By Village Missionary Movement
Tuesday, 23-Dec-2025ಧೈನಂದಿನ ಧ್ಯಾನ(Kannada) – 23.12.2025
ದಾಸನ ರೂಪ
"ಆತನು ದೇವಸ್ವರೂಪನಾಗಿದ್ದರೂ ... ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು" - ಫಿಲಿಪ್ಪಿ 2:6,7
ಕೆಲವು ನೂರು ವರ್ಷಗಳ ಹಿಂದೆ, ಗುಲಾಮ ವ್ಯಾಪಾರವು ವ್ಯಾಪಕವಾಗಿತ್ತು. ಅನೇಕ ಜನರು ತಮ್ಮ ಯಜಮಾನರಿಗೆ ಗುಲಾಮರಾಗಿ ಕೆಲಸ ಮಾಡಿದರು. ಕೆಲವರು ಹಣಕ್ಕೆ ಮಾರಲ್ಪಟ್ಟರು. ಇದನ್ನು ನೋಡಿದ ಮೊರಾವಿಯನ್ ಮಿಷನರಿಯೊಬ್ಬರು ಈ ಜನರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಮತ್ತು ನಿಜವಾದ ಯೇಸು ಕ್ರಿಸ್ತನನ್ನು ಘೋಷಿಸಲು ತಮ್ಮನ್ನು ತಾವು ತೊಡಗಿಸಿಕೊಂಡರು. ಅವರು ಪೆಸಿಫಿಕ್ ಸಾಗರದಲ್ಲಿರುವ ವೆಸ್ಟ್ ಇಂಡೀಸ್‌ಗೆ ಹೋಗಲು ನಿರ್ಧರಿಸಿದರು. ಅವರು ಸ್ವತಃ ಗುಲಾಮರಾಗದ ಹೊರತು ಅವರೊಂದಿಗೆ ಸೇರಲು ಸಾಧ್ಯವಿಲ್ಲ. ಆದ್ದರಿಂದ ಅವರು ಗುಲಾಮರಾಗಿ ಅಲ್ಲಿನ ಯಜಮಾನರಿಗೆ ಶರಣಾದರು, ಮತ್ತು ಅವರು ಗುಲಾಮ ಬಟ್ಟೆಗಳನ್ನು ಧರಿಸಿ, ಗುಲಾಮ ಆಹಾರವನ್ನು ತಿನ್ನುತ್ತಾ ಮತ್ತು ಗುಲಾಮರೊಂದಿಗೆ ಗುಲಾಮರಾಗಿ ಕೆಲಸ ಮಾಡುತ್ತಾ ಬಂದರು. ಆದ್ದರಿಂದ, ಹಗಲು ರಾತ್ರಿ, ತನ್ನೊಂದಿಗಿದ್ದ ಗುಲಾಮರಿಗೆ ರಕ್ಷಣೆಯ ಸಂದೇಶವನ್ನು ಘೋಷಿಸಿದರು ಮತ್ತು ಅನೇಕ ಗುಲಾಮರನ್ನು ಕ್ರಿಸ್ತನ ಗುಲಾಮರನ್ನಾಗಿ ಸಂಪಾದಿಸಿದರು.
ಯಾಕಂದರೆ ದೇವರು ಮನುಷ್ಯರಾದ ನಮ್ಮನ್ನು ತುಂಬಾ ಪ್ರೀತಿಸಿದ್ದರಿಂದ, ತನ್ನ ಮಗನನ್ನು ಪರಲೋಕದಿಂದ ಭೂಮಿಗೆ ಕಳುಹಿಸಿದರು. ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟರು. ಎಷ್ಟು ಪ್ರೀತಿ ನೋಡುದ್ರಾ? ಯೇಸು ಕ್ರಿಸ್ತನು ನಮಗಾಗಿ ಎಷ್ಟು ವಿಷಯಗಳನ್ನು ಬಿಟ್ಟುಕೊಟ್ಟಿದ್ದಾರಲ್ಲವಾ?
ಯೇಸು ಕ್ರಿಸ್ತನು "ಪರಲೋಕದ ಮಹಿಮೆಯನ್ನು" ಬಿಟ್ಟುಹೋದರು! ಅಷ್ಟೇ ಅಲ್ಲ, ಅವರು "ಮನುಷ್ಯ"ನಾಗಿ ತನ್ನನ್ನು ತಗ್ಗಿಸಿಕೊಂಡರು, "ಗುಲಾಮ"ನಾಗಿ ತನ್ನನ್ನು ತಗ್ಗಿಸಿಕೊಂಡರು ಮತ್ತು ತನ್ನ ಶಿಷ್ಯರ ಪಾದಗಳನ್ನು ತೊಳೆದರು. ಅವರು ಒಂದು ಹೆಜ್ಜೆ ಮುಂದೆ ಹೋಗಿ "ಅಪರಾಧಿಗಳಲ್ಲಿ" ಒಬ್ಬರಾಗಿ ಶಿಲುಬೆಗೇರಿಸಲ್ಪಟ್ಟರು. ಇದರ ಮೂಲಕ ದೇವರು ನಮ್ಮೊಂದಿಗೆ ಮಾತನಾಡುತ್ತಿರುವ ಕಾರ್ಯವೇನು? ಇತರರು ಕರ್ತನನ್ನು ತಿಳಿದುಕೊಳ್ಳಲು ನಾವು ಯಾವುದೇ ಮಟ್ಟಕ್ಕೆ ನಮ್ಮನ್ನು ತಗ್ಗಿಸಿಕೊಳ್ಳಲು ಸಿದ್ಧರಾಗಿರಬೇಕು.
ದೇವರ ಮಕ್ಕಳೇ! ನಾವು ನಮ್ಮ ಸ್ಥಾನದಿಂದ ಕೆಳಗಿಳಿಯದ ಹೊರತು ಇತರರ ಜೀವನದ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಯೇಸು ಕ್ರಿಸ್ತನಂತೆ ಆ ಮೊರಾವಿಯನ್ ಮಿಷನರಿ ತನ್ನನ್ನು ಗುಲಾಮನಾಗಿ ಬಿಟ್ಟುಕೊಟ್ಟರು. ಅವರ ಸಮಯದಲ್ಲಿ, ದೇವರು ಅವರ ಮೂಲಕ ಮಾಡಲು ಯೋಜಿಸಿದ್ದನ್ನು ಅವರು ಪೂರ್ಣಗೊಳಿಸಿದರು. ನಮ್ಮ ಬಗ್ಗೆ ಏನು? ನಾವು ನಮ್ಮ ಶ್ರೇಷ್ಠತೆ, ಸ್ಥಾನಮಾನ, ಗೌರವ ಮತ್ತು ಪ್ರಭಾವವನ್ನು ತ್ಯಜಿಸಿ ನಮ್ಮಲ್ಲಿ ಈಡೇರುವ ದೇವರ ಚಿತ್ತಕ್ಕೆ ನಮ್ಮನ್ನು ಒಪ್ಪಿಸಿಕೊಡೋಣವಾ?
- Mrs. ಜ್ಯೋತಿ ಆನಂದ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ಕ್ರಿಸ್‌ಮಸ್ ದಿನದಂದು ನಡೆಯಲಿರುವ ಸುವಾರ್ತೆ ಮಹೋತ್ಸವಕ್ಕೆ ಬೇಕಾದ ದೇವರ ಚಿತ್ತ ನಾಯಕರುಗಳಿಗೆ ಪ್ರಕಟವಾಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482