Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.12.2025 (Kids Special)
Share:

By Village Missionary Movement

Sunday, 21-Dec-2025

ಧೈನಂದಿನ ಧ್ಯಾನ(Kannada) – 21.12.2025 (Kids Special)

 

ಮನುಷ್ಯನಾಗಿ ಜನಿಸಿದ ಯೇಸು

 

“...ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ" - ಲೂಕ 2:10

 

ಹಲೋ ಪುಟಾಣಿಗಳೇ, ನೀವು ಕಾತರದಿಂದ ಕಾಯುತ್ತಿರುವ ಕ್ರಿಸ್‌ಮಸ್ ಬಹು ಹತ್ತಿರ ಬಂದು ಬಿಡ್ತು ಅಲ್ವಾ? Jolly ಅಲ್ವಾ!

 

ಆವತ್ತು ಡಿಸೆಂಬರ್ 24 ನೇ ತಾರೀಖು, ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಏಂಜಲ್‌ಗೆ ಒಂದು ದೊಡ್ಡ ಸಂದೇಹ ಬಂತು. "ಯೇಸು ಏಕೆ ಮಾನವ ರೂಪವನ್ನು ತೆಗೆದುಕೊಂಡು ಈ ಲೋಕದಲ್ಲಿ ಜನಿಸಬೇಕು? ಅವರು ದೇವರಾಗಿದ್ದುಕೊಂಡೇ ಮನುಷ್ಯರೊಂದಿಗೆ ಮಾತನಾಡಬಹುದಲ್ಲಾ!" ಎಂಬ ಅನೇಕ ಪ್ರಶ್ನೆಗಳಿದ್ದವು. ಹಾಗೆ ಯೋಚಿಸುತ್ತಾ ಕಿಟಕಿಯ ಪಕ್ಕಕ್ಕೆ ಹೋದಾಗ ಡಿಸೆಂಬರ್‌ನಲ್ಲಿ ಹಿಮಪಾತದ ಸಮಯವಾದ್ದರಿಂದ ಮರದ ಮೇಲೆ ಚಳಿಯಲ್ಲಿ ನಡುಗುತ್ತಿದ್ದ ಪುಟ್ಟ ಗುಬ್ಬಚ್ಚಿಯನ್ನು ನೋಡಿದಳು. ಅದನ್ನು ನೋಡಿದ ಏಂಜಲ್ ಗುಬ್ಬಚ್ಚಿಗೆ ಸಹಾಯ ಮಾಡಲು ಬಯಸಿದಳು. ಅವಳು ಓಡಿಹೋಗಿ ಕಾರಿನ ಸೀಟ್ ಬಾಗಿಲು ತೆರೆದು ಗುಬ್ಬಚ್ಚಿಯನ್ನು ಒಳಗೆ ಬಂದು ಚಳಿ ಕಾಯಿಸಿಕೊಳ್ಳಲು ಕರೆದಳು. ಅವಳು ಎಷ್ಟೇ ಕರೆದರೂ, ಪುಟ್ಟ ಗುಬ್ಬಚ್ಚಿ ಒಳಗೆ ಬರಲೇ ಇಲ್ಲ. ಏಂಜೆಲ್ ಗೆ ಏನು ಮಾಡುವುದೆಂದು ಗೊತ್ತಾಗಲಿಲ್ಲ. ಆ ಕ್ಷಣದಲ್ಲಿ, ಇನ್ನೊಂದು ಗುಬ್ಬಚ್ಚಿ ಮರದ ಕೊಂಬೆಯ ಮೇಲೆ ಬಂದು ಕುಳಿತಿತು. ಅದು ಕೂಡ ಚಳಿಯನ್ನು ಸಹಿಸಲಾರದೆ ಸುತ್ತಲೂ ನೋಡಿದಾಗ ತೆರೆದ ಕಾರಿನ ಸೀಟನ್ನು ನೋಡಿ ಒಳಗೆ ಹಾರಿಹೋಯಿತು. ಅದನ್ನು ನೋಡಿದ ಪುಟ್ಟ ಗುಬ್ಬಚ್ಚಿಯೂ ಅದನ್ನು ಹಿಂಬಾಲಿಸಿ ಕಾರಿನ ಸೀಟಿನೊಳಗೆ ಬಂದು ಅಲ್ಲಿದ್ದ ದೀಪದ ಬಳಿ ಕುಳಿತು ಚಳಿಕಾಯಲು ಪ್ರಾರಂಭಿಸಿತು. 

