಜೀವನವನ್ನು ಆಳುವ ರಾಜನಾಗಿಯೂ ಸ್ವೀಕರಿಸೋಣವಾ?

- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯಲಿರುವ ಸುವಾರ್ತೆ ಮಹೋತ್ಸವದಲ್ಲಿ ದೇವರ ಆಳ್ವಿಕೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin