Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.12.2025
Share:

By Village Missionary Movement

Thursday, 18-Dec-2025

ಧೈನಂದಿನ ಧ್ಯಾನ(Kannada) – 18.12.2025

 

ಬೆಳಕು ಉದಯಿಸಿದೆ

 

"ಕತ್ತಲಲ್ಲಿ ವಾಸಿಸಿದ ಈ ಸೀಮೆಗಳ ಜನರಿಗೆ ದೊಡ್ಡ ಬೆಳಕು ಕಾಣಿಸಿತು;..." - ಮತ್ತಾಯ 4:15

 

ಜೇಮ್ಸ್ ಹ್ಯಾನಿಂಗ್ಟನ್ ಇಂಗ್ಲೆಂಡ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರು ಆಫ್ರಿಕಾದ ಜಾಂಬಿಯಾಕ್ಕೆ ಮಿಷನರಿಯಾಗಿ ಹೋದರು. ಯುರೋಪಿಯನ್ನರು ಆ ದೇಶವನ್ನು ಗುಲಾಮರ ವ್ಯಾಪಾರ ಕೇಂದ್ರವನ್ನಾಗಿ ಮಾಡಿದ್ದರು. ಅಲ್ಲಿನ ಜನರ ಜೀವನೋಪಾಯವನ್ನು ಬದಲಾಯಿಸಲು ಜೇಮ್ಸ್ ಹಲವು ವಿಧಗಳಲ್ಲಿ ಹೋರಾಡಿದರು. ಅವರು ಅನಾರೋಗ್ಯದ ಕಾರಣ ಇಂಗ್ಲೆಂಡ್‌ಗೆ ಮರಳಿದರು. ನಂತರ ಅವರನ್ನು ಉಗಾಂಡಾಗೆ ಕಳುಹಿಸಲಾಯಿತು. ಅವರು ಎಲ್ಲಾ ಜನರಿಗೆ ತಾರತಮ್ಯವಿಲ್ಲದೆ ಪ್ರೀತಿಯನ್ನು ತೋರಿಸಿದರು. ಅವರ ಪ್ರಗತಿಯ ಬಗ್ಗೆ ಅಸೂಯೆ ಪಟ್ಟ ಸ್ಥಾನಿಕ ಅಧಿಪತಿ ಇವರನ್ನು ಕೊಲ್ಲಲು ಪ್ರಯತ್ನಿಸಿದನು. ಆದ್ದರಿಂದ ಅವನು ಹ್ಯಾನಿಂಗ್ಟನ್‌ನನ್ನು ಸಾರ್ವಜನಿಕ ವೇದಿಕೆಯ ಮೇಲೆ ಇಟ್ಟು ಈಟಿಯಿಂದ ಇರಿದು ಕೊಂದನು. ಜೇಮ್ಸ್ ಹ್ಯಾನಿಂಗ್ಟನ್ ತನ್ನ ದರ್ಶನದಲ್ಲಿ ನೋಡಿದಂತೆಯೇ, ಇಂದು ಉಗಾಂಡಾದಲ್ಲಿ 90% ಜನರು ಕ್ರೈಸ್ತರೇ. "ಮಿಷನರಿಗಳನ್ನು ಸಮಾಧಿ ಮಾಡಲಾಗುವುದಿಲ್ಲ, ಅವರನ್ನು ಬಿತ್ತಲಾಗುತ್ತದೆ" ಎಂಬ ಮಾತು ಎಷ್ಟು ಸತ್ಯ. ಉಗಾಂಡಾದಲ್ಲಿ ಮಿಷನರಿಗಳ ರಕ್ತ ವ್ಯರ್ಥವಾಗಲಿಲ್ಲ. ಜೇಮ್ಸ್ ಹ್ಯಾನಿಂಗ್ಟನ್ ಅವರ ದರ್ಶನ ವ್ಯರ್ಥವಾಗಲಿಲ್ಲ. ಕತ್ತಲೆಯ ಖಂಡದಲ್ಲಿ ನಿಜವಾದ ಬೆಳಕಾದ ಯೇಸು ಇಂದಿಗೂ ಬೆಳಗುತ್ತಿದ್ದಾರೆ. ಹೌದು, ಪಾಪದ ಕತ್ತಲೆಯಲ್ಲಿ ಗುಲಾಮಗಿರಿಯಲ್ಲಿರುವವರನ್ನು ರಕ್ಷಿಸಲು ಅನೇಕರ ತ್ಯಾಗ ಮತ್ತು ನಿಸ್ವಾರ್ಥ ಕೆಲಸವು ಅಡಿಪಾಯವಾಗಿದೆ. 