 

ಇದನ್ನು ನೋಡುತ್ತಿದ್ದ ಏಂಜಲ್ ಗೆ ಆಗ ಅರ್ಥವಾಗಲು ಪ್ರಾರಂಭವಾಯಿತು. ಯೇಸು ಈ ಲೋಕದಲ್ಲಿ ಮನುಷ್ಯಕುಮಾರನಾಗಿ ಜನಿಸಿದ್ದು ನಾವು ಹೇಗೆ ಬದುಕಬೇಕು ಮತ್ತು ಪರಲೋಕಕ್ಕೆ ಹೇಗೆ ಹೋಗಬೇಕು ಎಂಬುದರ ಮಾದರಿಯನ್ನು ಬಿಟ್ಟು ಹೋಗುವುದಕ್ಕಾಗಿ ಎಂದು. ಅವರು ನಮಗೆ ಯಾವ ರೀತಿಯ ಮಾದರಿಯನ್ನು ಬಿಟ್ಟುಹೋದರು ಎಂದು ನೀವು ಭಾವಿಸುತ್ತೀರ? ಯೇಸು ಕ್ರಿಸ್ತನು ತನ್ನ ತಂದೆ ತಾಯಿಯಾದ ಮರಿಯ ಮತ್ತು ಯೋಸೇಫನಿಗೆ ವಿಧೇಯನಾಗಿದ್ದರಿಂದ, ನಮ್ಮ ಹೆತ್ತವರಿಗೆ ವಿಧೇಯರಾಗಲು ನಮಗೆ ಕಲಿಸಿದ್ದಾರೆ. ಪರಲೋಕದಲ್ಲಿ ದೇವರಾಗಿದ್ದುಕೊಂಡು "ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ" ಎಂದು ಹೇಳಿದ್ದರೆ ನಾವು ಏನು ಹೇಳುತ್ತಿದ್ದೆವು? ಅದು ಎಷ್ಟು ಕಷ್ಟ ಎಂದು ದೇವರಿಗೆ ಏನು ಗೊತ್ತು ಎಂದು ಸಹ ಹೇಳುತ್ತಿರಲಿಲ್ಲವಾ? ಅವರು ನಮಗೆ ಮಾದರಿಯಾಗಿ ಬದುಕಲು ಈ ಭೂಮಿಗೆ ಮನುಷ್ಯನಾಗಿ ಜನಿಸಿದರು. ಈ ಸುದ್ದಿಯನ್ನು ತನ್ನ ಸ್ನೇಹಿತರಿಗೆ ಸಂತೋಷದಿಂದ ಹೇಳಲು ಏಂಜಲ್ ನಿರ್ಧರಿಸಿದಳು! ಏನು ಪುಟಾಣಿಗಳೇ, ನೀವು ಸಹ ನಿಮಗೆ ತಿಳಿದಿರುವವರಿಗೆ ನಿಮ್ಮ ಎಲ್ಲಾ ಸ್ನೇಹಿತರಿಗೆ, ಯೇಸು ಮನುಷ್ಯಕುಮಾರನಾಗಿ ಜನಿಸಿದ ರಹಸ್ಯವನ್ನು ಹೇಳುತ್ತೀರಾ? ಆಗ ಯೇಸಪ್ಪ ನಿಮ್ಮನ್ನು ನೋಡಿ ತುಂಬಾ ಸಂತೋಷಪಡುತ್ತಾರೆ. O.K ನಾ.

- Mrs. ಐಡಾ ಕಿಂಗ್ ಡೇವಿಡ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş