Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.12.2025 (Kids Special)
Share:

By Village Missionary Movement

Sunday, 14-Dec-2025

ಧೈನಂದಿನ ಧ್ಯಾನ(Kannada) – 14.12.2025 (Kids Special)

 

ರೀಟಾ ಮತ್ತು ತಾತ

 

"ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು." - ಜ್ಞಾನೋಕ್ತಿ 19:17

 

Hello ಪುಟಾಣಿಗಳೇ, ನಿಮಗೆ ಬಸ್, ರೈಲು ಅಥವಾ ಕಾರಿನಲ್ಲೆಲ್ಲಾ ಜಾಲಿಯಾಗಿ ಪ್ರಯಾಣ ಮಾಡಲು ಇಷ್ಟತಾನೇ. ರಜೆ ಕೊಟ್ಟರೆ ಸಾಕು Tour ಗೆ ಅಥವಾ ನಿಮ್ಮ ಸಂಬಂಧಿಕರ ಮನೆಗೆ ಹೋಗಿಬಿಡ್ತೀರ ಅಲ್ವಾ.

 

ನಿಮ್ಮಂತೆಯೇ, ರೀಟಾ ತನ್ನ ತಾಯಿಯೊಂದಿಗೆ, ಸಂತೋಷದಿಂದ ಹಳ್ಳಿಯಲ್ಲಿರುವ ತನ್ನ ಅಜ್ಜಿ-ತಾತನ ಮನೆಗೆ ರೈಲಿನಲ್ಲಿ ಹೋದಳು. ದಾರಿಯಲ್ಲಿ, ಅವಳು ರೈಲಿನ ಕಿಟಕಿಯ ಮೂಲಕ ಪ್ರಕೃತಿಯನ್ನು ಆನಂದಿಸಿ ಸಂತೋಷದಿಂದ ಹೋದಳು. ಡಿಸೆಂಬರ್ ಆಗಿದ್ದದರಿಂದ ಅವಳು ಸ್ವೆಟರ್ ಧರಿಸಿದ್ದಳು. ಮರುದಿನ ಬೆಳಿಗ್ಗೆ, ಅವಳ ಅಜ್ಜಿ-ತಾತನ ಹಳ್ಳಿಗೆ ಬಂದು, ರೈಲ್ವೆ ನಿಲ್ದಾಣದಲ್ಲಿ ಇಳಿದು, ತನ್ನ ತಾಯಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ನಡೆದಳು. ರಸ್ತೆಬದಿಯಲ್ಲಿ ಒಬ್ಬ ವಯಸ್ಸಾದ ಮುದುಕ ಚಳಿಯಲ್ಲಿ ನಡುಗುತ್ತಾ ಭಿಕ್ಷೆ ಬೇಡುತ್ತಿದ್ದರು. ಕೆಲವು ಜನರು ಹಣ ನೀಡಿದರು. ಇನ್ನೂ ಕೆಲವರು ಕಂಡು ಕಾಣದಂತೆ ಹೋದರು. ರೀಟಾಳ ಗಮನ ಮುದುಕನ ಕಡೆಗೆ ತಿರುಗಿತು. ಅವಳು ತನ್ನ ತಾಯಿಗೆ, ಅಮ್ಮಾ, ಆ ಬಡ ಅಜ್ಜನಿಗೆ ಸಹಾಯ ಮಾಡೋಣ ಎಂದು ಹೇಳಿದಳು. ಅವಳ ತಾಯಿಯೂ ಅವಳಿಗೆ ಸ್ವಲ್ಪ ಹಣವನ್ನು ಕೊಟ್ಟರು. ರೀಟಾ ಅದನ್ನು ತೆಗೆದುಕೊಂಡು ಸಂತೋಷದಿಂದ ಅವರ ಬಳಿಗೆ ಹೋಗಿ, "ತಾತ ತಗೋಳಿ" ಎಂದು ಹೇಳಿ ಅವರಿಗೆ ಕೊಟ್ಟಳು. ಸ್ವಲ್ಪ ದೂರ ನಡೆದ ನಂತರ ಯಾರೋ ತಮ್ಮನ್ನು ಹಿಂಬಾಲಿಸುತ್ತಿದ್ದಾರೆಂದು ಭಾವಿಸಿದ ಅವರು ಹಿಂತಿರುಗಿ ನೋಡಿದರು. ಆ ಮುದುಕ ಅವರನ್ನು ನೋಡಿ ವೇಗವಾಗಿ ನಡೆದುಕೊಂಡು ಬಂದರು. ತಕ್ಷಣ, ರೀಟಾಳ ತಾಯಿ ಕೋಪದಿಂದ, ನಿಮಗೆ ಏನು ಬೇಕು? ಯಾಕೆ ನಮ್ಮನ್ನು ಹಿಂಬಾಲಿಸುತ್ತಿದ್ದೀರ? ಎಂದು ಕೇಳಿದರು. ಅದಕ್ಕೆ ಆ ಮುದುಕ ಕಣ್ಣೀರು ತುಂಬಿದ ಕಣ್ಣುಗಳಿಂದ ಅಮ್ಮಾ ಯಾರೂ ನನ್ನನ್ನು ಇದುವರೆಗೂ ತಾತ ಎಂದು ಕರೆದೇ ಇಲ್ಲ. ಭಿಕ್ಷುಕ ಎಂದು ಮಾತ್ರ ಕರೆದಿದ್ದಾರೆ. ಆದರೆ ನಿಮ್ಮ ಮಗಳು ನನ್ನನ್ನು ಪ್ರೀತಿಯಿಂದ ತಾತ ಎಂದು ಕರೆದಿದ್ದಕ್ಕೆ ನನಗೆ ಸಂತೋಷವಾಗಿದೆ. ನನಗೆ ಯಾರೂ ಇಲ್ಲ. ಇನ್ನೊಮ್ಮೆ ನನ್ನನ್ನು ತಾತ ಎಂದು ಕರೆಯುತ್ತೀರಾ? ಎಂದು ಹೇಳಿ ಅತ್ತರು. ತಕ್ಷಣ, ರೀಟಾ ತಾತ ಅಳಬೇಡಿ, ನಿಮಗೆ ಯೇಸು ಇದ್ದಾರೆ ಎಂದು ಹೇಳಿ, ಅವರಿಗೆ ಒಳ್ಳೆಯ ಡ್ರೆಸ್ ತೆಗೆದುಕೊಟ್ಟು, ಯೇಸುವಿನ ಪ್ರೀತಿಯ ಬಗ್ಗೆ ಹೇಳಿ ಅವರನ್ನೂ ತನ್ನ ಅಜ್ಜ ತಾತನ ಮನೆಗೆ ಕರೆದುಕೊಂಡು ಹೋದರು.

 

ಪುಟಾಣಿಗಳೇ, ನೀವು ಕೂಡ ಬಸ್ ನಿಲ್ದಾಣ ಮತ್ತು ರಸ್ತೆಬದಿಗಳಲ್ಲಿ ಯಾರೂ ಇಲ್ಲದೇ ಮಾನಸಿಕವಾಗಿ ಅಸ್ವಸ್ಥಗೊಂಡವರನ್ನು ನೋಡಿ ಕೀಳಾಗಿ ನೆನೆಸಬಾರದು. ಅವರನ್ನು ಪ್ರೀತಿಸಿ ನಿನ್ನಿಂದ ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡಬೇಕು. ಅದೇ ಯೇಸಪ್ಪನಿಗೆ ತುಂಬಾ ಇಷ್ಟ O.k ನಾ.

- Mrs.ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş