Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.12.2025
Share:

By Village Missionary Movement

Wednesday, 17-Dec-2025

ಧೈನಂದಿನ ಧ್ಯಾನ(Kannada) – 17.12.2025

 

ಸ್ಥಳವಿಲ್ಲವಾ?

 

"...ಮಗನನ್ನು ಹೆತ್ತು ಬಟ್ಟೆಗಳಿಂದ ಸುತ್ತಿ ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಆತನನ್ನು ಗೋದ ಲಿಯಲ್ಲಿ ಮಲಗಿಸಿದಳು." - ಲೂಕ 2:7

 

ಕ್ರಿಸ್‌ಮಸ್ ಸಮಯದಲ್ಲಿ, ನಮ್ಮ ಶಾಲೆಗಳು ಮತ್ತು ಚರ್ಚುಗಳಲ್ಲಿ ಕ್ರಿಸ್ತನ ಜನನದ ಬಗ್ಗೆ ನಾಟಕವನ್ನು ಹಾಕುತ್ತಾರೆ ಅಲ್ವಾ? ಹಾಗೆ ಒಂದು ಶಾಲೆಯಲ್ಲಿ ನಾಟಕವೊಂದನ್ನು ಪ್ರದರ್ಶಿಸಿದರು. ಅದರಲ್ಲಿ, ರಮೇಶ್ ಎಂಬ ವಿದ್ಯಾರ್ಥಿ ಛತ್ರದವನಾಗಿ ಪಾತ್ರವನ್ನು ನಟಿಸಿದನು. ಮರಿಯಳಿಗೆ ಹೆರಿಗೆಯ ಸಮಯ ಬಂತು. ಯೋಸೇಫನು ಛತ್ರಕ್ಕೆ ಹೋಗಿ ಉಳಿಯಲು ಸ್ಥಳವನ್ನು ಕೇಳಿದರು. ಛತ್ರದವನಾದ ರಮೇಶ್, ಇಲ್ಲಿ ಸ್ಥಳವಿಲ್ಲ. ಕೊಟ್ಟಿಗೆಯಲ್ಲಿ ಸ್ಥಳವಿದೆ. ನೀವು ಅಲ್ಲಿ ಬೇಕಾದರೆ ಇರಬಹುದು ಎಂದು ಹೇಳಬೇಕು. ಆದರೆ ಆ ದೃಶ್ಯದಲ್ಲಿ ಪಾತ್ರವನ್ನು ನಿರ್ವಹಿಸಿದ ರಮೇಶ್, ಇಲ್ಲಿ ಸ್ಥಳವಿಲ್ಲ ಎಂದು ಹೇಳಲು ತೋಚದೆ, "ಇಲ್ಲಿ ಸ್ಥಳವಿಲ್ಲ, ಆದರೆ ನನ್ನ ಕೋಣೆಯಲ್ಲಿ ಸ್ಥಳವಿದೆ. ಅಲ್ಲಿ ಬಂದು ಇರಿ" ಎಂದು ಹೇಳಿದನು. ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ. ನೆರೆದಿದ್ದ ಜನರು ಸ್ವಲ್ಪ ಸಮಯದವರೆಗೆ ದಿಗ್ಭ್ರಮೆಗೊಂಡರು. ನಂತರ ಎಲ್ಲರೂ ಚಪ್ಪಾಳೆ ತಟ್ಟಿ ರಮೇಶನನ್ನು ಹೊಗಳಿದರು.

 

ಲೂಕ 19 ನೇ ಅಧ್ಯಾಯದಲ್ಲಿ, ಜಕ್ಕಾಯನೆಂಬ ತೆರಿಗೆ ವಸೂಲಿಗಾರನನ್ನು ನಾವು ನೋಡುತ್ತೇವೆ. ಕ್ರಿಸ್ತನು ಹೇಗಿದ್ದಾರೆಂದು ನೋಡಲು ಅವನು ಉತ್ಸುಕನಾಗಿದ್ದನು. ಅವನು ಕುಳ್ಳನಾಗಿದ್ದರಿಂದ, ಯೇಸು ಬರುವ ಮಾರ್ಗದಲ್ಲಿ ಮುಂದಾಗಿ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿ ಅವರನ್ನು ನೋಡಿದನು. ಯೇಸು ಆ ಮರದ ಬಳಿಗೆ ಬಂದು, "ಜಕ್ಕಾಯನೇ, ಇಳಿದು ಬಾ" ಎಂದು ಕರೆದರು. ಅವನು ಸಹ ದೇವರಿಗೆ ತನ್ನ ಹೃದಯದಲ್ಲಿ ಮತ್ತು ತನ್ನ ಮನೆಯಲ್ಲಿ ಸ್ಥಳ ಕೊಟ್ಟನು, ಆಶೀರ್ವದಿಸಲ್ಪಟ್ಟನು.

 

ಆ ದಿನ ಛತ್ರದಲ್ಲಿ ಸ್ಥಳವಿಲ್ಲದಂತೆಯೇ, ಇಂದು ಅನೇಕರ ಹೃದಯಗಳಲ್ಲಿ ಬಾಲಕನಾದ ಯೇಸುವಿಗೆ ಸ್ಥಳವಿಲ್ಲ. ಆದರೆ ದೇವರ ಮಗನು ಪರಲೋಕದಿಂದ ಇಳಿದು ಮನುಷ್ಯನಾಗಿ ಭೂಮಿಗೆ ಬಂದರು. ನಮ್ಮನ್ನು ಹುಡುಕಿ ಬಂದು ನಮ್ಮನ್ನು ಪ್ರೀತಿಸಿ, ಪಾಪದಿಂದ ನಮ್ಮನ್ನು ಬಿಡಿಸಿದರು. ನಿಜವಾದ ಬೆಳಕಾಗಿ, ಸಮಾಧಾನದ ಪ್ರಭುವಾಗಿ ಬಂದರು. ಅವರಿಗೆ ಸ್ಥಳಕೊಡದಿದ್ದರೆ ನಾವು ಪರಿತಪಿಸುವವರು.

 

ಇದನ್ನು ಓದುತ್ತಿರುವ ನಿಮ್ಮ ಹೃದಯದಲ್ಲಿ ಯೇಸು ಕ್ರಿಸ್ತನಿಗೆ ಸ್ಥಳ ಕೊಟ್ಟಿದ್ದೀರಾ? ಅಥವಾ ಇನ್ನೂ ಹೊರಗೆ ನಿಂತು ನಿಮ್ಮ ಹೃದಯದ ಬಾಗಿಲನ್ನು ತಟ್ಟುತ್ತಾ ಇದ್ದಾರಾ? ಕ್ರಿಸ್ತನಿಲ್ಲದ ಕ್ರೈಸ್ತನಾಗಿ ನಾನು ಬದುಕುತ್ತಿದ್ದೇನಾ ಎಂದು ಒಂದು ಕ್ಷಣ ನಮ್ಮನ್ನು ಪರೀಕ್ಷಿಸಿಕೊಳ್ಳೋಣ. ದನದ ಕೊಟ್ಟಿಗೆಯಂತೆ ವಾಸನೆ ಬೀರುವ ನನ್ನ ಹೃದಯವನ್ನು ನಿಮಗೆ ನೀಡುತ್ತೇನೆ. ನೀವು ಬನ್ನಿ ಎಂದು ಕರೆಯೋಣ. ಕ್ರಿಸ್ತನೊಂದಿಗೆ ಕ್ರಿಸ್‌ಮಸ್ ಅನ್ನು ಆಚರಿಸೋಣ.

- Mrs. ಶೀಲಾ ಜಾನ್

 

ಪ್ರಾರ್ಥನಾ ಅಂಶ:

ಕ್ರಿಸ್‌ಮಸ್‌ಗೆ ನಮ್ಮ ಮಿಷನರಿಗಳಿಗೆ ಉಡುಗೊರೆಗಳನ್ನು ಕೊಡಲು ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş