By Village Missionary Movement
Saturday, 20-Dec-2025ಧೈನಂದಿನ ಧ್ಯಾನ(Kannada) – 20.12.2025
ಅರ್ಥಪೂರ್ಣ ಹಬ್ಬ
"ಆಗ ಮರಿಯಳು - ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ ಅಂದಳು ..." - ಲೂಕ 1:38
ನಾನು ಅರುಪ್ಪುಕ್ಕೊಟ್ಟೈ C.S.I ದೇವಾಲಯದಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದೆ. ಆಗ ಒಂದು ದಿನ ಒಬ್ಬ ತಾಯಿ ನನ್ನ ಬಳಿಗೆ ಬಂದು ಅಯ್ಯಾ, ಇಂದು ನನ್ನ ಮಗ ಸಮುವೇಲ್ ಗೆ ಹುಟ್ಟುಹಬ್ಬ. ಸಂಜೆ 6 ಗಂಟೆಗೆ ಬಂದು ಪ್ರಾರ್ಥಿಸಿ ಎಂದು ಹೇಳಿದಳು. ನಾನು ಕೂಡ ಸಂಜೆ 6 ಗಂಟೆಗೆ ಪ್ರಾರ್ಥನೆ ಮಾಡಲು ಆ ಮನೆಗೆ ಹೋಗಿದ್ದೆ. ಇಡೀ ಮನೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಅನೇಕ ಸಂಬಂಧಿಕರು ಸಹ ಬಂದಿದ್ದರು. ನಾನು ಮನೆಯನ್ನು ಪ್ರವೇಶಿಸಿದ ತಕ್ಷಣ, ಬಿರಿಯಾನಿಯ ವಾಸನೆ ಬಂದಿತು. ಹುಟ್ಟುಹಬ್ಬದ ಕೇಕ್ ಇತ್ತು. ಸಮುವೇಲ್ ನ ತಾಯಿ, ಅಯ್ಯಾ ಪ್ರಾರ್ಥಿಸಿ ಎಂದು ಹೇಳಿದರು. ನಾನು ಆ ತಾಯಿಯ ಬಳಿ ಹುಟ್ಟುಹಬ್ಬ ಆಚರಿಸುತ್ತಿರುವ ಸಮುವೇಲ್ ಎಲ್ಲಿ? ಕರೆಯಿರಿ ಅಂದೆ. ಅದಕ್ಕೆ ಆ ತಾಯಿ ಅಯ್ಯಾ ಸಮುವೇಲ್ ಮಧುರೈನಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾನೆ, ಆದ್ದರಿಂದ ಅವನು ಈಗ ಬರಲಿಲ್ಲ ಅಯ್ಯಾ ಎಂದು ಹೇಳಿದರು. ಅದೇ ರೀತಿ, ನಾವು ಸಹ ಕ್ರಿಸ್ತನ ಜನನದ ಹಬ್ಬವನ್ನು ಆಚರಿಸುತ್ತೇವೆ. ಹೊಸ ಬಟ್ಟೆ, ಮನೆ ಅಲಂಕಾರ, ಉತ್ತಮ ಆಹಾರ. ಆದರೆ ಹುಟ್ಟುಹಬ್ಬವನ್ನು ಆಚರಿಸುವ ಯೇಸು ಕ್ರಿಸ್ತನು ಮಾತ್ರ ಇರುವುದಿಲ್ಲ. ನಾವು ಆಚರಿಸುವ ಕ್ರಿಸ್ತನ ಜನನದ ಹಬ್ಬವು ಕ್ರಿಸ್ತನ ಜನನದ ಅರ್ಥಪೂರ್ಣ ಹಬ್ಬವಾಗಿರಬೇಕು. ಅದಕ್ಕೆ ಅರ್ಥಪೂರ್ಣ ಸಮರ್ಪಣೆ ಅಗತ್ಯ.
ಮೇಲೆ ಉಲ್ಲೇಖಿಸಲಾದ ವಚನದ ಪ್ರಕಾರ, ಮರಿಯಳು ನಾನು ಕರ್ತನಿಗೆ ದಾಸಿ. ನಿನ್ನ ಮಾತಿನಂತೆ ನನಗೆ ಆಗಲಿ ಎಂದು ತನ್ನನ್ನು ತಾನು ಕರ್ತನಿಗೆ ಒಪ್ಪಿಸಿಕೊಂಡದ್ದರಿಂದಲೇ ಇಂದು ನಾವು ಕ್ರಿಸ್ತನ ಜನನದ ಹಬ್ಬವನ್ನು ಆಚರಿಸುತ್ತಿದ್ದೇವೆ. ಮರಿಯಳು ಒಪ್ಪಿಸಿಕೊಟ್ಟಂತೆಯೇ ನಾವು ಕರ್ತನಿಗೆ ಗುಲಾಮರಾಗಿದ್ದೇವಾ? ಗುಲಾಮಗಿರಿ ಎಂದರೆ ನೂರಕ್ಕೆ ನೂರು ವಿಧೇಯತೆ, ಮರಿಯಳ ವಿಧೇಯತೆ, ನಿನ್ನ ಮಾತಿನಂತೆ ಆಗಲಿ ಎಂಬ ಒಂದು ಮಾತಿನಿಂದ ಅರ್ಥವಾಗುತ್ತಿದೆ. ಮರಿಯಳ ಹೃದಯದಲ್ಲಿಯೂ ಸಹ ಒಂದು ದೊಡ್ಡ ಹೋರಾಟವಿತ್ತು. ಅವಿವಾಹಿತ ಮಹಿಳೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದರೆ, ಯಾರು ಒಪ್ಪಲು ಸಾಧ್ಯ. ಆದರೆ ಮರಿಯಳ ಹೃದಯದಲ್ಲಿ ಇದು ಹೇಗೆ ಸಂಭವಿಸುತ್ತದೆ ಎಂಬ ಪ್ರಶ್ನೆ ಇದ್ದರೂ, ಅವಳು ದೇವದೂತನ ಮಾತಿಗೆ ವಿಧೇಯಳಾಗಿ ತನ್ನನ್ನು ಸಂಪೂರ್ಣವಾಗಿ ಕರ್ತನಿಗೆ ಗುಲಾಮಳಾಗಿ ಒಪ್ಪಿಸಿದಳು. ನಿನ್ನ ಮಾತಿನಂತೆ ಆಗಲಿ ಎಂದು ತನ್ನನ್ನು ತಗ್ಗಿಸಿಕೊಂಡಳು. ಆದ್ದರಿಂದ, ನಾವು ಸಹ ವಿಧೇಯತೆಯನ್ನು ಧರಿಸೋಣ. ಯೇಸು ತಂದೆಯಿಂದ ಉನ್ನತೀಕರಿಸಲ್ಪಟ್ಟಂತೆ, ನಾವೂ ಉನ್ನತೀಕರಿಸಲ್ಪಡುತ್ತೇವೆ.
- Rev. ಜ್ಯೋತಿ ನಾಯಗಂ
ಪ್ರಾರ್ಥನಾ ಅಂಶ:
50,000 ಹಳ್ಳಿಗಳಿಗೆ ಸುವಾರ್ತೆ ಸಾರುವ ಯೋಜನೆಯಲ್ಲಿ ಅನೇಕ ಯೌವನಸ್ಥರು ಸ್ವಯಂಸೇವಕರಾಗಿ ನಮ್ಮೊಂದಿಗೆ ಸೇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482