Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.06.2021
Share:

By Village Missionary Movement

Thursday, 10-Jun-2021

ಧೈನಂದಿನ ಧ್ಯಾನ(Kannada) – 10.06.2021

 

ದೇವರು ನನ್ನ ಸ್ನೇಹಿತನು

 

"ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು." - ಯೋಹಾನ 15:14

 

ಒಬ್ಬ ಶ್ರೀಮಂತನಿಗೆ ಬಡ ಸ್ನೇಹಿತನೊಬ್ಬನಿದ್ದನು. ಒಂದು ಕಾಲದಲ್ಲಿ ಶ್ರೀಮಂತ ಸ್ನೇಹಿತನಿಗೆ ಸ್ವಲ್ಪ ಹಣದ ಕೊರತೆ ಇತ್ತು. ಆ ಸಮಯದಲ್ಲಿ ಅಲ್ಲಿಗೆ ಬಂದ ಬಡ ಸ್ನೇಹಿತನು, ಉರಿಗೊಂಡು, ಚಿಂತೆಗೀಡಾಗಿದ್ದ ತನ್ನ ಸ್ನೇಹಿತನನ್ನು ನೋಡಿ, "ಹೇಗಿದ್ದೀಯಾ?" ಎಂದು ಎಂದಿನಂತೆ ಕೇಳಿದನು. "ಸುಮ್ಮನಿರು, ನನಗೆ ಕೂಡಲೇ ಇಪ್ಪತ್ತು ಲಕ್ಷ ರೂಪಾಯಿ ಬೇಕು, ನಿನ್ನಿಂದ ಕೊಡಲು ಸಾಧ್ಯವೇ?" ಎಂದು ಕೋಪದಿಂದ ಕೇಳಿಬಿಟ್ಟು ತನ್ನ ಕೋಣೆಗೆ ಹೋದನು. ಅವನ ಹಿಂದೆಯೇ ಹೋದ ಬಡ ಸ್ನೇಹಿತನು, "ಅರ್ಧ ಗಂಟೆಯಲ್ಲಿ ಹಣ ಸಿಕ್ಕಿದರೆ ಪರವಾಗಿಲ್ಲವಾ?" ಎಂದು ಶಾಂತವಾಗಿ ಕೇಳಿದನು. ಶ್ರೀಮಂತ ಸ್ನೇಹಿತನಿಗೆ ಮಾತ್ರ ಒಂದೇ ಅಚ್ಚರಿ. ಬಡ ಸ್ನೇಹಿತನನ್ನು ಹಾಸ್ಯಾಸ್ಪದವಾಗಿ ನೋಡಿದನು. ಅರ್ಧ ಗಂಟೆಯಲ್ಲಿ ಹಣ ಬಂತು. ಆ ಶ್ರೀಮಂತ ಸ್ನೇಹಿತನಿಗೆ ಏನೂ ಅರ್ಥವಾಗಲಿಲ್ಲ. ಬಡ ಸ್ನೇಹಿತನು ಹಣವನ್ನು ಕೊಡುವಾಗ, ಹೀಗೆ ಹೇಳಿದನು, "ನೀನು ಯಾವಾಗ ನೋಡಿದರೂ ಅಧಿಕವಾಗಿ ಹಣವನ್ನು ಸೇರಿಸಿದ್ದೀಯ ಫ್ರೆಂಡ್, ಆದರೆ ಒಳ್ಳೆಯ ಸ್ನೇಹಿತರನ್ನು ಸೇರಿಸಲು ಮರೆತುಬಿಟ್ಟೆ. ಎಂದು ಹೇಳಿದನು. ನನ್ನ ಕಠಿಣ ಪರಿಶ್ರಮದಿಂದ ಸಹಾಯಗಳನ್ನು ಮಾಡಿ ಸ್ನೇಹಿತರನ್ನು ನಾನು ಸಂಪಾದಿಸಿ ಕೊಂಡಿದ್ದೇನೆ ” ಎಂದನು. ಇಬ್ಬರು ಗಟ್ಟಿಯಾಗಿ ಅಪ್ಪಿಕೊಂಡರು. ನಶಿಸಿ ಹೋಗುವ ಲೌಕಿಕ ವಸ್ತುಗಳೊಂದಿಗೆ ಸ್ನೇಹಿತರನ್ನು ಮಾಡಿಕೊಳ್ಳಿ ಎಂದು ಸತ್ಯವೇದವು ಹೇಳುತ್ತಿದೆ. ಹೌದು, ಸತ್ಯದ ಬಲವು, ಜೀವದ ಬಲವು ನಮಗೆ ಖಂಡಿತವಾಗಿ ಅಗತ್ಯ.

 

ನನ್ನ ಪ್ರಿಯರೇ! ಒಳ್ಳೆಯ ಸ್ನೇಹಿತರು ನಮ್ಮೊಂದಿಗಿರುವುದು ಎಷ್ಟು ಒಳ್ಳೆಯದು ಎಂದು ನೀವು ನೋಡಿದಿರಾ? ಆದರೆ ಈ ಪ್ರಪಂಚವನ್ನೇ ಸೃಷ್ಟಿಸಿದ ಕರ್ತನಾದ ಯೇಸು ಕ್ರಿಸ್ತನು ನಿಮ್ಮ ಸ್ನೇಹಿತನಾಗಿದ್ದರೆ ನೀವು ತುಂಬಾ ಅದೃಷ್ಟಶಾಲಿಗಳು ತಾನೇ? ಇದು ನಡೆಯುತ್ತದಾ? ದೇವರು ನನ್ನ ಸ್ನೇಹಿತನಾಗಲು ಸಾಧ್ಯವಾ? ಎಂದು ಅನುಮಾನಿಸಬೇಡಿ. ಅವರು ಹೇಳುವುದನ್ನು ನೀವೇ ಗಮನಿಸಿರಿ, "ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು" (ಯೋಹಾನ 15:14) ಎಂದು ಹೇಳಿದ್ದಾರೆ. 

 

ಆದ್ದರಿಂದ ಆತನ ಆಜ್ಞೆಗಳನ್ನು ಪಾಲಿಸಿ, ಅವರಿಗೆ ಸ್ನೇಹಿತರಾಗೋಣ! ದೇವರ ಆಜ್ಞೆಗಳನ್ನು ಪಾಲಿಸಿದರೆ, ನೀವೂ ದೇವರನ್ನು ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಲು ಸಾಧ್ಯ. ದೇವರೇ ನಮ್ಮ ಸ್ನೇಹಿತನಾಗಿಬಿಟ್ಟರೆ ಜೀವನದಲ್ಲಿ ಕಷ್ಟವೆಲ್ಲಿ? ಎಲ್ಲವೂ ಜಯವೇ!

- Mrs.ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:-

Media ಸೇವಕರನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin