Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.12.2025
Share:

By Village Missionary Movement

Friday, 19-Dec-2025

ಧೈನಂದಿನ ಧ್ಯಾನ(Kannada) – 19.12.2025

 

ಉಡುಗೊರೆ ಪೆಟ್ಟಿಗೆ

 

"...ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಬಹಳವಾಗಿ ಮುದ್ದಿಟ್ಟನು." - ಲೂಕ 15:20

 

ಒಬ್ಬ ಪುಟ್ಟ ಹುಡುಗಿ ಕ್ರಿಸ್‌ಮಸ್‌ಗೆ ತನ್ನ ತಂದೆಗೆ ಉಡುಗೊರೆಯನ್ನು ನೀಡಲು ಬಯಸಿದ್ದಳು. ಬಹಳ ಸಮಯ ಯೋಚಿಸಿದ ನಂತರ ಒಂದು ತೀರ್ಮಾನಕ್ಕೆ ಬಂದು ಒಂದು ಸಣ್ಣ ಪೆಟ್ಟಿಗೆಯನ್ನು ಕೊಟ್ಟಳು. ಅದರೊಳಗೆ ಏನೂ ಇಲ್ಲದ್ದನ್ನು ಕಂಡ ತಂದೆ ಏನಿದು ಖಾಲಿ ಪೆಟ್ಟಿಗೆ ಎಂದರು ಸ್ವಲ್ಪ ಕೋಪದೊಂದಿಗೆ!" ಪುಟ್ಟ ಹುಡುಗಿ ಮುಗುಳ್ನಗುತ್ತಾ ಅಪ್ಪಾ, ನಾನು ಅದರೊಳಗೆ ತುಂಬಾ ಮುತ್ತುಗಳು ಮತ್ತು ಪ್ರೀತಿಯನ್ನು ತುಂಬಿಸಿ ನಿಮಗೆ ಕೊಟ್ಟಿದ್ದೇನೆ ಎಂದು ಹೇಳಿದಳು. ಅವಳು ಹೇಳಿ ಮುಗಿಸುವ ಮೊದಲೇ, ತಂದೆಯ ಕಣ್ಣುಗಳಿಂದ ಆನಂದದ ಕಣ್ಣೀರು ಹರಿಯಿತು. ಹೌದು, ಆ ಪೆಟ್ಟಿಗೆ ಆ ತಂದೆಗೆ ಜೀವಮಾನದ ನೆನಪಾಗಿತ್ತು. ಇಂದಿಗೂ, ದೇವರ ಬಳಿ ನಮ್ಮ ನಿರೀಕ್ಷೆಗಳು ಆ ತಂದೆಯಂತೆಯೇ, 'ತುಂಬಿದ ಪೆಟ್ಟಿಗೆಯಂತೆ' ಇವೆ. ಆದರೆ ದೇವರು ತನ್ನ ಪ್ರೀತಿ ಮತ್ತು ವಾತ್ಸಲ್ಯದಿಂದ ನಮ್ಮ ಬಳಿಗೆ ಬರುತ್ತಾರೆ. ದೇವರ ಪ್ರೀತಿಯನ್ನು ಅರಿತು ಆತನನ್ನು ಪ್ರೀತಿಸುತ್ತೇವಾ? ಅಥವಾ ಆತನು ನಮಗೆ ಏನೂ ಕೊಟ್ಟಿಲ್ಲ ಎಂದು ದೂರುತ್ತೇವಾ? ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ? (ರೋಮಾ 8:32).

