Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.12.2025
Share:

By Village Missionary Movement

Monday, 15-Dec-2025

ಧೈನಂದಿನ ಧ್ಯಾನ(Kannada) – 15.12.2025

 

ಯೇಸುವಿನ ಹೆಸರು

 

"...ಅದ್ಭುತಸ್ವರೂಪನು,.. ಎಂಬವು ಅವನ ಹೆಸರು." - ಯೆಶಾಯ 9:6

 

ನೆಪೋಲಿಯನ್ ಹಿಲ್ 1883 ರಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಜನಿಸಿದರು ಮತ್ತು 1970 ರವರೆಗೆ ಜೀವಿಸಿದವರು. ಇವರು ಉದ್ಯಮಿ ಮತ್ತು ನಂಬಿಕೆಯ ಯೋಧರಾಗಿದ್ದರು. ಅವರು ಜಗತ್ತಿಗೆ ಅನೇಕ ಸೃಜನಶೀಲ ಪುಸ್ತಕಗಳನ್ನು ನೀಡಿದ್ದಾರೆ. ಅವುಗಳಲ್ಲಿ, "Think and grow rich" "Law of success" ನಂತಹ ಪುಸ್ತಕಗಳು ಮುಖ್ಯವಾಗಿವೆ. ಈ ಪುಸ್ತಕಗಳು ಅನೇಕ ಜನರನ್ನು ಲೌಕಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಹೆಚ್ಚಿಸಿದೆ. ಬೈಬಲ್ ಆಧರಿಸಿ ಈ ಪುಸ್ತಕಗಳನ್ನು ಬರೆದಿದ್ದಾರೆ. ದೇವರಲ್ಲಿರುವ ನಂಬಿಕೆ, ಆ ನಂಬಿಕೆಯ ಚಿಂತನೆ, ಅದನ್ನು ಅರಿಕೆ ಮಾಡುವುದೂ ನಮ್ಮ ಜೀವನದ ಕೇಂದ್ರವಾಗಿದ್ದರೆ, ನಮ್ಮ ಜೀವನವು ಯಾವಾಗಲೂ ವಿಜಯಶಾಲಿಯಾಗಿರುತ್ತದೆ ಎಂದು ಬರೆದಿದ್ದಾರೆ.

 

ಅವರಿಗೆ ಬ್ಲೇರ್ ಹಿಲ್ ಎಂಬ ಮಗನಿದ್ದನು, ಅವನಿಗೆ ಎರಡೂ ಕಿವಿಗಳು ಕಿವುಡಾಗಿದ್ದವು ಮತ್ತು ಶ್ರವಣದೋಷವಿತ್ತು. ವೈದ್ಯರು ಕೈಬಿಟ್ಟ ಮತ್ತು ವೈಜ್ಞಾನಿಕವಾಗಿ ಅಸಾಧ್ಯವಾದ ಪರಿಸ್ಥಿತಿಯಲ್ಲಿ, ಇವರು ದೇವರನ್ನು ನಂಬಿದರು ಮತ್ತು ಪ್ರಾರ್ಥಿಸಿದರು. 9 ವರ್ಷಗಳ ಪ್ರಾರ್ಥನೆಯ ನಂತರ, ಅವರ ಮಗ ಕೇಳುವ ಸಾಮರ್ಥ್ಯವನ್ನು ಪಡೆದನು. ವೈದ್ಯಕೀಯ ಲೋಕವು ಆಶ್ಚರ್ಯಚಕಿತವಾಯಿತು, ಮತ್ತು ಯೇಸುವಿನ ಹೆಸರು ಮಹಿಮೆಪಡಿಸಲ್ಪಟ್ಟಿತು. "ಆತನ ಹೆಸರು ಅದ್ಭುತಸ್ವರೂಪನು" ನೆಪೋಲಿಯನ್ ಹಿಲ್ ರವರ ಮಗ, ದೇವರು ತನ್ನ ಜೀವನದಲ್ಲಿ ಮಾಡಿದ ಉಪಕಾರಕ್ಕೆ ಮಹಿಮೆ ಸಲ್ಲಿಸುವ ರೀತಿಯಲ್ಲಿ, ಕಿವಿ, ಮೂಗು ಮತ್ತು ಗಂಟಲು ಸಾಧನಗಳನ್ನು ತಯಾರಿಸಿ ಒದಗಿಸಿ, ಇತರರ ಜೀವನದಲ್ಲಿ ಪ್ರಯೋಜನವಾಗುವಂತೆ ಮಾಡಿದ ಈ ಕೆಲಸವು ಇಂದಿಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯೇಸು ಕ್ರಿಸ್ತನು ಇಂದಿಗೂ ಜೀವಂತವಾಗಿದ್ದಾರೆ ಎಂದು ನೆಪೋಲಿಯನ್ ಸಾಬೀತುಪಡಿಸಿದರು.