 

ಯೇಸುಕ್ರಿಸ್ತನ ಜನನದ ಸಮಯದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತು. ಹೆರೋದನು, ತಾನು ಶಾಸ್ತ್ರಿಗಳಿಂದ ಮೋಸ ಹೋದದ್ದನ್ನು ಕಂಡು, ತುಂಬಾ ಕೋಪಗೊಂಡು, ಆಳುಗಳನ್ನು ಕಳುಹಿಸಿ ತಾನು ಶಾಸ್ತ್ರಿಗಳಿಂದ ಎಚ್ಚರಿಕೆಯಾಗಿ ತಿಳಿದುಕೊಂಡ ಸಮಯದ ಪ್ರಕಾರ, ಬೆತ್ಲೇಹೇಮಿನಲ್ಲೂ ಮತ್ತು ಅದರ ಸುತ್ತಮುತ್ತಲಿನಲ್ಲಿರುವ ಎರಡು ವರ್ಷ ವಯಸ್ಸಿನ ಗಂಡು ಮಕ್ಕಳನ್ನೆಲ್ಲಾ ಕೊಲೆ ಮಾಡಿದನು. ಕರ್ತನ ದೂತನು ಐಗುಪ್ತದಲ್ಲಿ ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, ಎದ್ದು ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಹೋಗು ಎಂದು ಹೇಳಿದಂತೆಯೇ ಅವರು ಬಂದರು. ಪ್ರವಾದಿಗಳ ಮೂಲಕ ಹೇಳಲ್ಪಟ್ಟದ್ದು ನೆರವೇರುವಂತೆ ಇದು ಸಂಭವಿಸಿತು ಮತ್ತು ಲೋಕಕ್ಕೆ ಬೆಳಕನ್ನು ನೀಡಬೇಕಾದ ಯೇಸು ಕ್ರಿಸ್ತನು ಜನಿಸಿದರು.

 

ಕತ್ತಲೆಯಲ್ಲಿ ಮತ್ತು ಪಾಪದಲ್ಲಿ ವಾಸಿಸುವ ಜನರು ನಿಜವಾದ ಬೆಳಕನ್ನು ನೋಡುವಂತೆ ಕರ್ತನಾದ ಯೇಸು ಈ ಲೋಕಕ್ಕೆ ಮನುಷ್ಯನಾಗಿ ಬಂದರು. ಇಂದಿಗೂ, ಅವರ ಜನನದ ಸುದ್ದಿಯನ್ನು ತಿಳಿಯದ ಲಕ್ಷಾಂತರ ಜನರಿದ್ದಾರೆ! ಅವರ ಕತ್ತಲೆಯ ಜೀವನ ಬದಲಾಗಬೇಕಾದರೆ, ಯೇಸು ಕ್ರಿಸ್ತನು ಅವರ ಹೃದಯಗಳಲ್ಲಿ ಜನಿಸಬೇಕು. ಇದನ್ನು ಓದುತ್ತಿರುವ ನೀವು ಯೇಸುವಿಗಾಗಿ ಪ್ರಕಾಶಿಸಲು ಮತ್ತು ಆತನ ಜನನದ ಸುವಾರ್ತೆಯನ್ನು ಇತರರಿಗೆ ಘೋಷಿಸಲು ಸಿದ್ಧರಿದ್ದೀರಾ? ಈ ಕ್ರಿಸ್‌ಮಸ್ ದಿನಗಳಲ್ಲಿ ನಿಮ್ಮ ಪಾಲನ್ನು ನೀಡಲು ಮುಂದೆ ಬನ್ನಿ. ಯೋಚಿಸೋಣ! ಯೇಸುವಿಗಾಗಿ ಒಡಂಬಡಿಕೆಯಾಗಿ ಕಾರ್ಯನಿರ್ವಹಿಸೋಣ. ಜನನದ ಸುವಾರ್ತೆಯನ್ನು ಹರಡೋಣ!

- Bro. ಶಂಕರ್‌ರಾಜ್

 

ಪ್ರಾರ್ಥನಾ ಅಂಶ:

ನಮ್ಮ ಟ್ಯೂಷನ್ ಸೆಂಟರ್ ಮಕ್ಕಳಿಗೆ ಕ್ರಿಸ್‌ಮಸ್‌ಗೆ ಹೊಸ ಬಟ್ಟೆಗಳನ್ನು ತೆಗೆದುಕೊಡಲು ಅಗತ್ಯತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al