 

ತಂದೆಯನ್ನು ಬಿಟ್ಟು ಬೇರ್ಪಟ್ಟು ಹೋಗಿ, ದುಷ್ಟ ಜೀವನವನ್ನು ನಡೆಸಿ ಮನೆಗೆ ಹಿಂದಿರುಗಿದ ಕಿರಿಯ ಮಗನ ದೃಷ್ಟಾಂತ ನಮಗೆ ತಿಳಿದಿದೆ. ಅದರಲ್ಲಿ, ಅವನ ಸಹೋದರ ಹಿಂತಿರುಗಿದಾಗ, ಅಣ್ಣನು ಒಳಗೆ ಬರಲು ಇಷ್ಟವಿಲ್ಲದೆ ಬಾಗಿಲಲ್ಲೇ ನಿಂತ ಪ್ರಕಾರ ನಾವು ಸಹ ನಿಂತಿದ್ದೇವಾ? ಹಾಗಾದರೆ, ಆ ತಂದೆಯಂತೆ, ನಮ್ಮ ಪರಲೋಕದ ತಂದೆಯೂ ನಮ್ಮ ಬಳಿ ಹೇಳುತ್ತಿದ್ದಾರೆ, "ನನ್ನದೆಲ್ಲವೂ ನಿನ್ನದೇ ಎಂದು!" ಹೌದು, ಎಲ್ಲವನ್ನೂ ನಮಗೆ ಕೊಟ್ಟುಬಿಟ್ಟರು.

 

ನನಗೆ ಪ್ರಿಯವಾದವರೇ, ಯೇಸುಕ್ರಿಸ್ತನ ಜನನವನ್ನು ವರ್ಷಕ್ಕೆ ಒಂದು ದಿನ ಮಾತ್ರ ಆಚರಿಸುವುದು ಕ್ರಿಸ್ಮಸ್ ಅಲ್ಲ. ನಿಜವಾದ ಕ್ರಿಸ್‌ಮಸ್ ನಮ್ಮ ಜೀವನದುದ್ದಕ್ಕೂ ಆತನ ಪ್ರೀತಿಯ ಅಭಿವ್ಯಕ್ತಿಯಾಗಿದೆ. ಪ್ರೀತಿ ಇಲ್ಲದ ಕ್ರಿಸ್‌ಮಸ್ ಬೆಳಕಿಲ್ಲದ ದೀಪದಂತೆ. ಕ್ರಿಸ್ತನ ಪ್ರೀತಿ ಇಲ್ಲದ ಕ್ರೈಸ್ತನ ಸ್ಥಿತಿಯೂ ಅದುವೇ!

 

ಹೊಸಬಟ್ಟೆಗಳು, ಉಡುಗೊರೆಗಳು, ಪಟಾಕಿಗಳು, ಅಲಂಕಾರಗಳು, ಆಚರಣೆಗಳಲ್ಲಿ ಮಾತ್ರವಲ್ಲ, ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು ಎಂಬ ಆಜ್ಞೆಯನ್ನು ಪಾಲಿಸುವುದೇ ಆತನಿಗೆ ಇಷ್ಟ. ನಿಮ್ಮಲ್ಲಿ ಬಡವರಿಗೆ ನೀವು ತೋರಿಸುವ ಪ್ರೀತಿ, ಸಣ್ಣ ನಗು ಮತ್ತು ಸಹಾಯ ಅವರನ್ನು ಸಹ ಸಂತೋಷಪಡಿಸುತ್ತದೆ. ಈ ಕ್ರಿಸ್‌ಮಸ್‌ನಲ್ಲಿ ನಿಮ್ಮ ಪ್ರೀತಿ ಮತ್ತು ಉಡುಗೊರೆಗಳನ್ನು ನೀಡಿ. ಕರ್ತನು ನಿಮ್ಮನ್ನು ಆಶೀರ್ವದಿಸುತ್ತಾರೆ.

- R. ಮಂಜುಳಾ

 

ಪ್ರಾರ್ಥನಾ ಅಂಶ:

50 ಸಾವಿರ ಹಳ್ಳಿಗಳಿಗೆ ಸುವಾರ್ತೆ ಸಾರುವ ಯೋಜನೆಯಲ್ಲಿ ಅನೇಕ ಸಭೆಗಳು ನಮ್ಮೊಂದಿಗೆ ಸೇರಿ ಕೆಲಸ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al