 

ಯೇಸು ಈ ಭೂಮಿಯಲ್ಲಿದ್ದಾಗ, "ದೇವರ ಹೆಸರು ಮಹಿಮೆ ಹೊಂದುವಂತೆ ಈ ಮನುಷ್ಯನು ಈ ರೀತಿ ಜನಿಸಿದನು" ಎಂದು ಹೇಳಿರುವ ಪ್ರಕಾರ, ಅನೇಕ ಜನರು ರೋಗಗಳು ಮತ್ತು ಅನೇಕ ಅಂಗವೈಕಲ್ಯಗಳಿಂದ ಬಳಲುತ್ತಿರುವುದನ್ನು ನಾವು ನೋಡಿದಾಗ, ದೇವರ ಹೆಸರು ಮಹಿಮೆ ಹೊಂದುವುದಕ್ಕಾಗಿ ಈ ಸಮಸ್ಯೆಯನ್ನು ಇವರಿಗೆ ನೀಡಲಾಗಿದೆ ಎಂಬ ಆಲೋಚನೆಯೊಂದಿಗೆ ನಾವು ಅದನ್ನು ತೆಗೆದುಹಾಕಲು ಪ್ರಯತ್ನಿಸಿದರೆ, ಖಂಡಿತವಾಗಿಯೂ ಆ ಕೊರತೆ ನೀಗುತ್ತದೆ. ದೇವರ ಹೆಸರು ಮಹಿಮೆ ಹೊಂದುತ್ತದೆ. ಈ ಕ್ರಿಸ್ಮಸ್ ಶುಭದಿನಗಳಲ್ಲಿ ನಾವು ಆತನಿಗೆ ಉಡುಗೊರೆಯಾಗಿ ನಮ್ಮನ್ನು ಅರ್ಪಿಸಿಕೊಳ್ಳೋಣ. ಆತನನ್ನು ಮಹಿಮೆಪಡಿಸಲು ನಾವು ಆತನ ಕೆಲಸವನ್ನು ಮಾಡೋಣ. ಇದೇ ಯೇಸುವಿಗೆ ಸಂತೋಷವಾಗಿಯೂ ಮತ್ತು ವಿಶೇಷವಾಗಿಯೂ ಇದೆ. ಯೋಹಾನ 4:34 ರಲ್ಲಿ, "ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸಿ ಆತನ ಕೆಲಸ ವನ್ನು ಪೂರೈಸುವದೇ ನನ್ನ ಆಹಾರ ಅಂದನು. ಯೇಸುವಿಗೆ ಮೆಚ್ಚಿಕೆಯಾದದ್ದನ್ನು ಮತ್ತು ವಿಶೇಷವಾದದ್ದನ್ನು ಮಾಡುವುದೇ ನಾವು ಯೇಸುವಿಗೆ ನೀಡಬಹುದಾದ ಶ್ರೇಷ್ಠ ಕೊಡುಗೆಯಾಗಿದೆ. ಬ್ರಹ್ಮಾಂಡದ ಸೃಷ್ಟಿಕರ್ತ ನಿನ್ನೆ, ಇಂದು ಮತ್ತು ಎಂದೆಂದಿಗೂ ಮಾರ್ಪಡದವರಾಗಿದ್ದಾರೆ. ಯೇಸುವಿಗೇ ಮಹಿಮೆ ಉಂಟಾಗಲಿ! ಆಮೆನ್.

- Rev.D. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಒಡಿಶಾದಲ್ಲಿ ನಮ್ಮ ಸೇವೆಯ ಪರವಾಗಿ ಸ್ಥಳವನ್ನು ತೆಗೆದುಕೊಳ್ಳಲು ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin